ವಿಶ್ವ ಆರ್ಥಿಕ ಶೃಂಗಸಭೆ: ದಾವೋಸ್‌ಗೆ ಹೋಗಲ್ಲ -ಡೊನಾಲ್ಡ್‌ ಟ್ರಂಪ್‌

7
ಅಮೆರಿದಲ್ಲಿ ಆಡಳಿತ ಸ್ಥಗಿತ

ವಿಶ್ವ ಆರ್ಥಿಕ ಶೃಂಗಸಭೆ: ದಾವೋಸ್‌ಗೆ ಹೋಗಲ್ಲ -ಡೊನಾಲ್ಡ್‌ ಟ್ರಂಪ್‌

Published:
Updated:

ವಾಷಿಂಗ್ಟನ್‌: ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧರಿಸಿದ್ದಾರೆ.

ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸುವ ವಿವಾದದಿಂದ ಅಮೆರಿಕದಲ್ಲಿ ಆಡಳಿತ ಸ್ಥಗಿತಗೊಂಡಿದೆ. ಹೀಗಾಗಿ, ದಾವೋಸ್‌ ಪ್ರವಾಸವನ್ನು ಟ್ರಂಪ್‌ ರದ್ದುಪಡಿಸಿದ್ದಾರೆ. ಜನವರಿ 21ರಿಂದ ಐದು ದಿನಗಳ ಕಾಲ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ಈ ಶೃಂಗಸಭೆ ನಡೆಯಲಿದೆ.

ಆಡಳಿತ ಸ್ಥಗಿತಗೊಂಡಿರುವುದರಿಂದ ಸರ್ಕಾರದ ಪ್ರಮುಖ ಇಲಾಖೆಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಿದೆ. 8 ಲಕ್ಷ ನೌಕರರಿಗೆ ವೇತನವೂ ದೊರೆತಿಲ್ಲ.

‘ದಾವೋಸ್‌ನಲ್ಲಿ ಅಂತರರಾಷ್ಟ್ರೀಯ ಸಮುದಾಯದ ಮುಂದೆ ಮಾತನಾಡುವ ಉದ್ದೇಶವಿತ್ತು. ಆದರೆ, ಆಡಳಿತ ಸ್ಥಗಿತಗೊಂಡಿರುವುದರಿಂದ ನಾನು ಅಲ್ಲಿಗೆ ಹೋಗುವುದಿಲ್ಲ’ ಎಂದು ಡೊನಾಲ್ಡ್‌ ಟ್ರಂಪ್‌ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !