ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ವನಸಿರಿಯಾದ ಟೊಣ್ಣೂರ ಸರ್ಕಾರಿ ಶಾಲೆ

Published 31 ಮೇ 2024, 15:22 IST
Last Updated 31 ಮೇ 2024, 15:22 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ಟೊಣ್ಣೂರ  ಹಿರಿಯ ಪ್ರಾಥಮಿಕ ಶಾಲೆಯು ಹಸಿರುಮಯದಿಂದ ಗಮನ ಸೆಳೆಯುತ್ತಿದೆ. ಶಾಲೆಯ ತುಂಬೆಲ್ಲ ಸಸ್ಯ ಕಾಶಿಯ ರಾಶಿ ತುಂಬಿಕೊಂಡಿದ್ದು, ಮಲೆನಾಡಿನ ಸೊಬಗಿನಂತೆ ಕಂಗೊಳಿಸುತ್ತದೆ.

ಗ್ರಾಮದಲ್ಲಿ 1 ರಿಂದ 7 ನೇತರಗತಿವರೆಗೆ ಶಾಲೆಯಿದ್ದು, 175 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಮೂರು ಕೋಣೆಗಳು ಮಾತ್ರ ಇವೆ. ಶಾಲೆಯ ಸುತ್ತಲು ಕಾಂಪೌಂಡ್‌ ನಿರ್ಮಿಸಿದ್ದಾರೆ. ಸುಮಾರು 20 ಗುಂಟೆ ಜಮೀನು ಬಯಲು ಜಾಗವಿದೆ. ಶಾಲೆಯ ಹೆಬ್ಬಾಗಿಲಿಗೆ ಹಸಿರು ತೋರಣ ಕಟ್ಟಿದಂತೆ ಆಗಿದೆ. ನೆಲ ಹಾಸಿಗೆ ಹಾಕಿದ್ದು, ತೆಂಗು, ಬೇವು, ಸಾಗವಾನಿ ಹೀಗೆ 50 ಮರಗಳನ್ನು ಬೆಳೆಸುವುದರ ಜತೆಯಲ್ಲಿ ಹೂ ಗಿಡ, ಬಳ್ಳಿ ಹೀಗೆ ವೈವಿಧ್ಯಮವಾಗಿ ಕಾಣುತ್ತದೆ. ಮಕ್ಕಳ ಪಾಲಕರು ಶಾಲೆಯ ಆವರಣದ ಎಡ ಮತ್ತು ಬಲ ಭಾಗದಲ್ಲಿ ಕಲ್ಲಿನ ಬೆಂಚ್ ನಿರ್ಮಿಸಿದ್ದಾರೆ.

ಶಾಲೆಯ ಒಳಗಡೆ ಮರಗಳಿಗೆ ನೀರುಣಿಸಲು ಕೊಳವೆಬಾವಿ ಹಾಗೂ ನಳದ ಸಂಪರ್ಕವಿದೆ. ಎರಡು ದಿನಕ್ಕೆ ಒಮ್ಮೆ ನೀರು ಹರಿಸುತ್ತೇವೆ. ಸಾಕಷ್ಟು ಸಾವಯವ ಗೊಬ್ಬರ ಹಾಕುತ್ತೇವೆ.  ಎಸ್‌ಡಿಎಂಸಿ ಅಧ್ಯಕ್ಷರ ಹಾಗೂ ಸದಸ್ಯರು ಮತ್ತು ಪಾಲಕರು ಸಾಕಷ್ಟು ಸಹಕಾರ ನೀಡುತ್ತಾರೆ. ಶಾಲಾ ಸಿಬ್ಬಂದಿಯ ಹೆಚ್ಚಿನ ಸಹಕಾರವಿದೆ. ಅಲ್ಲದೇ ಮೂರು ವರ್ಷದ ಹಿಂದೆ ಬೀರಪ್ಪ ಎನ್ನುವ ಶಿಕ್ಷಕರು ಸಸ್ಯ ಕಾಶಿಯ ಶಾಲೆಗೆ ಮುನ್ನುಡಿ ಬರೆದರು. ಈಗ ಅವರು ಬೇರೆಡೆ ವರ್ಗವಾಗಿದೆ. ಮುಖ್ಯವಾಗಿ ಶಾಲಾ ಕೋಣೆಗಳ ಕೊರತೆ ಹಾಗೂ ಇನ್ನೂ ಮೂವರು ಶಿಕ್ಷಕ ಕೊರತೆ ಇದೆ ಎನ್ನುತ್ತಾರೆ ಶಾಲೆಯ ಮುಖ್ಯಗುರು ಸುಧಾಕರ ಗುತ್ತೇದಾರ.

ಮಲೆನಾಡಿನ ಶಾಲೆಗಿಂತ ಕಡಿಮೆ ಇಲ್ಲ

ನಮ್ಮ ಶಾಲೆಯಲ್ಲಿ ವನಸಿರಿ. ಮಕ್ಕಳ ಪಾಲಕರ ಸಹಕಾರದಿಂದ ಶಾಲೆಯಲ್ಲಿ ಉತ್ತಮ ಪರಿಸರವನ್ನು ನಿರ್ಮಿಸಿದ್ದೇವೆ. ಶಾಲೆಗೆ ಇನ್ನೂ ಕೋಣೆ ಹಾಗೂ ಶಿಕ್ಷಕರ ಕೊರತೆ ಇದೆ. ಸುಧಾಕರ ಗುತ್ತೇದಾರ ಶಾಲಾ ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT