ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಸಿದವಳು ಸಿಗದ ಹತಾಷೆ: ಇಬ್ಬರನ್ನು ಕೊಲೆ ಮಾಡಿದವನಿಗೆ ಜೀವಾವಧಿ ಶಿಕ್ಷೆ

Published 3 ಏಪ್ರಿಲ್ 2024, 15:28 IST
Last Updated 3 ಏಪ್ರಿಲ್ 2024, 15:28 IST
ಅಕ್ಷರ ಗಾತ್ರ

ಯಾದಗಿರಿ: ತಾನು ಪ್ರೀತಿ ಮಾಡಿದವಳು ಸಿಗದಿದ್ದಾಗ ಹೊಂಚು ಹಾಕಿ ಇಬ್ಬರನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಬಿ.ಎಸ್.ರೇಖಾ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಬಸವರಾಜ ಭೀಮರಾಯ ಪೂಜಾರಿ ಜೀವಾವಧಿ ಶಿಕ್ಷೆ ಒಳಗಾದ ವ್ಯಕ್ತಿ.

ಬಸವರಾಜ ತನ್ನದೇ ಗ್ರಾಮದ ಭಾರತಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಭಾರತಿ ಕುಟುಂಬದವರು ಇದನ್ನು ಲೆಕ್ಕಿಸದೆ ಗುರುನಾಥರಡ್ಡಿ ಎನ್ನುವವರ ಜತೆ ವಿವಾಹ ಮಾಡಿದ್ದರು. ಗುರುನಾಥರಡ್ಡಿಗೆ ಬಸವರಾಜ ಕೊಲೆ ಬೆದರಿಕೆ ಹಾಕಿದ್ದ.

2014 ಮೇ 29 ರಂದು ರಸ್ತಾಪುರ ಗ್ರಾಮಕ್ಕೆ ಭಾರತಿ ಹಾಗೂ ಗುರುನಾಥರಡ್ಡಿ ಅವರು ಬಂದಿರುವುದನ್ನು ಖಾತರಿ ಪಡಿಸಿಕೊಂಡ ಬಸವರಾಜ, ಕ್ರೂಜರ್ ಜೀಪು ತೆಗೆದುಕೊಂಡು ಅದರಲ್ಲಿ ಹರಿತವಾದ ಚಾಕು, ಖಾರದ ಪುಡಿ, ಕ್ರಿಮಿನಾಶಕ ಔಷಧಿ ಹಾಕಿಕೊಂಡು ಭಾರತಿ ಮತ್ತು ಗುರುನಾಥರೆಡ್ಡಿ ಅವರು ಶಹಾಪುರಕ್ಕೆ ಕಾರಿನಲ್ಲಿ ಹೋಗುವುದನ್ನು ಕಾಯುತ್ತಾ ಹಿಂಬಾಲಿಸಿಕೊಂಡು ಹೋಗಿದ್ದ. ಆದರೆ, ಅದೇ ದಿನ ಭಾರತಿ ಹಾಗೂ ಗುರುನಾಥರಡ್ಡಿ ಮರಳಿ ಕಾರಿನಲ್ಲಿ ಶಹಾಪುರದಿಂದ ರಸ್ತಾಪುರಕ್ಕೆ ಆಗಮಿಸುವುದನ್ನು ಹಿಂಬಾಲಿಸಿಕೊಂಡು ಬಸವರಾಜ ತನ್ನ ಕ್ರೂಜರ್ ಜೀಪ್‌ನಲ್ಲಿ ಆಗಮಿಸಿ ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ಹತ್ತಿರ ಭಾರತಿ ಹಾಗೂ ಗುರುನಾಥರಡ್ಡಿ ಅವರು ಇದ್ದ ಕಾರಿಗೆ ಓವರ್ ಟೇಕ್ ಮಾಡುವ ನೆಪದಲ್ಲಿ ಕಾರಿಗೆ ಜೋರಾಗಿ ಗುದ್ದಿ ಭಾರತಿ ಹಾಗೂ ಗುರುನಾಥರಡ್ಡಿ ಇಬ್ಬರನ್ನು ಕೊಲೆ ಮಾಡಿದ್ದ.

ಶಹಾಪುರ ಠಾಣೆಯ ಅಂದಿನ ಪಿಐ ಜೆ.ಎಸ್.ನ್ಯಾಮಗೌಡರ್‌ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು. ಫಿರ್ಯಾದಿದಾರ ಪರವಾಗಿ ಸರ್ಕಾರಿ ಅಭಿಯೋಜಕ ವಿಶ್ವನಾಥ ಉಭಾಳೆ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT