ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ | ಪೀರಿಯಡ್ ಸ್ನೇಹಿ ಗ್ರಾಮ ಅಭಿಯಾನಕ್ಕೆ ಚಾಲನೆ

Published 30 ಮೇ 2024, 15:47 IST
Last Updated 30 ಮೇ 2024, 15:47 IST
ಅಕ್ಷರ ಗಾತ್ರ

ಸುರಪುರ: ನಗರದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ವತಿಯಿಂದ ಮಾನಸಿಕ ಆರೋಗ್ಯ-ಹೈಜೀನ್ (ಮುಟ್ಟಿನ ದಿನ) ಆಚರಿಸಲಾಯಿತು.

ಪೀರಿಯಡ್ ಸ್ನೇಹಿ ಗ್ರಾಮ ಅಭಿಯಾನಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ‘ಮುಟ್ಟು ಎನ್ನುವುದು ಮಹಿಳೆಯರಿಗೆ ಪ್ರತಿ ತಿಂಗಳು ಬರುವ ನೈಸರ್ಗಿಕ ಪ್ರಕ್ರಿಯೆ. ಇದು ಸಹಜ ಪ್ರಕ್ರಿಯೆಯಾದರೂ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 28 ರಂದು ಮುಟ್ಟಿನ ನೈರ್ಮಲ್ಯ ದಿನ ಆಚರಿಸಲಾಗುತ್ತದೆ’ ಎಂದರು.

‘ಮುಟ್ಟಿನ ಆರೋಗ್ಯದ ಮಹತ್ವ, ಮುಟ್ಟಿನ ದಿನಗಳಲ್ಲಿ ಕಾರಣವಾಗುವ ಸಮಸ್ಯೆ, ವಿಚಾರಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಟ್ಟಿನ ನೈರ್ಮಲ್ಯ ದಿನ ಆಚರಿಸಲಾಗುತ್ತದೆ. ಈ ವರ್ಷದ ಥೀಮ್ ಪೀರಿಯಡ್ ಸ್ನೇಹಿ ವಿಶ್ವವಾಗಿದೆ. ಕರ್ನಾಟಕ ಹೆಲ್ತ್ ಪ್ರೊಮೋಷನ್ ಟ್ರಸ್ ಪೀರಿಯಡ್ ಸ್ನೇಹಿ ಗ್ರಾಮ ಮಾಡುವ ಹೆಮ್ಮೆಯನ್ನು ಹೊತ್ತಿದೆ’ ಎಂದರು.

‘ಪೀರಿಯಡ್ ಸ್ನೇಹಿ ಗ್ರಾಮ ಅಭಿಯಾನವನ್ನು ಸುರಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯ ಹಳ್ಳಿಗಳಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ. ಅಭಿಯಾನಕ್ಕೆ ಎಲ್ಲರು ಸಹಕರಿಸುತ್ತಿದ್ದಾರೆ’ ಎಂದರು.

ಅಭಿಯಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕೆಎಚ್‍ಪಿಡಿ ಸಿಬ್ಬಂದಿ, ಪೋಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT