ಶುಕ್ರವಾರ, ಜೂನ್ 18, 2021
24 °C

ಪತ್ನಿಗೆ ರಕ್ಷಣೆ ಕೊಡಿ: ಪೊಲೀಸರಿಗೆ ದುನಿಯಾ ವಿಜಯ್ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನನ್ನ ಪತ್ನಿ ಕೀರ್ತಿ ಗೌಡ ಅವರಿಗೆ ಜೀವ ಬೆದರಿಕೆ ಇದೆ. ಅವರಿಗೆ ರಕ್ಷಣೆ ಕೊಡಿ’ ಎಂದು ನಟ ದುನಿಯಾ ವಿಜಯ್‌, ಗಿರಿನಗರ ಠಾಣೆ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಜಿಮ್ ತರಬೇತುದಾರ ಮಾರುತಿ ಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದಡಿ ಜೈಲು ಸೇರಿರುವ ದುನಿಯಾ ವಿಜಯ್, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರ ಮೂಲಕ ಪೊಲೀಸರಿಗೆ ಪತ್ರ ಕಳುಹಿಸಿದ್ದಾರೆ.

‘ನನ್ನ ಪತ್ನಿ ಕೀರ್ತಿ ಮೇಲೆ ನಾಗರತ್ನಾ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಅದರಿಂದಾಗಿ ಕೀರ್ತಿ ಭಯಭೀತರಾಗಿದ್ದಾರೆ. ಸೆಪ್ಟೆಂಬರ್ 24ರಂದು ನನ್ನನ್ನು ಭೇಟಿಯಾಗಲು ಜೈಲಿಗೆ ಬಂದಿದ್ದಾಗಲೂ ಹಲ್ಲೆ ಬಗ್ಗೆ ಹೇಳಿದ್ದಾರೆ. ಕೀರ್ತಿಗೆ ಏನಾದರೂ ಆದರೆ ನಾಗರತ್ನರವರೇ ನೇರ ಹೊಣೆ’ ಎಂದು ಪತ್ರದಲ್ಲಿ ಬರೆದಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು