ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

9ಎಂಎಂ ಮಳೆ, ಸಿಡಿಲು ಬಡಿದು ವ್ಯಕ್ತಿ, ಕುರಿಗಳು ಸಾವು
Published 13 ಮೇ 2024, 16:19 IST
Last Updated 13 ಮೇ 2024, 16:19 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಹಾಗೂ ಸೋಮವಾರ ಉತ್ತಮ ಮಳೆಯಾಗಿದೆ. ಸಿಡಿಲಿನ ಬಡಿತಕ್ಕೆ ಶಹಾಪುರದಲ್ಲಿ ಒಬ್ಬ ಕುರಿಗಾಹಿ ಹಾಗೂ 10 ಕುರಿಗಳು ಮೃತಪಟ್ಟಿದ್ದರೆ, ವಡಗೇರಾದಲ್ಲಿ 7 ಕುರಿಗಳು ಸಿಡಿಲಿಗೆ ಬಲಿಯಾಗಿವೆ.

ಸೋಮವಾರ ಬೆಳಗಿನ ಜಾವ 9 ಎಂ.ಎಂ ಮಳೆಯಾಗಿದೆ. ಸುಮಾರು 4 ಗಂಟೆಗೆ ಆರಂಭವಾದ ಸಿಡಿಲು ಗುಡುಗು ಸಹಿತ ಮಳೆ, ಒಂದು ಗಂಟೆ ಸುರಿಯಿತು. ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 1.7 ಎಂ.ಎಂ ಮಳೆಯಾಗಲಿದೆ ಎಂದು ವರದಿಯಿತ್ತು. ಆದರೆ, 9 ಎಂಎಂ ಮಳೆಯಾಗಿದೆ.

ತಾಲ್ಲೂಕಿನ ಯರಗೋಳ ವಲಯದಲ್ಲಿ ರಾತ್ರಿ ಜೋರು ಮಳೆಯಾಗಿದ್ದು, ಬೆಳಗಿನ ಸಮಯ ತುಂತುರು ಮಳೆ ಸುರಿಯಿತು.

ಸುರಪುರದಲ್ಲಿ ಬೆಳಗಿನ ಜಾವದಲ್ಲಿ ಉತ್ತಮ ಮಳೆ ಆಗಿದೆ. ವಾತಾವರಣ ಸಂಪೂರ್ಣ ತಂಪಾಗಿದೆ. ಶಹಾಪುರದಲ್ಲಿ ಬೆಳಗಿನ ಜಾವ ಉತ್ತಮ ಮಳೆಯಾಗಿದೆ. ಹುಣಸಗಿ, ನಾರಾಯಣಪುರ, ಸೈದಾಪುರದಲ್ಲಿ ತುಂತುರು ಮಳೆ, ಕೆಂಭಾವಿಯಲ್ಲಿ ಮೋಡ ಕವಿದ ವಾತಾವರಣ ಇತ್ತು.

ತಾಲ್ಲೂಕುಗಳಲ್ಲಿ ಮಳೆ ವಿವರ: ಜಿಲ್ಲೆಯ ವಡಗೇರಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಎಂಎಂ ಮಳೆಯಾಗಿದೆ. ಗುರುಮಠಕಲ್‌ ತಾಲ್ಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ. ಶಹಾಪುರ 17 ಎಂಎಂ, ಸುರಪುರ 6, ಯಾದಗಿರಿ 6.7, ವಡಗೇರಾ 18.4, ಹುಣಸಗಿ 3.7 ಎಂಎಂ ಮಳೆಯಾಗಿದೆ. 

ಶಹಾಪುರ ತಾಲ್ಲೂಕಿನ ದೋರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 32.8 ಎಂಎಂ, ಹೈಯಾಳ ಬಿ 11.9, ಸೈದಾಪುರ 9.4 ಹೆಚ್ಚು ಮಳೆ ಸುರಿದಿದೆ.

ಯಾದಗಿರಿ ನಗರ ಹೊರವಲಯದ ಗುರುಸಣಗಿ ಬ್ರಿಜ್‌ ಕಂ ಬ್ಯಾರೇಜ್‌ನಲ್ಲಿ ಮಳೆ ನೀರು ನಿಂತಿತು
ಯಾದಗಿರಿ ನಗರ ಹೊರವಲಯದ ಗುರುಸಣಗಿ ಬ್ರಿಜ್‌ ಕಂ ಬ್ಯಾರೇಜ್‌ನಲ್ಲಿ ಮಳೆ ನೀರು ನಿಂತಿತು
ಯಾದಗಿರಿ ನಗರ ಹೊರವಲಯದ ಗುರುಸಣಗಿ ಬ್ರಿಜ್‌ ಕಂ ಬ್ಯಾರೇಜ್‌ ಸಮೀಪದ ಗದ್ದೆದ ಜಮೀನಿನಲ್ಲಿ ಮಳೆ ನೀರು ನಿಂತಿತು
ಯಾದಗಿರಿ ನಗರ ಹೊರವಲಯದ ಗುರುಸಣಗಿ ಬ್ರಿಜ್‌ ಕಂ ಬ್ಯಾರೇಜ್‌ ಸಮೀಪದ ಗದ್ದೆದ ಜಮೀನಿನಲ್ಲಿ ಮಳೆ ನೀರು ನಿಂತಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT