ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ | ವಕೀಲ ಆತ್ಮಹತ್ಯೆ!

Published 2 ಏಪ್ರಿಲ್ 2024, 16:04 IST
Last Updated 2 ಏಪ್ರಿಲ್ 2024, 16:04 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ಕಕ್ಕೇರಾ ಪಟ್ಟಣದ ವಕೀಲ ಸಲೀಮಪಾಶಾ ಖಾಜಿ(41) ಆತ್ಮಹತ್ಯೆಗೆ ಶರಣಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸುರಪುರ ಕೋರ್ಟ್‍ನಲ್ಲಿ ಅಭ್ಯಾಸ ಮಾಡುತ್ತಿದ್ದ ಸಲೀಮಪಾಶಾ ಅವರು, ಮಾ.29ರಂದು ಸುರಪುರಕ್ಕೆ ಹೋಗಿ ಬರುತ್ತೇನೆ ಎಂದು ಹೋದವರು ಪತ್ತೆಯಾಗಿರಲಿಲ್ಲ. ಕಳೆದ 6 ತಿಂಗಳ ಹಿಂದೆ ಸಲೀಮಪಾಶಾ ತನಗೆ ಕೆಲಸದ ಒತ್ತಡ ಬಹಳ ಇದೆ ಎಂದು ಖಿನ್ನತೆ ಹೊಂದಿದ್ದರು ಎನ್ನಲಾಗಿದೆ.

ಪತ್ನಿ ಫಜೀಲಾ ಮುಬೀನ್ ಮಾ.30ರಂದು ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಏ. 1ರಂದು ಸಲೀಮಪಾಶಾ ಅವರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಸುರಪುರಕ್ಕೆ ಸಮೀಪದ ರತ್ತಾಳ ಗ್ರಾಮದ ಗುಡ್ಡದಲ್ಲಿ ಪತ್ತೆಯಾಗಿದೆ. ಪಕ್ಕದಲ್ಲಿ ಕ್ರ್ರಿಮಿನಾಶಕದ ಬಾಟಲಿಯೂ ದೊರಕಿದೆ ಎನ್ನಲಾಗಿದೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಅಂತ್ಯಕ್ರಿಯೆ ಕಕ್ಕೇರಾ ಪಟ್ಟಣದಲ್ಲಿ ಮಂಗಳವಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT