ಲಂಡನ್‌ ಮೇಯರ್ ವಿರುದ್ಧ ಟ್ರಂಪ್‌ ವಾಗ್ದಾಳಿ

ಶನಿವಾರ, ಜೂಲೈ 20, 2019
26 °C

ಲಂಡನ್‌ ಮೇಯರ್ ವಿರುದ್ಧ ಟ್ರಂಪ್‌ ವಾಗ್ದಾಳಿ

Published:
Updated:

ಲಂಡನ್‌: ಲಂಡನ್‌ ಮೇಯರ್, ಲೇಬರ್‌ ಪಾರ್ಟಿ ಮುಖಂಡ ಸಾದಿಕ್‌ ಖಾನ್‌ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಮತ್ತೆ ಕಿಡಿಕಾರಿದ್ದಾರೆ.

‘ಬ್ರಿಟನ್‌ ರಾಜಧಾನಿ ಲಂಡನ್‌ನಲ್ಲಿ ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಮೇಯರ್ ವಿಫಲರಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿರುವ ಟ್ರಂಪ್‌, ‘ಸಾದಿಕ್‌ ಖಾನ್‌ ಮೇಯರ್‌ ಆಗಿರುವುದೇ ಒಂದು ಆ ನಗರಕ್ಕೆ ದೊಡ್ಡ ವಿಪತ್ತು ಎಂಬಂತಾಗಿದೆ’ ಎಂದು ಟೀಕಿಸಿದ್ದಾರೆ.

ಜೂನ್‌ ಮೊದಲವಾರ ಬ್ರಿಟನ್‌ಗೆ ಭೇಟಿ ನೀಡಿದ್ದ ಟ್ರಂಪ್‌ಗೆ ರಾಣಿ ಎಲಿಜಬೆತ್‌ ಅವರು ಆತಿಥ್ಯ ನೀಡಿದ್ದನ್ನು ಖಾನ್‌ ಪದೇಪದೇ ಪ್ರಶ್ನಿಸಿದ್ದು ಟ್ರಂಪ್‌ ಅವರನ್ನು ಕೆರಳಿಸಿತ್ತು. 

ಅಮೆರಿಕಕ್ಕೆ ವಲಸೆ ಹೋಗುವವರಿಗೆ ಮಾರಕವಾಗುವಂತಹ ವಿಭಜನಾತ್ಮಕ ಕಾನೂನು ಜಾರಿಗೆ ತರಲಾಗಿದೆ ಎಂದು ಟ್ರಂಪ್‌ ಆಡಳಿತ ವೈಖರಿಯನ್ನು ಟೀಕಿಸಿದ್ದ ಖಾನ್‌, ಟ್ರಂಪ್‌ 20ನೇ ಶತಮಾನದ ಫ್ಯಾಸಿಸ್ಟ್‌ಗಳಿಗೆ ಹೋಲಿಸಿದ್ದರು. ಇದು ಕೂಡ ಟ್ರಂಪ್‌ ಕೋಪಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !