ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಅದ್ಧೂರಿಯಾಗಿ ನಡೆದ ಮಲ್ಲಯ್ಯನ ಜಾತ್ರೆ

Published 13 ಜನವರಿ 2024, 5:57 IST
Last Updated 13 ಜನವರಿ 2024, 5:57 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಕೌಳೂರು ಗ್ರಾಮದ ಆರಾಧ್ಯ ದೈವ ಮಲ್ಲಯ್ಯನ ಜಾತ್ರೆ ಶುಕ್ರವಾರ ಸಹಸ್ರಾರು ಭಕ್ತರ ಮಧ್ಯೆ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಜರುಗಿತು.

ಮಲ್ಲಯ್ಯನ ದೇವಸ್ಥಾನದಲ್ಲಿ ಪೂಜಾರಿಗಳಿಂದ ವಿಶೇಷ ಪೂಜೆ ನಡೆಯಿತು. ನಂತರ ದೇವರ ಮೂರ್ತಿಯನ್ನು ವಿವಿಧ ಸಂಗೀತ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿಯಲ್ಲಿ ಉತ್ಸವ ಮಾಡಲಾಯಿತು. ಆಂಜನೇಯ ದೇವಸ್ಥಾನದ ಹತ್ತಿರವಿರುವ ಪಾದಗಟ್ಟೆಯಲ್ಲಿ ಸರಪಳಿ ಹರಿಯುವ ಕಾರ್ಯಕ್ರಮ ಜರುಗಿತು.

ಮೆರವಣಿಗೆ ನಂತರ ದೇವಸ್ಥಾನ ತಲುಪಿದ ನಂತರ ವಿಗ್ರಹವನ್ನು ಪೂಜಾ ಕೈಂಕರ್ಯಗಳೊಂದಿಗೆ ಮೂಲ ಸ್ಥಳದಲ್ಲಿ ಇಡಲಾಯಿತು.

ಮಲ್ಲಯ್ಯನ ಚರಿತ್ರೆ ಸಾರುವ ಭಜನಾ ಕಾರ್ಯಕ್ರಮ ರಾತ್ರಿ ಜರುಗಿತು.

ಮೆರವಣಿಗೆಯಲ್ಲಿ ಗ್ರಾಮದ ಚನ್ನವೀರಯ್ಯಸ್ವಾಮಿ ಹಿರೇಮಠ, ಹಿರಿಯ ಮುಖಂಡರಾದ ಮಲ್ಲಿಕಾರ್ಜುನರಡ್ಡಿ ಮಾಲಿ ಪಾಟೀಲ, ಶರಣಪ್ಪಗೌಡ ಪಾಟೀಲ, ಮಲ್ಲಣಗೌಡ ಹಳಿಮನಿ, ಭೀಮರಡ್ಡಿ ಪಾಟೀಲ, ಸಿದ್ದಪ್ಪ ಪೂಜಾರಿ, ಕುಂಟಪ್ಪ ಪೂಜಾರಿ, ಬಸವರಾಜ ಗಡ್ಡೆಸೂಗುರ, ಬಸಪ್ಪ ಹಾಳಗಟ್ಟಿ, ಬಸವರಾಜ ಸುರಪುರ, ಭೀಮಪ್ಪ, ದೇವಿಂದ್ರಪ್ಪ ಮಸ್ಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು.

ಆಂಜನೇಯ ದೇವಸ್ಥಾನ ಹಿಂದುಗಡೆ ಗ್ರಾಮೀಣ ಕ್ರೀಡೆಗಳಾದ ಕೈಕುಸ್ತಿ, ಉಸುಕಿನ ಚೀಲ ಭಾರ ಎತ್ತುವ ಸ್ಪರ್ಧೆ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳು ನಡೆದವು. ವಿಜೇತರಾದವರಿಗೆ ಬೆಳ್ಳಿ, ಬಂಗಾರ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT