ಗೂಗಲ್‌ ವಿಜ್ಞಾನ ಮೇಳ: ಅಂತಿಮ ಪಟ್ಟಿಯಲ್ಲಿ ಭಾರತ ಸಂಜಾತ ವಿದ್ಯಾರ್ಥಿ

ಬುಧವಾರ, ಜೂನ್ 19, 2019
25 °C

ಗೂಗಲ್‌ ವಿಜ್ಞಾನ ಮೇಳ: ಅಂತಿಮ ಪಟ್ಟಿಯಲ್ಲಿ ಭಾರತ ಸಂಜಾತ ವಿದ್ಯಾರ್ಥಿ

Published:
Updated:
Prajavani

ದುಬೈ: ಅಂತರರಾಷ್ಟ್ರೀಯ ಗೂಗಲ್‌ ವಿಜ್ಞಾನ ಮೇಳದಲ್ಲಿ ಭಾರತ ಸಂಜಾತ ವಿದ್ಯಾರ್ಥಿ ಶಾಮಿಲ್‌ ಕರೀಂ ಪ್ರಾದೇಶಿಕ ಮಟ್ಟದಲ್ಲಿ ಅಂತಿಮ ಹಂತಕ್ಕೆ ತಲುಪಿದ 100 ಮಂದಿಯ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾನೆ.

ಮೂಲತಃ ಚೆನ್ನೈನ ಶಾಮಿಲ್‌ ದುಬೈಯ ಇಂಡಿಯನ್‌ ಹೈಸ್ಕೂಲ್‌ನ 11 ನೇ ತರಗತಿ ವಿದ್ಯಾರ್ಥಿ.

ವಿದ್ಯುತ್ ಉಳಿತಾಯ ಮತ್ತು ಸ್ಮಾರ್ಟ್‌ ಬೀದಿ ದೀಪಗಳ ಬಗ್ಗೆ ಶಾಮಿಲ್‌ ವಿಜ್ಞಾನ ಪ್ರಾತ್ಯಕ್ಷಿಕೆ ತಯಾರಿಸಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ. ‘ಇಂತಹ ಪ್ರಾತ್ಯಕ್ಷಿಕೆ ತಯಾರಿಸಲು ತಂದೆಯೇ ಪ್ರೇರಣೆ’ ಎಂದು ಶಾಮಿಲ್‌ ತಿಳಿಸಿದ್ದಾನೆ.

ರಸ್ತೆಯಲ್ಲಿ ವಾಹನಗಳು ಹಾದು ಹೋಗುವಾಗ ಅಥವಾ ಮನುಷ್ಯರು ನಡೆದು ಹೋಗುವಾಗ ಬೀದಿ ದೀಪಗಳು ಪ್ರಕಾಶಮಾನವಾಗಿ ಬೆಳಗಿ, ಯಾರೂ ಇಲ್ಲದ ವೇಳೆ ಸ್ವಯಂಚಾಲಿತವಾಗಿ ಕಡಿಮೆ ಪ್ರಕಾಶದಲ್ಲಿ ಉರಿಯುವಂತಹ ವ್ಯವಸ್ಥೆಯ ಪ್ರಾತ್ಯಕ್ಷಿಕೆಯನ್ನು ಶಾಮಿಲ್‌ ಸಿದ್ಧಪಡಿಸಿದ್ದ.

ಜಾಗತಿಕ ಮಟ್ಟದಲ್ಲಿ 20 ಮಂದಿ ಅಂತಿಮ ಸ್ಪರ್ಧಿಗಳ ಘೋಷಣೆ ಈ ತಿಂಗಳಲ್ಲೆ ನಡೆಯುವ ನಿರೀಕ್ಷೆ ಇದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !