ಬುಧವಾರ, ನವೆಂಬರ್ 13, 2019
23 °C
ಅಯೋಧ್ಯೆ ತೀರ್ಪು, ಎರಡನೇ ಶನಿವಾರ ಎಫೆಕ್ಟ್‌

ಯಾದಗಿರಿ: ಸಂಚಾರ ಭಣ ಭಣ

Published:
Updated:
Prajavani

ಯಾದಗಿರಿ: ನ.9 ರಂದು ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಗರದಾದ್ಯಂತ ಕಟ್ಟೆಚ್ಚರ ವಹಿಸಿದ್ದರು. ಇದು ಅಲ್ಲದೇ ಎರಡನೇ ಶನಿವಾರ ಆಗಿದ್ದ ಕಾರಣ ಬಹುತೇಕ ಅಂಗಡಿ ಮುಂಗಟ್ಟು ಭಣಗುಡುತ್ತಿರುವುದು ಕಂಡು ಬಂದಿತು.

ಬ್ಯಾಂಕ್‌ಗಳು, ಅಂಚೆ ಕಚೇರಿ, ಸರ್ಕಾರಿ ಕಚೇರಿಗಳಿಗೆ ರಜೆ ಇದ್ದವು. ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಸರ್ಕಾರ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ನಗರದ ಪ್ರಮುಖ ರಸ್ತೆ, ವೃತ್ತ, ಬಸ್‌ ನಿಲ್ದಾಣ, ಸುಭಾಷ್ ವೃತ್ತಗಳಲ್ಲಿ ಬಿಗಿ ಭದ್ರತೆ ವಹಿಸಲಾಗಿತ್ತು.  ಎಂದಿನಂತೆ ಬಸ್‌ ಸಂಚಾರ ಸುಗಮವಿದ್ದರೂ ಪ್ರಯಾಣಿಕರು ಕಂಡು ಬರಲ್ಲಿಲ್ಲ.

ಪೊಲೀಸರ ಕಟ್ಟುನಿಟ್ಟಿನ ಸೂಚನೆಯಂತೆ ನಗರದಲ್ಲಿ ಜನರು ಗುಂಪು ಗುಂಪಾಗಿ ನಿಂತು ಚರ್ಚಿಸುತ್ತಿರುವುದು ಕಂಡು ಬರಲ್ಲಿಲ್ಲ. ಪೊಲೀಸರು ಬಂದೋಬಸ್ತ್‌ ಕೈಗೊಂಡಿದ್ದರು.

 

 

ಪ್ರತಿಕ್ರಿಯಿಸಿ (+)