ಶನಿವಾರ, ಸೆಪ್ಟೆಂಬರ್ 19, 2020
21 °C

ವಾಣಿಜ್ಯೋದ್ಯಮ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಸಂಘ ಸಂಸ್ಥೆಗಳು ಸದಾಕಾಲ ಚಟುವಟಿಕೆಯಿಂದಿದ್ದು, ಜನತೆ ಸಹಾಯ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಾಗ ಸಂಸ್ಥೆಗಳು ಸಾರ್ವಜನಿಕವಾಗಿ ಗುರುತಿಸಿಕೊಂಡು ಪ್ರಶಂಶೆಗೆ ಪಾತ್ರವಾಗಬಲ್ಲವು’ ಎಂದು ಹಿರಿಯ ಪತ್ರಕರ್ತ ಅಯ್ಯಣ್ಣ ಹುಂಡೇಕಾರ್ ಅಭಿಪ್ರಾಯಪಟ್ಟರು.

ನಗರದ ಮೌನೇಶ್ವರ ದೇವಸ್ಥಾನ ಆವರಣದಲ್ಲಿ ಸಮಿತಿ ವತಿಯಿಂದ ಜಿಲ್ಲಾ ವಾಣಿಜ್ಯೋದ್ಯಮ ಸಂಘಕ್ಕೆ ಎರಡನೇ ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾದ ಹನುಮಾನದಾಸ ಮುಂದಡ ಹಾಗೂ ಮಲ್ಲಿಕಾರ್ಜುನ ಹೂಗಾರ ಪ್ರಶಸ್ತಿ ಪಡೆದ ಪತ್ರಕರ್ತ ಲಕ್ಷ್ಮಿಕಾಂತ ಕುಲಕರ್ಣಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಂಘ ಸಂಸ್ಥೆಗಳು ಆಯಾ ಪ್ರದೇಶದ ಬೆಳವಣಿಗೆಗೆ ಗುಣಾತ್ಮಕ ಪ್ರಯತ್ನ ಮಾಡಬೇಕೆಂದು ಕಿವಿಮಾತು’ ಹೇಳಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ಹೆಂದೆ, ಸೋಮನಾಥ ಜೈನ್ ಹಾಗೂ ಪದಾಧಿಕಾರಿಗಳು ಮಾತನಾಡಿದರು.

ಸಿ.ಎಂ.ಪಟ್ಟೇದಾರ, ಸದಾಶಿವಪ್ಪ ಚಂಡ್ರಕಿ, ಮಹೇಶ್ಚಂದ್ರ ವಾಲಿ, ಚಂದಣ್ಣ ಹಾಲಭಾವಿ, ಬದ್ರಿನಾರಾಯಣ ವ್ಯಾಸ, ಸುಭಾಸ ಆಯಾರಕರ್, ವೀರಭದ್ರಯ್ಯ ಸ್ವಾಮಿ ಮಳಿಬಗಿಮಠ, ಚನ್ನಪ್ಪಗೌಡ ಮೋಸಂಬಿ, ಬಸವರಾಜ ರಾಜಾಪೂರ, ಗುರುಸಿದ್ದಪ್ಪ ಕೋರಿ, ಜಗದೀಶ ಪಂಡಿತ, ಸುರೇಶ ಮುಂದಡಾ, ಶೇಖರ ಅರಳಿ, ಬಸವಂತರಾಯ, ನಾಗಪ್ಪ ಸಜ್ಜನ್, ಲಿಂಗಣ್ಣ ಸಾಹುಕಾರ್, ನಾಗೇಂದ್ರ ಜಾಜಿ, ಬಾಬುರಾವ ಪಂಚಯತ್ರಿ, ಮೂರ್ತಿ ಅನಪೂರ, ಭೀಮಸೇನ್ ಪಾಂಚಾಳ, ಸಕ್ರಪ್ಪ ಮಾಮನಿ, ಮಲ್ಲಯ್ಯ ಪೂಜಾರಿ, ಅಂಬಾದಾಸ ಹೆಂದೆ, ತಿಪ್ಪಣ್ಣ ಉಪ್ಪಿನ, ಚಂದ್ರಕಾಂತ ಬಾಡದ, ದೇವು ವರ್ಕನಳ್ಳಿ, ಶಿವರಾಜ ಪಸಪುಲ್, ಶಶಿ ವಿಶ್ವಕರ್ಮ, ಬಂಗಾರೆಪ್ಪ ಪೂಜಾರಿ ಇದ್ದರು.

ಬಸವರಾಜ ಮೋಟ್ನಳ್ಳಿ ಸ್ವಾಗತಿಸಿದರು. ವಿಶ್ವನಾಥ ಸಿರವಾರ ನಿರೂಪಿಸಿದರು. ಶಾಂತಗೌಡ ಹಾರಣಗೇರಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.