ಟರ್ಕಿಯಲ್ಲಿ ಭಾರೀ ಪ್ರಮಾಣದ ಭೂಕಂಪ

ಸೋಮವಾರ, ಏಪ್ರಿಲ್ 22, 2019
29 °C

ಟರ್ಕಿಯಲ್ಲಿ ಭಾರೀ ಪ್ರಮಾಣದ ಭೂಕಂಪ

Published:
Updated:
Prajavani

ಇಸ್ತಾಂಬುಲ್ (ಟರ್ಕಿ): ಬುಧವಾರ ಬೆಳಗ್ಗೆ ಟರ್ಕಿಯಲ್ಲಿ ಭಾರಿ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ 6.4 ರಷ್ಟಿತ್ತು ಎಂದು ಇಎಂಎಸ್ ಸಿ(ಅರ್ಥ್ ಕ್ವೆಕ್ ಮಾನಿಟರಿಂಗ್ ಸರ್ವೀಸ್ ಸೆಂಟರ್) ಮಾಧ್ಯಮಗಳಿಗೆ ತಿಳಿಸಿದೆ.

ನೈರುತ್ಯ ಟರ್ಕಿಯಲ್ಲಿ ಈ ಭೂಕಂಪ ಸಂಭವಿಸಿದ್ದು, ಕಂಪನದ ತೀವ್ರತೆಗೆ ಭೂಮಿಯಲ್ಲಿ 10 ಕಿಲೋಮೀಟರ್ ನಷ್ಟು ಆಳದ ಬಿರುಕುಗಳು ಕಾಣಿಸಿಕೊಂಡಿವೆ. ಪರಿಣಾಮ ದಕ್ಷಿಣದಲ್ಲಿರುವ ಅಸಿಪಾಯಂ ಪಟ್ಟಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎನ್ನಲಾಗಿದೆ. ತಕ್ಷಣಕ್ಕೆ ಪ್ರಾಣಹಾನಿ ಹಾಗೂ ನಷ್ಟದ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.

 

 

Tags: 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 4

  Sad
 • 0

  Frustrated
 • 0

  Angry

Comments:

0 comments

Write the first review for this !