ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಚಿಕಿತ್ಸೆಗೆ ಬರುವವರನ್ನು ಕುಟುಂಬದಂತೆ ಭಾವಿಸಿ’

ಗುರುಮಠಕಲ್: ನಮ್ಮ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮ
Published 29 ಫೆಬ್ರುವರಿ 2024, 16:11 IST
Last Updated 29 ಫೆಬ್ರುವರಿ 2024, 16:11 IST
ಅಕ್ಷರ ಗಾತ್ರ

ಗುರುಮಠಕಲ್: ಯಾವುದೋ ಆರೋಗ್ಯ ಸಮಸ್ಯೆ ಅಥವಾ ವಯೋ ಸಹಜ ಕಾಯಿಲೆ ಸೇರಿದಂತೆ ವೈದ್ಯಕೀಯ ಸೇವೆ ಪಡೆಯಲು ‘ನಮ್ಮ ಕ್ಲಿನಿಕ್’ಗೆ ಬರುವ ಜನರನ್ನು ಕುಟುಂಬದ ಸದಸ್ಯರಂತೆ ಭಾವಿಸಿ ಕಾಳಜಿ ವಹಿಸಬೇಕು ಮತ್ತು ಅವರ ಆರೋಗ್ಯ ಚೇತರಿಕೆಗೆ ಅವಶ್ಯಕ ಚಿಕಿತ್ಸೆ ನೀಡುವಂತೆ ಶಾಸಕ ಶರಣಗೌಡ ಕಂದಕೂರ ಅವರು ಕ್ಲಿನಿಕ್‌ ಸಿಬ್ಬಂದಿಗೆ ಸಲಹೆ ನೀಡಿದರು.

ಪಟ್ಟಣದಲ್ಲಿ ಸ್ಥಾಪಿಸಲಾದ ‘ನಮ್ಮ ಕ್ಲಿನಿಕ್’ ಅನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಂದೆಯವರು ಕ್ಷೇತ್ರದ ಜನತೆಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುವಲ್ಲಿ ಆದ್ಯತೆಯ ಕೆಲಸ ಮಾಡುತ್ತಿದ್ದರು. ನಾನೂ ಅವರ ಹಾದಿಯಲ್ಲೇ ಸಾಗುತ್ತೇನೆ ಎಂದರು.

ನಮ್ಮ ತಾಲ್ಲೂಕಿಗೆ ಮಿನಿ ವಿಧಾನ ಸೌಧ, 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆ ಹಾಗೂ ಅಗ್ನಿಶಾಮಕದಳ ನಿರ್ಮಿಸಬೇಂದು ನಮ್ಮ ತಂದೆ, ಮಾಜಿ ಶಾಸಕ ದಿ.ನಾಗನಗೌಡ ಕಂದಕೂರ ಕನಸು ಕಂಡಿದ್ದರು. ಮುಂದಿನ ಬೆಸಿಗೆ ವೇಳೆಗೆ ಕ್ಷೇತ್ರದಲ್ಲಿ 100 ಹಾಸಿಗೆ ಆಸ್ಪತ್ರೆ ಕಾರ್ಯಾರಂಭಿಸಲಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭುಲಿಂಗ ಕೆ.ಮಾನಕರ್ ಮಾತನಾಡಿ, ಜನತೆಯ ಅನುಕೂಲದ ದೃಷ್ಟಿಯಿಂದ ಶಾಸಕರ ಮುತುವರ್ಜಿಯಿಂದಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲಾಗಿದೆ. ಜತೆಗೆ ತಾಲ್ಲೂಕಿನಲ್ಲಿ ಎರಡು ಪಿ.ಎಚ್.ಸಿ.ಗಳಿಗೆ ಅನುಮೋದನೆ ಸಿಕ್ಕಿದೆ ಹಾಗೂ ಇಲ್ಲಿನ ಸಿ.ಎಚ್.ಸಿ ಮೇಲ್ದರ್ಜೆಗೇರಲಿದೆ ಎಂದರು.

ನಮ್ಮ ಕ್ಲಿನಿಕ್‌ನಲ್ಲಿ ಗರ್ಭಿಣಿ ಆರೈಕೆ, ನವಜಾತ ಶಿಶು ಆರೈಕೆ, ಹಿರಿಯ ನಾಗರಿಕರ ಆರೋಗ್ಯ, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆ ಸೇರಿದಂತೆ ಒಟ್ಟು 12 ಸೇವೆಗಳ ಲಭ್ಯವಿದ್ದು, ಹಂತ ಹಂತವಾಗಿ ಆ ಎಲ್ಲಾ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಆರ್.ಸಿ.ಎಚ್. ಡಾ.ಮಲ್ಲಪ್ಪ ಕೆ.ನಾಯ್ಕಲ್, ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಶರಭೈ, ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಪುರಸಭೆಯ ಮಲ್ಲಿಕಾರ್ಜುನ ಸುಂಗಲಕರ, ವೈದ್ಯಾಧಿಕಾರಿ ಡಾ.ಶಿವಪ್ರಸಾದ ಮೈತ್ರಿ, ಡಾ.ಮಹೇಶ ಸಜ್ಜನ, ಡಾ.ಭಾಗರೆಡ್ಡಿ, ಡಾ.ಜಯಶ್ರೀ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಹಾಗೂ ಗಣ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT