ಚಿಕ್ಕಬಳ್ಳಾಪುರ: ಸ್ವಾರ್ಥ, ಅಸೂಯೆ ಮನೋಭಾವನೆ ತೊರೆದು ದಾನ, ನೆರವು ನೀಡುವ ಗುಣವನ್ನು ರೂಢಿಸಿಕೊಳ್ಳಬೇಕು. ಜಾತಿ, ಧರ್ಮಗಳಿಗೆ ಮಾತ್ರವೇ ಸೀಮಿತವಾಗಿ ಕಟ್ಟುಬೀಳುವುದರ ಬದಲು ವಿಶಾಲವಾದ ದೃಷ್ಟಿಕೋನ ಹೊಂದಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ಸಲಹೆ ಮಾಡಿದರು.

ಶನಿವಾರ ನಗರದ ಹೊಸ ಬಸ್ ನಿಲ್ದಾಣದ ಬಳಿಯಿರುವ ಯೋಗಿ ನಾರೇಯಣ ಮಠದ ಆವರಣದಲ್ಲಿ ನಡೆದ ನಾರೇಯಣೋತ್ಸವ, ಅಖಂಡ ಸಂಕೀರ್ತನೆ ಕಾರ್ಯಕ್ರಮದಲ್ಲಿ ಮಾತನಾಡಿ, `ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ಸ್ವಾರ್ಥ, ದ್ವೇಷ, ಅಸೂಯೆ ನಿವಾರಿಸಲು ಸಾಧ್ಯವಾಗುತ್ತದೆ~ ಎಂದರು.
ದಾನ ಮಾಡಿ, ನೆರವು ನೀಡಿ ಪ್ರಚಾರ ಪಡೆದುಕೊಳ್ಳುವುದರ ಬದಲು ಪ್ರಚಾರ ಬಯಸದೆ ಮೌನವಾಗಿ ಕಾಯಕ ಮಾಡಬೇಕು ಎಂದು ಅವರು ಹೇಳಿದರು.

ಸಂಸದ ಪಿ.ಸಿ.ಮೋಹನ್ ಮಾತನಾಡಿ, ಬಲಿಜ ಸಮುದಾಯ ಹಿಂದುಳಿದಿದ್ದು, ಸಮಾಜ ಮುಖ್ಯವಾಹಿನಿಯಲ್ಲಿ ಬರಲು ಶ್ರಮಿಸುತ್ತಿದೆ. ತಾವು ಬೆಳೆಯಬೇಕು, ಇನ್ನೊಬ್ಬರನ್ನು ಬೆಳೆಸುವ ಮನೋಭಾವ ಹೊಂದುವಂತೆ ತಿಳಿಸಿದರು.

ಶಾಸಕ ಎನ್.ಸಂಪಂಗಿ, ಯೋಗಿ ನಾರೇಯಣ ಟ್ರಸ್ಟ್ ಕಾರ್ಯದರ್ಶಿ ಎನ್.ವೆಂಕಟೇಶಯ್ಯ, ನಗರಸಭೆ ಸದಸ್ಯ ಬಿ.ಎ.ಲೋಕೇಶ್‌ಕುಮಾರ್, ಕೆ.ವಿ.ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕನರಸಿಂಹಯ್ಯ, ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಭದ್ರಾಚಲಂ, ಗೌರವಾಧ್ಯಕ್ಷ ಕಠಾರಿ ನರಸಪ್ಪ ಮತ್ತಿತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ, ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಯೋಗಿನಾರೇಯಣ ರಸ್ತೆ ನಾಮಫಲಕವನ್ನು ಅನಾವರಣ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.