ಈ ಮೊದಲು ಮಾರ್ಚ್ 9ರಿಂದ ಪರೀಕ್ಷೆ ನಡೆಸುವುದಾಗಿ ತಿಳಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದ ಈವೇಳಾಪಟ್ಟಿಯನ್ನು ಬದಲಿಸಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಪ್ರತಿದಿನ ಬಳಿಗ್ಗೆ 10.30ರಿಂದ 12ರವರೆಗೆ ಪರೀಕ್ಷೆ ನಡೆಯಲಿದೆ. ಮಾರ್ಚ್ 16ರಂದು ಪ್ರಥಮ ಭಾಷೆ, 17ರಂದು ದ್ವಿತೀಯ ಭಾಷೆ, 18ರಂದು ತೃತೀಯ ಭಾಷೆ, 19ರಂದು ಗಣಿತ, 20ರಂದು ವಿಜ್ಞಾನ ಹಾಗೂ 21ರಂದು ಸಮಾಜ ವಿಜ್ಞಾನ ಪರೀಕ್ಷೆ ಇದೆ. ದೈಹಿಕ ಶಿಕ್ಷಣ ಪರೀಕ್ಷೆ 23ರಂದು ಶಾಲಾ ಹಂತದಲ್ಲೇ ನಡೆಯಲಿದೆ.