ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | 'ರಂಜಾನ್, ಯುಗಾದಿ ಸೌಹಾರ್ದತೆಯಿಂದ ಆಚರಿಸಿ'

ನಗರ ಠಾಣೆಯಲ್ಲಿ ಶಾಂತಿ ಪಾಲನಾ ಸಭೆಯಲ್ಲಿ ಡಿವೈಎಸ್‌ಪಿ ಸಲಹೆ
Published 6 ಏಪ್ರಿಲ್ 2024, 15:25 IST
Last Updated 6 ಏಪ್ರಿಲ್ 2024, 15:25 IST
ಅಕ್ಷರ ಗಾತ್ರ

ಯಾದಗಿರಿ: ರಂಜಾನ್ ಮತ್ತು ಯುಗಾದಿ ಹಬ್ಬವನ್ನು ನಗರದಲ್ಲಿ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಬಾಹಿರ ಕೃತ್ಯ ಎಸಗಿ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಅರುಣಕುಮಾರ ಕೊಳ್ಳೂರ ಹೇಳಿದರು.

ನಗರ ಠಾಣೆಯಲ್ಲಿ ಯುಗಾದಿ, ರಂಜಾನ್ ಹಬ್ಬದ ಅಂಗವಾಗಿ ಶನಿವಾರ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಹಬ್ಬವನ್ನು ಸರಳವಾಗಿ ಮತ್ತು ಶಾಂತಿಯುತವಾಗಿ ಆಚರಿಸಬೇಕು. ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ತಿಳಿಸಿದರು.

ಎಲ್ಲ ಧರ್ಮೀಯರು ಕೋಮು ಸೌಹಾರ್ದತೆಯಿಂದ ಬದುಕಿದರೆ ನಗರ-ಊರು ಶಾಂತಿ ತೋಟವಾಗುತ್ತದೆ. ಯಾವುದೇ ಕಾರಣಕ್ಕೂ ಭಾವೋದ್ವೇಗಕೊಳಗಾಗಿ ಕಾನೂನು ಕೈಗೆತ್ತಿಕೊಳ್ಳಬಾರದು. ಪ್ರತಿಯೊಂದು ಸಮಸ್ಯೆಗೂ ಕಾನೂನಿನಲ್ಲಿ ಪರಿಹಾರವಿದೆ. ಸಹೋದರತ್ವ ಭಾವದಿಂದ ಮೂಲಕ ಹಬ್ಬಗಳನ್ನು ಆಚರಣೆ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದರು.

ಸಿಪಿಐ ವೀರಾರಡ್ಡಿ, ನಗರಠಾಣೆ ಪಿಎಸ್‌ಐ ಮಂಜನಗೌಡ ಪಾಟೀಲ, ನಗರ ಠಾಣೆ ಪಿಎಸ್‌ಐ (ತನಿಖಾ ವಿಭಾಗ) ಅಮರ ಕುಲಕರ್ಣಿ, ಠಾಣಾ ಬರಹಗಾರ ಪೊಲೀಸ್ ಸಿಬ್ಬಂದಿ ಶಂಕರ, ದೌವಲಸಾಬ್‌, ಅಬ್ದುಲ್ ಬಾಷಾ, ಸಮಾಜದ‌ ಮುಖಂಡರಾದ ಎಂ.ಡಿ.ಗೌಸ್, ಮಹಮ್ಮದ್ ಅನವರ್ ಪಟೇಲ್, ಮನಸೂರ್ ಅಹಮ್ಮದ್, ಸುರೇಶ ಮಡ್ಡಿ, ಭೀಮು ಪೂಜಾರಿ, ಸೈದಪ್ಪ ಕೂಲೂರು, ಮಲ್ಲಯ್ಯ ಕಸಬಿ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT