ಗೂಢಚಾರಿಕೆಗೆ ರಾಯಭಾರ ಕಚೇರಿ ಬಳಕೆ

ಶುಕ್ರವಾರ, ಏಪ್ರಿಲ್ 26, 2019
24 °C
ಜೂಲಿಯನ್ ಅಸಾಂಜ್ ವಿರುದ್ಧ ಈಕ್ವೆಡಾರ್ ಅಧ್ಯಕ್ಷ ಲೆನಿನ್ ಮೊರೆನೊ ಆರೋಪ

ಗೂಢಚಾರಿಕೆಗೆ ರಾಯಭಾರ ಕಚೇರಿ ಬಳಕೆ

Published:
Updated:
Prajavani

ಲಂಡನ್: ವಿಕಿಲೀಕ್ಸ್ ಸಹ ಸಂಸ್ಥಾಪಕ ಜೂಲಿಯನ್ ಅಸಾಂಜ್‌ ಅವರು ಲಂಡನ್‌ನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯನ್ನು ತಮ್ಮ ಗೂಢಚಾರಿಕೆ ಕೇಂದ್ರವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು ಎಂದು ಈಕ್ವೆಡಾರ್ ಅಧ್ಯಕ್ಷ ಲೆನಿನ್ ಮೊರೆನೊ ಗಾರ್ಡಿಯನ್ ಪತ್ರಿಕೆಗೆ ತಿಳಿಸಿದ್ದಾರೆ. 

‘ಆಶ್ರಯ ಪಡೆಯಲು ಅಸಾಂಜ್ ಅವರಿಗೆ ಹಾಕಲಾಗಿದ್ದ ಷರತ್ತುಗಳನ್ನು ಪದೇ ಪದೇ ಅವರು ಉಲ್ಲಂಘಿಸಿದ್ದರು. ಇತರೆ ದೇಶಗಳ ಪ್ರಜಾಪ್ರಭುತ್ವದಲ್ಲಿ ಮಧ್ಯಪ್ರವೇಶಿಸಲು ಅಸಾಂಜ್ ಈಕ್ವೆಡಾರ್ ರಾಯಭಾರ ಕಚೇರಿಯನ್ನು ಬಳಸಿಕೊಂಡಿದ್ದರು ಎನ್ನುವುದು ವಿಷಾದನೀಯ. ನಮ್ಮದು ಸಾರ್ವಭೌಮ ಹೊಂದಿರುವ ರಾಷ್ಟ್ರ. ನಾವು ಪ್ರತಿ ದೇಶದ ರಾಜಕೀಯವನ್ನು ಗೌರವಿಸುತ್ತೇವೆ. ಬೇರೆ ದೇಶಗಳನ್ನು ಅಸ್ಥಿರಗೊಳಿಸುವ ಯತ್ನವನ್ನು ಈಕ್ವೆಡಾರ್ ಖಂಡಿಸುತ್ತದೆ’ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: ಸ್ವೀಡನ್‌ಗೆ ಸಹಕಾರ–ಬ್ರಿಟನ್‌ ಸಂಸದರ ಒತ್ತಾಯ

‘ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳ ಅನುಮತಿಯೊಂದಿಗೆ ರಾಯಭಾರ ಕಚೇರಿಯನ್ನು ಗೂಢಚಾರಿಕೆ ಕೇಂದ್ರ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು ಎನ್ನುವುದು ದುರದೃಷ್ಟಕರ’ ಎಂದು ಮೊರೆನೊ ತಿಳಿಸಿದ್ದಾರೆ. 

ಮೊರೆನೊ ಅವರ ವೈಯಕ್ತಿಕ ಜೀವನದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಅಸಾಂಜ್ ಮೇಲೆ ಈಕ್ವೆಡಾರ್ ಆರೋಪ ಮಾಡಿತ್ತು. ಇದಾದ ಬಳಿಕ ಅಸಾಂಜ್ ಮತ್ತು ಅವರ ಆಶ್ರಯದಾತರ ನಡುವಿನ ಸಂಬಂಧ ಹದಗೆಟ್ಟಿತ್ತು.

‌ನಿರಾಕರಣೆ: ತಮ್ಮ ಕುಟುಂಬದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಕ್ಕೆ ಪ್ರತೀಕಾರವಾಗಿ ಅಸಾಂಜ್ ಅವರನ್ನು ಹೊರಹಾಕ
ಲಾಯಿತು ಎನ್ನುವ ಹೇಳಿಕೆಗಳನ್ನು ಅವರು ತಳ್ಳಿಹಾಕಿದ್ದಾರೆ.

‘ಆಶ್ರಯ ಕೊನೆಗೊಳಿಸುವ ನಿರ್ಧಾರ ವೈಯಕ್ತಿಕವಾದುದಲ್ಲ. ಇದು ಅಂತರರಾಷ್ಟ್ರೀಯ ಕಾನೂನು ಆಧರಿಸಿ ಕೈಗೊಂಡ ನಿರ್ಣಯ’ ಎಂದು ಮೊರೆನೊ ಹೇಳಿದ್ದಾರೆ.  ಏಳು ವರ್ಷಗಳಿಂದ ಲಂಡನ್‌ನಲ್ಲಿನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ಅಸಾಂಜ್‌ನನ್ನು ಗುರುವಾರ ಲಂಡನ್ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಏಳು ವರ್ಷಗಳ ಬಳಿಕ ’ವಿಕಿಲೀಕ್ಸ್‌’ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಬಂಧನ

ಜೈಲಿನ ಹೊರಗೆ ಪ್ರತಿಭಟನೆ

ಲಂಡನ್‌ನ ಬೆಲ್‌ಮಾರ್ಷ್ ಜೈಲಿನಲ್ಲಿರುವ ಜೂಲಿಯನ್ ಅಸಾಂಜ್‌ ಅವರನ್ನು ಬಂಧಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಜರ್ಮನ್ ಹಾಗೂ ಸ್ಪೇನ್‌ನ ಸಂಸದರು ಜೈಲಿನ ಹೊರಗೆ ಸೋಮವಾರ ಪ್ರತಿಭಟನೆ ನಡೆಸಿದರು. 

ಅಸಾಂಜ್ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸುವುದನ್ನು ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ತಡೆಯಬೇಕು ಎಂದು ಜರ್ಮನ್‌ನ ಡೈ ಲಿಂಕ್ ಪಕ್ಷದ ಸಂಸದರಾದ ಹೈಕಿ ಹಾನ್ಸೆಲ್, ಸೆವಿಮ್ ಡಾಗ್ಡಲಿನ್ ಹಾಗೂ ಯುರೋಪ್‌ನ ಸಂಸದೆ ಅನಾ ಮಿರಾಂಡ ಅವರು ಒತ್ತಾಯಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !