ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಜ್ಞಾನ: ಬಹು ಆಯ್ಕೆಯ ಪ್ರಶ್ನೆಗಳು

Last Updated 7 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಎಸ್‌ಆರ್‌ಪಿ ಸೇರಿದಂತೆ ಮುಂದೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ‘ಸಾಮಾನ್ಯ ಜ್ಞಾನ‘ ವಿಷಯಕ್ಕೆ ಸಂಬಂಧಿಸಿದ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ಕೊಡಲಾಗಿದೆ.

1. ಈ ಕೆಳಗಿನವರಲ್ಲಿ ಕೆಳದಿ ರಾಜ್ಯದ ಸ್ಥಾಪಕರು ಯಾರು ?
ಎ. ಚೌಡಪ್ಪ ನಾಯಕ
ಬಿ. ಸದಾಶಿವ ನಾಯಕ
ಸಿ. ಸಂಕಣ್ಣ ನಾಯಕ
ಡಿ. ಶಿವಪ್ಪ ನಾಯಕ

ಉತ್ತರ.

2. ಈ ಕೆಳಗಿನ ಯಾವ ಕೃತಿಯು ಭಾರತದಲ್ಲಿ ಉರ್ದುವಿನಲ್ಲಿ ಬಂದ ಮೊದಲ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ?
ಎ. ಮಿರಾಜ್ ಉಲ್ ಆಷಿಕೀನ್
ಬಿ. ಷಿಕಾರ್ ನಾಮಾ
ಸಿ. ಬಹಮನ್ ನಾಮಾ
ಡಿ. ತಾರೀಖ್ ಎ ಫೆರಿಷ್ಟಾ
ಉತ್ತರ.

3. ಈ ಕೆಳಗಿನ‌ ಹೇಳಿಕೆಗಳನ್ನು ಪರಿಶೀಲಿಸಿರಿ
ಎ.ಕೆಳದಿಯ ಅರಸ ಶಿವಪ್ಪ ನಾಯಕನು ಜಾರಿಗೆ ತಂದ ವ್ಯವಸ್ಥಿತವಾದ ಕಂದಾಯ ವ್ಯವಸ್ಥೆಯನ್ನು ಶಿಸ್ತು ಎಂದು
ಕರೆಯಲಾಗುತ್ತದೆ.
ಬಿ. ಶಿಸ್ತು ಪದ್ಧತಿಯು ಅಕ್ಬರನ ಜ್ಯಬ್ತಿಯನ್ನು ಹೋಲುತ್ತದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
1. ಹೇಳಿಕೆ ಎ ಸರಿಯಾಗಿದೆ.
2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ. 4

4. ಈ ಕೆಳಗಿನವರಲ್ಲಿ ನವಕೋಟಿ ನಾರಾಯಣ ಎಂದು ಹೆಸರುವಾಸಿಯಾದವರು ಯಾರು ?
ಎ. ಚಿಕ್ಕದೇವರಾಜ ಒಡೆಯರ್
ಬಿ. ಚಾಮರಾಜ ಒಡೆಯರ್
ಸಿ. ನರಸರಾಜ ಒಡೆಯರ್
ಡಿ. ಯದುರಾಯ
ಉತ್ತರ.

5. ಬೆಂಗಳೂರಿನ ನಿರ್ಮಾತೃ ಎಂದು ಕರೆಯಲ್ಪಡುವಂತಹ ಕೆಂಪೇಗೌಡನಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
?

1. ಬೆಂಗಳೂರು ನಗರ ನಿರ್ಮಾಣವನ್ನು ಕೈಗೊಂಡದ್ದು.
2. ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಗಡಿ ಚಿಹ್ನೆಗಳನ್ನು ಕಟ್ಟಿಸಿದ್ದು.
3. ಪ್ರಜಾ ವತ್ಸಲ ಮತ್ತು ಅರಿಗಳಿಗೆ ಗಂಡ ಭೇರುಂಡ ಎಂಬ ಬಿರುದನ್ನು ಪಡೆದುಕೊಂಡಿದ್ದನು
4. ಇವನು ಕೆಂಪಾಂಬುದಿ, ಧರ್ಮಾಂಬುಧಿ ಹಾಗೂ ಸಂಪಂಗಿ ಮುಂತಾದ ಕೆರೆಗಳನ್ನು ಕಟ್ಟಿಸಿದನು
ಎ. 1,2,3 ಮತ್ತು 4
ಬಿ. 2, 3 ಮತ್ತು 4 ಮಾತ್ರ.
ಸಿ. 1, 2 ಮತ್ತು 4 ಮಾತ್ರ
ಡಿ. 1 ಮತು 2 ಮಾತ್ರ

ಉತ್ತರ.

6. ಪ್ರಥಮ‌ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಹೈದರ್ ನ ವಿರುದ್ಧ ನಿಜಾಮ‌ ಮತ್ತು ಮರಾಠರನ್ನು
ಒಗ್ಗೂಡಿಸಿಯೂ ಅಂತಿಮವಾಗಿ ಹೈದರನ‌ ಗೆಲುವಿಗೆ ಕಾರಣಗಳು ಯಾವುದು ?

ಎ. ಹೈದರನು ನಿಜಾಮನೊಂದಿಗೆ ಮನವೊಲಿಸಿ ಒಪ್ಪಂದವನ್ನು ಮಾಡಿಕೊಂಡದ್ದು.
ಬಿ. ಮರಾಠರನ್ನು ಯುದ್ಧ ರಂಗದಿಂದ ವಿಮುಖರನ್ನಾಗಿ ಮಾಡಿದ್ದು.
ಸಿ. ಇಂಗ್ಲೀಷರನ್ನು ಏಕಾಂಗಿಯಾಗಿಸಿ ಅವರ ಮೇಲೆ ದಾಳಿ ನಡೆಸಿರುವುದು.
ಡಿ. ಹೈದರನ ರಾಜತಾಂತ್ರಿಕ ನೈಪುಣ್ಯತೆ ಮತ್ತು ಯುದ್ಧದಲ್ಲಿ ಕ್ಷಿಪ್ರಗತಿಯ ಮುನ್ನಡೆ.

1. 1,2,3 ಮತ್ತು 4
2. 2, 3 ಮತ್ತು 4 ಮಾತ್ರ.
3. 1, 2 ಮತ್ತು 4 ಮಾತ್ರ
4. 1 ಮತು 2 ಮಾತ್ರ

ಉತ್ತರ.

7. ಎರಡನೇ ಆಂಗ್ಲೋ ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ?
ಎ. ಮದ್ರಾಸ್ ಒಪ್ಪಂದ
ಬಿ. ಮೈಸೂರು ಒಪ್ಪಂದ
ಸಿ. ಸಾಲ್ಬಾಯಿ ಒಪ್ಪಂದ
ಡಿ. ಶ್ರೀರಂಗಪಟ್ಟಣ ಒಪ್ಪಂದ
ಉತ್ತರ. ಬಿ

8. ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಬಂದಂತಹ ಸಾಯರ್ ಸುಂಕವು ಈ ಕೆಳಗಿನ ಯಾವ ವಸ್ತುಗಳ ಮೇಲೆ ವಿಧಿಸುವ
ಸುಂಕವಾಗಿತ್ತು ?
ಎ. ಸಾಗಣಿಕೆ ಮಾಡುವ ವಸ್ತುಗಳ ಮೇಲೆ ವಿಧಿಸುವ ಸುಂಕ.
ಬಿ. ತಯಾರಿಸಲ್ಪಟ್ಟ ವಸ್ತುಗಳು ಮಾರುಕಟ್ಟೆಗೆ ಬರುವ ಮುನ್ನವೇ ಹಾಕುವ ತೆರಿಗೆ.
ಸಿ. ಸಿದ್ದ ವಸ್ತುಗಳ ಮೇಲೆ ಹಾಕಲಾದ ಮಾರಾಟ ತೆರಿಗೆ.
1. ಎ ಮತ್ತು ಬಿ ಸರಿಯಾಗಿದೆ
2. ಎ ಮತ್ತು ಸಿ ಸರಿಯಾಗಿದೆ.
3. ಎಲ್ಲವೂ ತಪ್ಪಾಗಿದೆ
4. ಎಲ್ಲವೂ ಸರಿಯಾಗಿದೆ.
ಉತ್ತರ. 4

9. ಮೈಸೂರು ಸಂಸ್ಥಾನದಲ್ಲಿ ಒಂದೇ ಗ್ರಾಮ ಅಥವಾ ಹಲವಾರು ಗ್ರಾಮಗಳ ರೈತರು ಒಟ್ಟಾಗಿ ತಮ್ಮ ಕೃಷಿ ಉತ್ಪನ್ನದ ಮೇಲೆಕಂದಾಯ ಪಾವತಿಸುವ ಪದ್ದತಿಯಿದ್ದು ಇದನ್ನು ಏನೆಂದು ಕರೆಯಲಾಗುತ್ತಿತ್ತು ?
ಎ. ಪ್ರಜಾಗುತ್ತಿ
ಬಿ.‌ ಒಂಟಿಗತ್ತ
ಸಿ. ಕುಲಗುತ್ತಿ
ಡಿ. ಚಗಾರ್ ಗುತ್ತಿ
ಉತ್ತರ. ಬಿ

10. ಮೈಸೂರು ಸಂಸ್ಥಾನದ ಅರಸರಲ್ಲಿ ಕನ್ನಡ ಭೋಜ ಎಂದು ಖ್ಯಾತರಾದವರು ಯಾರು
ಎ. ಮುಮ್ಮಡಿ ಕೃಷ್ಣರಾಜರು
ಬಿ.‌ನಾಲ್ವಡಿ ಕೃಷ್ಣರಾಜರು
ಸಿ. ಶ್ರೀ ಕೃಷ್ಣದೇವರಾಯ
ಡಿ.‌ ಚಿಕ್ಕದೇವರಾಜ ಒಡೆಯರು
ಉತ್ತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT