ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ದಸಂಸದಿಂದ ಜಿಲ್ಲಾ ಸಮಾವೇಶ 18ಕ್ಕೆ

Published 10 ಡಿಸೆಂಬರ್ 2023, 8:09 IST
Last Updated 10 ಡಿಸೆಂಬರ್ 2023, 8:09 IST
ಅಕ್ಷರ ಗಾತ್ರ

ಸೈದಾಪುರ: ಬಾಬಾ ಸಾಹೇಬರು ರಚಿಸಿದ ಸಂವಿಧಾನವನ್ನು ಬುಡಮೇಲು ಮಾಡಲು ಮುಂದಾಗಿರುವ ಸಂಘ-ಪರಿವಾರದ ಆಶಯವನ್ನು ವಿರೋಧಿಸುವ ಮೂಲಕ ಹೋರಾಟಕ್ಕೆ ಅಣಿಯಾಗಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮರಿಲಿಂಗಪ್ಪ ಬದ್ದೇಪಲ್ಲಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಅಂಬೇಡ್ಕರ್ ವಾದ) ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನದ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಎನ್ನುವ ಜಿಲ್ಲಾಮಟ್ಟದ ಜಾಗೃತಿ ಸಮಾವೇಶದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಅಂಬೇಡ್ಕರ್‌ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ನೋವುಗಳು ಸಮಾಜದಲ್ಲಿ ಮತ್ತೊಬ್ಬ ವ್ಯಕ್ತಿಯಾಗಲಿ, ಸಮುದಾಯವಾಗಲಿ ಅನುಭವಿಸಬಾರದು ಎಂದು ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ರಚಿಸಿ, ಸಂವಿಧಾನ ಶಿಲ್ಪಿ ಎಂಬ ಬಿರುದನ್ನು ಪಡೆದರು. ಆದರೆ ಇಂದಿನ ಸರ್ಕಾರ ಅದರ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದೆ. ಸಂವಿಧಾನವನ್ನು ರಕ್ಷಣೆ ಮಾಡಿದರೆ ಮಾತ್ರ ಸಮಾಜದಲ್ಲಿ ಪ್ರಜಾಪ್ರಭುತ್ವದ ಉಳಿವು ಸಾಧ್ಯ ಎಂದರು.
ತಾಲ್ಲೂಕು ಪ್ರಧಾನ ಸಂಚಾಲಕ ನಿಂಗಣ್ಣ ಬೀರನಾಳ ಮಾತನಾಡಿ, ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶವನ್ನು ಡಿ.18ರಂದು ಬೆಳಿಗ್ಗೆ 11:30ಕ್ಕೆ ಯಾದಗಿರಿ ಪ್ರವಾಸಿ ಮಂದಿರದಿಂದ ಬೈಕ್ ರ‍್ಯಾಲಿ ಮೂಲಕ ಜಾಥಾ ಸಾಗಿ, ಜಿಲ್ಲಾ ಮಹರ್ಷಿ ವಾಲ್ಮೀಕಿ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸುವರು. ಅಲ್ಲದೆ ಜಿಲ್ಲೆಯ ಎಲ್ಲಾ ಶಾಸಕರು, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ, ವಿಭಾಗೀಯ, ಜಿಲ್ಲಾ, ತಾಲ್ಲೂಕು ಹಾಗೂ ವಲಯಮಟ್ಟದ ಸಮಿತಿಯ ಮುಖಂಡರು ಸೇರಿದಂತೆ ಸುಮಾರು 2 ರಿಂದ 3 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಸೈದಾಪುರ ವಲಯದಿಂದ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸೈದಾಪುರ ವಲಯಾಧ್ಯಕ್ಷ ದೇವಿಂದ್ರಪ್ಪ ಕೂಡ್ಲೂರು, ಅನೀಲ್‍ಕುಮಾರ ಸಾಕ್ರೆ ಯಾದಗಿರಿ, ವಿಜಯಕುಮಾರ, ಚೆನ್ನಮಲ್ಲಪ್ಪ ಚೇಗುಂಟಿ, ಮಲ್ಲಪ್ಪ ಕ್ಯಾತ್ನಾಳ, ಮಲ್ಲಿಕಾರ್ಜುನ, ಹಣಮಂತ ಶೆಟ್ಟಿಹಳ್ಳಿ, ಭೀಮು ಮುನಗಾಲ, ಮಲ್ಲಿಕಾರ್ಜುನ, ಹಾಜಪ್ಪ, ಸಾಬಣ್ಣ ಸಂಗವಾರ, ಬಸವರಾಜ, ಹಣಮಂತ ರಾಚನಳ್ಳಿ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT