ಬುಧವಾರ, ಆಗಸ್ಟ್ 10, 2022
25 °C
ವಿಚ್ಛೇದನ ತೆಗೆದುಕೊಳ್ಳದಂತೆ ಮನವೊಲಿಕೆ

ಯಾದಗಿರಿ | ಲೋಕ್‌ ಅದಾಲತ್‌ನಲ್ಲಿ ಮತ್ತೆ ಒಂದಾದ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ ದಂಪತಿಗೆ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಸಿದ್ದರಾಮ ಟಿ.ಪಿ ಬುದ್ದಿ ಹೇಳಿ ಮತ್ತೆ ಒಂದೂಗೂಡಿಸಿದ್ದಾರೆ.

ಶಹಾಪುರ ನ್ಯಾಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಮಾದರಿ ಕಾರ್ಯಕ್ಕೆ ಸಾಕ್ಷಿಯಾಯಿತು.

ಗೋಗಿ ಗ್ರಾಮದ ಚಂದ್ರಶೇಖರ ಜಿಂದೆ ಸಾರಿಗೆ ಇಲಾಖೆಯಲ್ಲಿ ನಿರ್ವಾಹಕರಾಗಿದ್ದಾರೆ. ಅದೇ ಗ್ರಾಮದ ಕಾಳಿಕಾ ಎನ್ನುವವರನ್ನು ಮದುವೆ ಆಗಿದ್ದರು. ನಾಲ್ವರು ಮಕ್ಕಳಿದ್ದು ಕುಟುಂಬದಲ್ಲಿ ಬಿರುಕು ಉಂಟಾಗಿತ್ತು. ಆಗ ಚಂದ್ರಶೇಖರ ವಿವಾಹ ವಿಚ್ಚೇದಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿ ವಿಚ್ಚೇದನ ನೀಡಲು ನಿರಾಕರಿಸಿದ್ದರು. ಪ್ರಕರಣವು ವಿಚಾರಣೆ ಹಂತದಲ್ಲಿ ಇತ್ತು.

ಪ್ರಕರಣ ಕೈಗೆತ್ತಿಕೊಂಡು ದಂಪತಿಗಳ ಇಬ್ಬರ ಸಮಸ್ಯೆ ಆಲಿಸಿ ತಿಳಿ ಹೇಳದ ನ್ಯಾಯಾಧೀಶರ ಸಲಹೆಗೆ ಇಬ್ಬರು ಒಪ್ಪಿಕೊಂಡರು ಎಂದು ಅರ್ಜಿದಾರ ಪರ ವಕೀಲರು ಒಬ್ಬರು ತಿಳಿಸಿದರು.

ತಾಲ್ಲೂಕು ಸೇವಾ ಸಮಿತಿಯ ಆಶ್ರಯದಲ್ಲಿ ಸರಳ ಕಾರ್ಯಕ್ರಮವನ್ನು ನಡೆಸಿ ಇಬ್ಬರೂ ಹೂ ಮಾಲೆಯನ್ನು ಬದಲಾಯಿಸಿದರು.

ವಕೀಲರಾದ ಎಸ್.ಶೇಖರ, ಬಸಮ್ಮ ರಾಂಪುರೆ,ಮಲ್ಲಿಕಾರ್ಜುನ ದೋರನಹಳ್ಳಿ, ವಿಶ್ವನಾಥ ಫಿರಂಗಿ, ಗುರುರಜ ಪಡಶೆಟ್ಟಿ, ಆಯಿಷ್ ಪರ್ವಿನ ಜಮಖಂಡಿ, ಸಂದೀಪ ದೇಸಾಯಿ, ಸಂತೋಷ ಹೊಸ್ಮನಿ, ಕಸ್ತೂರಿ ಪತ್ತಾರ, ಸುರೇಶ ಕದಮ ಇದ್ದರು.

ಕಾರ್ಯಕ್ರಮದಲ್ಲಿ 3 ನ್ಯಾಯಾಲಯ ಸೇರಿ ಒಟ್ಟು 1,015 ಪ್ರಕರಣ ಇತ್ಯಾರ್ಥಪಡಿಸಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಸಿದ್ದರಾಮ ಟಿ.ಪಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು