ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ ಸಿಬ್ಬಂದಿ ಬಗ್ಗೆ ದೂರು: ಶಾಸಕ ಗರಂ

Published 30 ಮಾರ್ಚ್ 2024, 14:36 IST
Last Updated 30 ಮಾರ್ಚ್ 2024, 14:36 IST
ಅಕ್ಷರ ಗಾತ್ರ

ಯರಗೋಳ: ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಯಾದಗಿರಿ ಜಿಲ್ಲಾ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಆಕ್ರೋಶಗೊಂಡು ಮಾತನಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಮೀಪದ ಬಾಚವಾರ ತಾಂಡಾದ ರೋಗಿಯೊಬ್ಬರು ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರಿಗೆ ಕರೆ ಮಾಡಿ ಯಾದಗಿರಿ ನಗರದ ಜಿಲ್ಲಾ ಆಸ್ಪತ್ರೆ ಆರೋಗ್ಯ ಸಿಬ್ಬಂದಿಗಳ ನಿರ್ಲಕ್ಷ, ದುರ್ವರ್ತನೆ ಕುರಿತು ತನ್ನ ನೋವನ್ನು ತೋಡಿದ್ದರು. ಕೂಡಲೇ ಜಿಲ್ಲಾ ಆಸ್ಪತ್ರೆಗೆಹೋದ ಶಾಸಕ ಕಂದಕೂರ ಅಲ್ಲಿರುವ ಸ್ಟಾಪ್ ನರ್ಸ್ ಶಿವಕುಮಾರ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

ಏನ್ರಿ, ಸ್ಟಾಪ್ ನರ್ಸ್ ಯಾರು?, ಶಾಸಕರ ಜತೆಯಲ್ಲೇ ಈ ರೀತಿ ಮಾತನಾಡುವ ನೀಮ್ಮ ವರ್ತನೆ ರೋಗಿಗಳ ಜತೆ ಹೇಗಿರಬೇಕು?, ನಿಮಗೆ ಯಾರೂ ಹೇಳೋರು, ಕೇಳೋರು ಇಲ್ವಾ? ಸರ್ಕಾರಿ ದವಾಖಾನೆಯಲ್ಲಿ ಮನುಷ್ಯತ್ವ ಅನ್ನೋದು ಏನಾದ್ರೂ ಇದೆಯಾ?, ಜಿಲ್ಲಾ ಆಸ್ಪತ್ರೆಗೆ ಆಗಮಿಸುವ ರೋಗಿಗಳು ಶ್ರೀಮಂತರಲ್ಲ!, ಒಬ್ಬ ರೋಗಿಗೆ ಚಿಕಿತ್ಸೆ ಕೊಡಿಸಬೇಕಾದ್ರೆ, ಶಾಸಕರೆ ಕರೆ ಮಾಡಬೇಕಾ, ಮನುಷ್ಯತ್ವ, ಅನ್ನೋದೇ ಮರೆತುಬಿಟ್ರಾ’ ಎಂದು ತರಾಟೆ ತೆಗೆದುಕೊಂಡಿದ್ದಾರೆ.

‘ಹೇ ಯಾರಪ್ಪ ನೀನು? ಏನ್ ಕೆಲಸ ಮಾಡ್ತಾ ಇದ್ದೀಯಾ, ಯಾರು ನಿಮ್ಮ ಮುಖ್ಯಸ್ಥರು? ರೋಗಿಗಳ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ. ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ರಾಯಚೂರು, ಕಲಬುರಗಿಗೆ ಹೋಗಿ ಅನ್ನುತ್ತೀರಾ ? ಇದು ಸರಿ ಅಲ್ಲ’ ಎಂದು ಎಚ್ಚರಿಸಿದರು.

‘ರೋಗಿಗಳಿಗೆ ಆಂಬುಲೆನ್ಸ್ ಸೇವೆ ಕೊಡೋದಕ್ಕೆ ಆಗೋದಿಲ್ಲ ಅಂದ್ರೆ, ಹೇಗೆ.? ಯಾಕೆ ಇಲ್ಲಿ ಕಾರ್ಯನಿರ್ವಹಿಸುವಿರಿ, ಬಡವರ ಹತ್ತಿರ ದುಡ್ಡು ಇರುವುದಿಲ್ಲ, ಕನಿಷ್ಠ ತಿಳುವಳಿಕೆಯೂ ಸಹ ಇಲ್ಲವಾ?’ ಎಂದು ಗುಡುಗಿದರು.

ಆರೋಗ್ಯ ಸಿಬ್ಬಂದಿ ರಾಜಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT