ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕೊನೆಯ ಹಂತದವರೆಗೂ ಎಚ್ಚರಿಕೆಯಿರಲಿ’

Published 13 ಏಪ್ರಿಲ್ 2024, 15:42 IST
Last Updated 13 ಏಪ್ರಿಲ್ 2024, 15:42 IST
ಅಕ್ಷರ ಗಾತ್ರ

ಗುರುಮಠಕಲ್: ‘ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದವರು ತುಂಬಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ. ಚುನಾವಣೆಯ ಕೊನೆಯ ಹಂತದವರೆಗೂ ಸೂಕ್ಷ್ಮತೆಯನ್ನು ಮತ್ತು ನಿಯಮ ಪಾಲನೆಗೆ ಆದ್ಯತೆ ನೀಡಿ’ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಲೆಕ್ಕಪತ್ರ ವೀಕ್ಷಕ ಜಿ.ಧರಣಿನಾಥ ವಿ.ಸಿ. ಸಲಹೆ ನೀಡಿದರು.

ಶನಿವಾರ ಪಟ್ಟಣದ ಸಹಾಯಕ ಚುನಾವಣಾಧಿಕಾರಿ ಕಚೇರಿ (ತಹಶೀಲ್ದಾರ್ ಕಚೇರಿ)ಗೆ ಭೇಟಿ ನೀಡಿ, ಲೆಕ್ಕ-ಪತ್ರದ ನಮೂನೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಸದ್ಯ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡುತ್ತಿದ್ದ್ದು ಚುನಾವಣೆ ಮುಗಿಯುವವರೆಗೂ ಈ ಶಿಸ್ತುನ್ನು ಕಾಯ್ದುಕೊಳ್ಳಬೇಕು’ ಎಂದರು.

ಎಆರ್‌ಒ. ವಿರೇಶ ಬಿರಾದರ, ತಹಶೀಲ್ದಾರ್ ಶ್ರೀನಿವಾಸ ಚಾಪೆಲ್, ಲೆಕ್ಕಪತ್ರ ವಿಭಾಗಾಧಿಕಾರಿ ಪ್ರವೀಣಕುಮಾರ ಸೇರಿದಂತೆ ಎ.ಆರ್.ಒ. ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT