ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗಂಪೇಟೆ: ಅಕ್ಟೋಬರ್‌ 15 ರಿಂದ ನಾಡಹಬ್ಬ

Published 14 ಅಕ್ಟೋಬರ್ 2023, 8:40 IST
Last Updated 14 ಅಕ್ಟೋಬರ್ 2023, 8:40 IST
ಅಕ್ಷರ ಗಾತ್ರ

ಸುರಪುರ: ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ 81ನೇ ನಾಡಹಬ್ಬ ಅಕ್ಟೋಬರ್‌ 15 ರಿಂದ ಅದ್ಧೂರಿಯಾಗಿ ಆಚರಿಸಲಾಗುವುದು’ ಎಂದು ಸಂಘದ ಅಧ್ಯಕ್ಷ ಸೂಗೂರೇಶ ವಾರದ ತಿಳಿಸಿದರು.

ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ರಾಮಣ್ಣ ಬೋಡಾ ಸ್ಮಾರಕ ಭವನದಲ್ಲಿ ಆಹ್ವಾನ ಪ್ರತಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಅ. 15 ರಿಂದ 19ರ ವರೆಗೆ 5 ದಿನ ಉತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ 6 ಗಂಟೆಗೆ ಆಯ್ದ ವಿಷಯಗಳ ಮೇಲೆ ಉಪನ್ಯಾಸ ಗೋಷ್ಠಿ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ’ ಎಂದರು.

‘ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಲೇಖನ, ಭಾಷಣ, ವಚನ ಗಾಯನ, ಭಾವಗೀತೆ, ಮಹಿಳೆಯರಿಗೆ ರಂಗೋಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 10ನೇ, ಪಿಯುಸಿ, ಪದವಿ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುವುದು’ ಎಂದರು.

ಗೌರವಾಧ್ಯಕ್ಷ ಶಾಂತಪ್ಪ ಬೂದಿಹಾಳ ಮಾತನಾಡಿ, ‘15 ರಂದು ಬೆಳಿಗ್ಗೆ 8 ಗಂಟೆಗೆ ನಾಡದೇವಿಯ ಪ್ರತಿಷ್ಠಾಪನೆ ನಡೆಯುತ್ತದೆ. ಸಂಜೆ 6 ಗಂಟೆಗೆ ಶಾಸಕ ರಾಜಾ ವೆಂಕಟಪ್ಪನಾಯಕ ನಾಡಹಬ್ಬ ಉದ್ಘಾಟಿಸುವರು. ಕಲಬುರಗಿ ಶರಣ ಬಸವೇಶ್ವರ ವಿವಿಯ ಕಲ್ಯಾಣರಾವ ಪಾಟೀಲ ಅವರಿಂದ ‘ನಾಡು ನುಡಿ ಸಂಸ್ಕೃತಿ ವೈಭವ, ಐಶ್ವರ್ಯ ದೊರೆ ಅವರಿಂದ ‘ಪ್ರಸ್ತುತ ದಿನಗಳಲ್ಲಿ ಕನ್ನಡದ ಅಗತ್ಯತೆ’ ಕುರಿತು ಉಪನ್ಯಾಸ’ ಏರ್ಪಡಿಸಲಾಗಿದೆ ಎಂದರು.

‘16 ರ ಕಾರ್ಯಕ್ರಮದಲ್ಲಿ ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ. ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಭಾಗವಹಿಸುವರು. ‘ಸಂಘ ಬೆಳೆದು ಬಂದ ದಾರಿ ಕುರಿತು’ ಪ್ರಕಾಶ ಅಂಗಡಿ ಕನ್ನೆಳ್ಳಿ ಅವರಿಂದ ಉಪನ್ಯಾಸ’ ನಡೆಯಲಿದೆ’ ಎಂದರು.

‘17 ರಂದು ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಅಧ್ಯಕ್ಷತೆ ವಹಿಸುವರು. ನರಸಪ್ಪ ಚಿನ್ನಾಕಟ್ಟಿ ಅವರಿಂದ ‘ಜಾನಪದ ಸಾಹಿತ್ಯ’, ಗೌತಮ ಸುಧಾಕರ ಕುಲಕರ್ಣಿ ಅವರಿಂದ ‘ದಾಸ ಸಾಹಿತ್ಯ’ ಕುರಿತು ಉಪನ್ಯಾಸ’ ಏರ್ಪಡಿಸಲಾಗಿದೆ’ ಎಂದು ವಿವರಿಸಿದರು.

‘18 ರಂದು ಜಿಲ್ಲಾಧಿಕಾರಿ ಬಿ. ಸುಶೀಲಾ, ಎಸ್ಪಿ ಸಂಗೀತಾ ಜಿ. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಭಾಗವಹಿಸುವರು. ನೀಲಾಂಬಿಕಾ ಪೊಲೀಸ್ ಪಾಟೀಲರಿಂದ ‘ಮಹಿಳಾ ಸಮಸ್ಯೆ ಮತ್ತು ಸವಾಲುಗಳು’, ಕಾವ್ಯಶ್ರೀ ಮಹಾಗಾಂವಕರ್‌ ಅವರಿಂದ ‘ಅನುಭವ ಮಂಟಪ ಮತ್ತು ಸ್ತ್ರೀ ಸ್ವಾತಂತ್ರ್ಯ’ ಕುರಿತು ಉಪನ್ಯಾಸ ಇರಲಿದೆ’ ಎಂದರು.

‘19 ರಂದು ಪ್ರಭಾಕರ ಜೋಶಿ ಅವರಿಂದ ‘ಕನ್ನಡದಲ್ಲಿ ರಂಗ ಸಾಹಿತ್ಯ’ ಕುರಿತು ಉಪನ್ಯಾಸ. ಪ್ರಾಣೇಶ ಗಂಗಾವತಿ, ಬಸವರಾಜ ಮಹಾಮನಿ ಅವರಿಂದ ಹಾಸ್ಯ ಸಂಜೆ. ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ದಾವಣಗೆರೆ ವಿವಿ ಕುಲಸಚಿವ ಪ್ರಕಾಶ ದೇವಶೆಟ್ಟಿ, ಸಾಹಿತಿ ಸಿದ್ದರಾಮ ಹೊನ್ಕಲ್ ಉಪಸ್ಥಿತರಿರುವರು. ವಿವಿಧ ಸ್ಪರ್ಧಾ ವಿಜೇತರರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ವಿತರಣೆ ನಡೆಯಲಿದೆ’ ಎಂದರು.

ಸಂಘದ ಉಪಾಧ್ಯಕ್ಷ ಯಂಕಣ್ಣ ಗದ್ವಾಲ, ಸೋಮರಾಯ ಶಖಾಪೂರ, ಕಾರ್ಯಾಧ್ಯಕ್ಷ ಶ್ರೀರಂಗ ಮಿರಿಯಾಲ, ಸಹ ಕಾರ್ಯದರ್ಶಿ ಪ್ರಕಾಶ ಅಲಬನೂರ, ರಮೇಶ ಶಹಾಪುರಕರ, ರವಿ ತ್ರಿವೇದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT