ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಿಗ್ಗಿ ಅಗಸಿ ಕಾಮಗಾರಿ ಶೀಘ್ರ ಪ್ರಾರಂಭ

Published 14 ಮಾರ್ಚ್ 2024, 15:47 IST
Last Updated 14 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಶಹಾಪುರ: ನಗರದ ಶಿಥಿಲಗೊಂಡಿದ್ದ ದಿಗ್ಗಿ ಅಗಸಿ (ಕೋಟೆ) ಸ್ಮಾರಕದ ದುರಸ್ತಿ ಕಾರ್ಯಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ₹ 98 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲು ಪುರಾತತ್ವ ಇಲಾಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ದಿಗ್ಗಿ ಅಗಸಿ ಸ್ಮಾರಕ ಉಳಿಸಿಕೊಳ್ಳಲು ಪ್ರವಾಸೋದ್ಯಮ  ಸಚಿವ ಎಚ್.ಕೆ.ಪಾಟೀಲರು ಭೇಟಿ ನೀಡಿ ರೇಖಾಚಿತ್ರದಂತೆ ಅಂದಾಜು ಪಟ್ಟಿ ನೀಡಲು ಮೈಸೂರು ಪುರಾತತ್ವ ಇಲಾಖೆಗೆ ಸೂಚಿಸಿದ್ದರು. ಅದರಂತೆ ಪುರಾತತ್ವ ಇಲಾಖೆ ನೀಡಿದ ₹ 98 ಲಕ್ಷದ ರೇಖಾಚಿತ್ರದ ಅಂದಾಜಿನಂತೆ ಪ್ರವಾಸೋಧ್ಯಮ ಇಲಾಖೆಯಡಿ ₹98 ಲಕ್ಷ ಅನುದಾನ ಬಿಡುಗಡೆ ಮಾಡಿ ತುರ್ತು ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಆದೇಶದನ್ವಯ ಮೈಸೂರು ಪುರಾತತ್ವ ಇಲಾಖೆಯಡಿ ಬಹುತೇಕ ಒಂದು ವಾರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT