ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ನೀರು: ನಿಟ್ಟುಸಿರು ಬಿಟ್ಟ ಸಿಬ್ಬಂದಿ

Published 10 ಮಾರ್ಚ್ 2024, 15:41 IST
Last Updated 10 ಮಾರ್ಚ್ 2024, 15:41 IST
ಅಕ್ಷರ ಗಾತ್ರ

ಶಹಾಪುರ: ನಗರ ಹೊರವಲಯದಲ್ಲಿರುವ ಫಿಲ್ಟರ್ ಬೆಡ್ ಕೆರೆಗೆ ಭಾನುವಾರದಿಂದ ಎಸ್‌ಬಿಸಿ ಕಾಲುವೆಯಿಂದ ಕೆರೆಗೆ ನೀರು ಹರಿಸುವ ಕಾರ್ಯ ನಡೆದಿದೆ. ಕಾಲುವೆಯಿಂದ ಕೆರೆಗೆ ನೀರು ಪೂರೈಸುವ ಪೈಪ್‌ಲೈನ್ ಹಾಳಾದ ಕಾರಣ ನಾಲ್ಕು ದಿನಗಳಿಂದ ನಗರಸಭೆ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ಮಗ್ನರಾಗಿದ್ದರು. ಕೊನೆಗೂ ನೀರು ಬಂದಿದ್ದನ್ನು ಕಂಡು ನಿಟ್ಟುಸಿರು ಬಿಟ್ಟರು.

ನಮಗೆ ಕಾಲುವೆಯಿಂದ ಇನ್ನೂ ನಾಲ್ಕು ದಿನ ನೀರು ಬರುತ್ತದೆ. ಅಲ್ಲದೆ ಬೊರುಕಾ ಪವರ್ ಕಂಪನಿ ಬಳಿ ಒಂದಿಷ್ಟು ನೀರು ಸಂಗ್ರಹಿಸಿದ್ದೇವೆ. ಎಂಟು ದಿನಗಳ ಕಾಲ ನಿರಂತರವಾಗಿ ನೀರು ಸಂಗ್ರಹಿಸಿ ಇಡುತ್ತೇವೆ. ಬೇಸಿಗೆಯಲ್ಲಿ ಯಾವುದೇ ತೊಂದರೆ ಇಲ್ಲ. ಮತ್ತೆ ಮೇ 10ರ ನಂತರ ನೀರಿನ ಬೇಡಿಕೆ ಕುರಿತು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸುತ್ತೇವೆ. ನಾಲ್ಕು ದಿನ ಸಮಸ್ಯೆಯಾಗಿತ್ತು ನಿಜ. ನಮ್ಮ ಸಿಬ್ಬಂದಿ ಹಾಗೂ ನಿಗಮದ ಎಂಜಿನಿಯರ್ ಸಹಕಾರ ನೀಡಿದರು ಎಂದು ಪೌರಾಯುಕ್ತ ರಮೇಶ ಬಡಿಗೇರ ತಿಳಿಸಿದರು.

‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ‘ಹಾಳಾದ ಪೈಪ್‌ಲೈನ್: ಸಂಗ್ರಹವಾಗದ ನೀರು’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT