ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅನ್ನ ಸೇವಿಸಿ ಪಕ್ಕದ ದೇಶಕ್ಕೆ ಅಭಿಮಾನ: ಶಾಸಕ ಬಸನಗೌಡ ಯತ್ನಾಳ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತ ಶೋಭಾಯಾತ್ರೆ
Published 12 ಮಾರ್ಚ್ 2024, 7:18 IST
Last Updated 12 ಮಾರ್ಚ್ 2024, 7:18 IST
ಅಕ್ಷರ ಗಾತ್ರ

ಯಾದಗಿರಿ: ದೇಶದ ಅನ್ನ, ನೀರು, ಗಾಳಿ ಸೇವಿಸಿ ಪಕ್ಕದ ದೇಶದ ಬಗ್ಗೆ ಅಭಿಮಾನ ಹೊಂದಿರುವವರ ಬಗ್ಗೆ ಯಾವ ರೀತಿ ಹೇಳಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ ಹೇಳಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ವೀರ ಸಾವರ್ಕರ್ ಸೇನಾ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಅವರು ಮಾತನಾಡಿದರು.

ವಿಧಾನಸೌಧದ ಬಳಿ ಪಾಕಿಸ್ತಾನದ ಜಿಂದಾಬಾದ್‌ ಕೂಗಿದವರು ಮಾಧ್ಯಮದಲ್ಲಿ ಅಷ್ಟು ನಿಖರವಾಗಿ ತಿಳಿದುಬಂದರೂ ಎಫ್‌ಎಸ್‌ಎಲ್‌ ವರದಿ ಬೇಕು ಎಂದು ಹೇಳುತ್ತಾರೆ. ಇದರಿಂದ ಗೊತ್ತಾಗುತ್ತದೆ ಸರ್ಕಾರ ಯಾರ ಪರವಾಗಿದೆ ಎಂದು ತಿಳಿದು ಬರುತ್ತದೆ ಎಂದು ಹೇಳಿದರು.

ಸಂವಿಧಾನ ಬದಲಾವಣೆ ಯಾರಪ್ಪನಿಂದಲೂ ಸಾಧ್ಯವಿಲ್ಲ. ದೇಶದವರು ಪಾನ್‌ಪರಾಗ್‌ ತಿಂದು ಉಗಳಿದರೂ ಪಾಕಿಸ್ತಾನ ಮುಳುಗಿ ಹೋಗುತ್ತದೆ ಎಂದರು.

ಜೈ ಶ್ರೀರಾಮ, ಮೋದಿ, ಮೋದಿ ಎಂದು ಜೈಕಾರ ಮೊಳಗಿತು.

ತಪ್ಪಿದ ಭಾರಿ ಅನಾಹುತ:

ಇದಕ್ಕೂ ಮುನ್ನ ಮೆರವಣಿಗೆ ವೇಳೆ ನಗರಸಭೆ ಬಳಿ ಶಿವಾಜಿ ಮಹಾರಾಜರ ಕಟೌಟ್‌ಗೆ ವಿದ್ಯುತ್‌ ತಂತಿ ತಗುಲಿಗೆ ಶಾರ್ಟ್‌ ಸರ್ಕ್ಯೂಟ್‌ ಆಗಿ ವಿದ್ಯುತ್‌ ಪರಿವರ್ತಕ ಸುಟ್ಟು ಹೋಯಿತು. ಸಾವಿರಾರು ಯುವಕರು ಡಿಜೆಗೆ ನೃತ್ಯ ಮಾಡುವಾಗಲೇ ಅವಘಡ ನಡೆಯಿತು. ಆದರೆ, ಯಾವುದೇ ಅನಾಹುತವಾಗಿಲ್ಲ.

ನಗರದ ಹಿರೇ ಅಗಸಿ ಬಳಿ ಶೋಭಾಯಾತ್ರೆ ವೇಳೆ ಡಿಜೆಗೆ ಹೆಜ್ಜೆ ಹಾಕುವಾಗ ಕಾಲ್ತುಳಿತದಿಂದ ಯುವಕರ ನಡುವೆ ಹೊಡೆದಾಟ ನಡೆಯಿತು. ಕೂಡಲೇ ಪೊಲೀಸರು ಎಚ್ಚೆತ್ತು ಯುವಕರನ್ನು ಚದುರಿಸಿದರು.

ಯಾದಗಿರಿಯಲ್ಲಿ ವೀರ ಸಾವರ್ಕರ್ ಸೇನಾ ವತಿಯಿಂದ ಶೋಭಾಯಾತ್ರೆ ನಡೆಯಿತು
ಯಾದಗಿರಿಯಲ್ಲಿ ವೀರ ಸಾವರ್ಕರ್ ಸೇನಾ ವತಿಯಿಂದ ಶೋಭಾಯಾತ್ರೆ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT