ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂದಗಿ | ಏಕಾಂಗಿಯಾಗಿ 100 ಸಸಿ ನೆಟ್ಟ ತಹಶೀಲ್ದಾರ್‌

Published 23 ಜೂನ್ 2024, 16:06 IST
Last Updated 23 ಜೂನ್ 2024, 16:06 IST
ಅಕ್ಷರ ಗಾತ್ರ

ಸಿಂದಗಿ: ಸಿಂದಗಿ ತಹಶೀಲ್ದಾರ್‌ ಪ್ರದೀಪಕುಮಾರ ಹಿರೇಮಠ ಅವರು ಏಕಾಂಗಿಯಾಗಿ ಎರಡು ದಿನಗಳ ಕಾಲ ಬೆಳಿಗ್ಗೆಯಿಂದ ಸಂಜೆಯ ವರೆಗೆ 100 ಸಸಿಗಳನ್ನು ನೆಟ್ಟಿರುವುದು ಅವರ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿದೆ.

ಪಟ್ಟಣದ ಸಾರಿಗೆ ಘಟಕದ ಸಿಬ್ಬಂದಿ ವಸತಿಗೃಹ ಆವರಣದಲ್ಲಿ ಯಾರ ಸಹಾಯವನ್ನೂ ಪಡೆಯದೇ 100 ಸಸಿಗಳನ್ನು ನೆಟ್ಟು ಗಮನ ಸೆಳೆದಿದ್ದಾರೆ.

‘ಶುಕ್ರವಾರ ತಮ್ಮ ಶ್ರಮದಾನ ಕಾರ್ಯ ಪ್ರಾರಂಭಿಸಿ, ಶನಿವಾರ ಸಂಜೆಯ ವರೆಗೂ ಸಲಿಕೆ ಹಿಡಿದುಕೊಂಡು ಎಲ್ಲ ತಗ್ಗುಗಳಲ್ಲಿ ಸಸಿಗಳನ್ನಿಟ್ಟು, ಮಣ್ಣಿನಿಂದ ಮುಚ್ಚಿ ಸಸಿಗಳ ರಕ್ಷಣೆಗಾಗಿ ಮುಳ್ಳುಗಳನ್ನು ಹಚ್ಚಿ ಪರಿಸರ ಪ್ರೇಮ ಮೆರೆದಿದ್ದಾರೆ’ ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ ಮೆಚ್ಚುಗೆಯ ಮಾತುಗಳನ್ನಾಡಿದರು.

‘ನಾನು ಈ ಕಾರ್ಯ ಪ್ರಚಾರಕ್ಕಾಗಿ ಮಾಡುತ್ತಿಲ್ಲ. ನನ್ನ ಆತ್ಮತೃಪ್ತಿಗಾಗಿ ಮಾಡುತ್ತಿರುವೆ. ಪ್ರತಿಯೊಬ್ಬ ಅಧಿಕಾರಿಗಳು ಪರಿಸರ ಉಳಿಸುವ ದಿಸೆಯಲ್ಲಿ ತಮ್ಮ ಕೈಲಾದಷ್ಟು ಮಟ್ಟಿಗೆ ಸೇವೆ ಮಾಡಬೇಕು’ ಎಂದು ತಹಶೀಲ್ದಾರ್‌ ಪ್ರದೀಪಕುಮಾರ ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT