ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಬೃಹತ್ ಪ್ರತಿಭಟನಾ ಮೆರವಣಿಗೆ

Last Updated 29 ಸೆಪ್ಟೆಂಬರ್ 2020, 6:47 IST
ಅಕ್ಷರ ಗಾತ್ರ

ಸುರಪುರ: ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ವೇದಿಕೆಯ ಸಾಮೂಹಿಕ ನಾಯಕತ್ವ ತಾಲ್ಲೂಕು ಸಮಿತಿ ಸುರಪುರ-ಹುಣಸಗಿ ಸೋಮವಾರ ಕರೆ ನೀಡಿದ್ದ ಸುರಪುರ ಬಂದ್ ಕರೆ ಶಾಂತಿಯುತವಾಗಿತ್ತು.

ವ್ಯಾಪಾರಿಗಳು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಸಹಕರಿಸಿದರು. ಸಾರಿಗೆ ಸಂಚಾರ ಯಥಾಪ್ರಕಾರವಿತ್ತು. ನಗರದಲ್ಲಿ ಪ್ರತಿಭಟನಾಕಾರರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಗಾಂಧೀಜಿ ವೃತ್ತದಲ್ಲಿ ಸಮಾವೇಶಗೊಂಡ ಹೋರಾಟಗಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಹಾದೇವಮ್ಮ ಬೇವಿನಾಳಮಠ ಮಾತನಾಡಿ, ‘ಕಾರ್ಪೋರೇಟ್ ವಲಯಗಳ ಪರ ನೀತಿಗಳನ್ನು ತರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಕಡೆಗಣಿಸಿವೆ. ಎಂದು ಆರೋಪಿಸಿದರು.

ದೇವಿಂದ್ರಪ್ಪ ಪತ್ತಾರ ಮಾತನಾಡಿದರು.

ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ಸುಫೀಯಾ ಸುಲ್ತಾನ್ ಅವರಿಗೆ ಸಲ್ಲಿಸಲಾಯಿತು.

ಅಯ್ಯಣ್ಣ ಹಾಲಬಾವಿ, ರಾಜಾ ವೇಣುಗೋಪಾಲನಾಯಕ, ರಾಜಾ ಕುಮಾರನಾಯಕ, ರಾಜಾ ಸಂತೋಷನಾಯಕ, ರಾಜಾ ರಾಮಪ್ಪನಾಯಕ(ಜೆಜಿ), ನಿಂಗಣ್ಣ ಬಾದ್ಯಾಪುರ, ಉಸ್ತಾದ್ ವಜಾಹತ್ ಹುಸೇನ್, ನಾಗಣ್ಣ ಕಲ್ಲದೇವನಹಳ್ಳಿ, ಮಲ್ಲಿಕಾರ್ಜುನ ಕ್ರಾಂತಿ, ಮಾನಪ್ಪ ಕಟ್ಟಿಮನಿ, ಅಹ್ಮದ್ ಪಠಾಣ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ಅಬ್ದುಲ್ ಅಲಿಂ ಗೋಗಿ, ರಾಹುಲ್ ಹುಲಿಮನಿ, ಭೀಮರಾಯ ಸಿಂದಗೇರಿ, ರಾಮಣ್ಣ ಕಲ್ಲದೇವನಹಳ್ಳಿ, ಹಣಮಂತ್ರಾಯ ಚಂದ್ಲಾಪುರ, ರುದ್ರಯ್ಯ ಮೇಟಿ, ಸಾಹೇಬಗೌಡ ಮದಲಿಂಗನಾಳ, ವೆಂಕಟೇಶನಾಯಕ ಭೈರಿಮರಡ್ಡಿ, ರಾಮುನಾಯಕ ಅರಳಹಳ್ಳಿ, ಮೊಹ್ಮದ್ ಮೌಲಾಲಿ ಸೌದಾಗರ್, ಪ್ರಕಾಶ ಅಲ್ಹಾಳ, ಮಾಳಪ್ಪ ಕಿರದಳ್ಳಿ, ದೇವಿಂದ್ರಪ್ಪಗೌಡ ಮಾಲಿ ಪಾಟೀಲ್ ಮಾಲಗತ್ತಿ, ಧರ್ಮಬಾಯಿ ಗೋಡ್ರಿಹಾಳ, ಚಾಂದಪಾಷಾ ಮಾಲಗತ್ತಿ, ಮಲ್ಲಿಕಾರ್ಜುನ ಗೋಡ್ರಿಹಾಳ, ವೆಂಕಟೇಶ ಕುಪಗಲ್, ಮಲ್ಲಯ್ಯ ವಗ್ಗಾ, ಶಿವನಗೌಡ ರುಕ್ಮಾಪುರ, ಶ್ರೀಶೈಲ ಗೌಡಗೇರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT