ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಸೀರೆ ಮೊರೆ

Published 12 ಡಿಸೆಂಬರ್ 2023, 15:31 IST
Last Updated 12 ಡಿಸೆಂಬರ್ 2023, 15:31 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಹಿಂಗಾರು, ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದ ಕಾರಣ ಅಲ್ಪಸ್ವಲ್ಪ ಜೋಳದ ಬೆಳೆಯನ್ನು ಕಾಡು ಪ್ರಾಣಿ ಪಕ್ಷಿಗಳಿಂದ ರಕ್ಷಣೆ ಮಾಡಲು ರೈತರು ಹರಸಾಹಸ ಪಡುತ್ತಿದ್ದಾರೆ.

ಭೀಮಾ ನದಿ ಸಮೀಪ ಇರುವುದರಿಂದ ನರಿ, ತೋಳ, ಕಾಡುಹಂದಿಗಳು, ನವಿಲುಗಳಂತಹ ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಲು ಜಮೀನಿನ ಸುತ್ತಮುತ್ತಲೂ ಸೀರೆಗಳನ್ನು ಕಟ್ಟಿದ್ದಾರೆ. ಇದರಿಂದ ರಾತ್ರಿ ವೇಳೆ ಪ್ರಾಣಿಗಳು ಜಮೀನುಗಳತ್ತ ಬರದಂತೆ ರೈತರು ಸೀರೆಗಳಿಂದ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಒಂದೆಡೆ ಮಳೆರಾಯನ ಅವಕೃಪೆಯಿಂದ ಬರದ ಛಾಯೆ, ಮತ್ತೊಂದಡೆ ಇರುವ ಬೆಳೆಗಳನ್ನು ರಕ್ಷಣೆ ಮಾಡಲು ರೈತರು ಹರಸಹಾಸ ಪಡುತ್ತಿದ್ದಾರೆ.

‘ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ಕೆಲ ರೈತರು ಮಾತ್ರ ಹಿಂಗಾರು ಜೋಳದ ಬೆಳೆ ಬಿತ್ತನೆ ಮಾಡಿದ್ದಾರೆ. ಈಗ ಇರುವ ಅಲ್ಪಸ್ವಲ್ಪ ಜೋಳದ ಬೆಳೆಗೆ ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ರಾತ್ರಿ ವೇಳೆ ಬೆಳೆ ಹಾನಿ ಆತಂಕ ಎದುರಾಗಿದೆ’ ರೈತ ಸಿದ್ದಣ್ಣ ನಾಲ್ವಡಿಗಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT