ಗಣತಿ ವೇಳೆ ಕಂದು ಬಾಲದ ನೊಣ ಹಿಡುಕ (ರುಸ್ಟಿ ಟೈಲ್ಡ್ ಫ್ಲೆಕ್ಯಾಚರ್), ಬಿಳಿ ಹೊಟ್ಟೆಯ ಚಿತ್ರಪಕ್ಷಿ (ವೈಟ್ ಬೆಲ್ಲೆಡ್ ಮಿನಿವೆಟ್) ನಂತಹ ಅಪರೂಪ ಪಕ್ಷಿಗಳು ಪತ್ತೆಯಾಗಿವೆ. ವಿಶ್ವದಲ್ಲಿ 21 ಪ್ರಭೇದದ ಕಾಜಾಣಗಳಿವೆ.
ಬಿಳಿಗಿರಿರಂಗನಬೆಟ್ಟದಲ್ಲಿ 6 ಪ್ರಭೇದಕ್ಕೆ ಸೇರಿದ ಕಾಜಾಣಗಳಿವೆ. ಬೆಳಿಗ್ಗೆ ಗಣತಿಗೆ ತೆರಳಿದ್ದವರಿಗೆ ಅಪರೂಪದ ಜುಟ್ಟು ಕಾಜಾಣ (ಹೇರ್ ಕ್ರೆಸ್ಟೆಡ್ ಡೋಂಗ್ರೊ) ಕಾಣಿಸಿಕೊಂಡಿದೆ. ರಕ್ಷಿತಾರಣ್ಯದ ವಾಪ್ತಿಯ ಚಾಮರಾಜನಗರ, ಕೊಳ್ಳೇಗಾಲ, ಪುಣಜನೂರು, ಕೆ.ಗುಡಿ, ಬೈಲೂರು ಹಾಗೂ ಯಳಂದೂರು ವಲಯದಲ್ಲಿ ಗಣತಿ ನಡೆಯಿತು.