ಆರ್ಥಿಕವಾಗಿ ಹಿಂದುಳಿದ ಪ್ರತಿಭಾ ವಂತರಿಗೆ ತಾಂತ್ರಿಕ ಕೋರ್ಸ್ ಗಳನ್ನು ಕಲಿಯಲು ಈ ಸ್ಕಾಲರ್ಷಿಪ್ ನೆರವಾಗುತ್ತದೆ.

ಅರ್ಹತೆ: ಎಂಜಿನಿಯರಿಂಗ್, ಇಂಟಿಗ್ರೇಟೆಡ್ ಎಂ.ಟೆಕ್, ಎಂಬಿಬಿಎಸ್ ಮತ್ತು ಐದು ವರ್ಷದ ಕಾನೂನು ಶಿಕ್ಷಣ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು 2023ರಲ್ಲಿ ಅಥವಾ ನಂತರದ ವರ್ಷಗಳಲ್ಲಿ 12ನೇ ತರಗತಿ/ ಇಂಟರ್ಮೀಡಿಯಟ್/ ಹೈಯರ್ ಸೆಕೆಂಡರಿ/ ಪ್ರೀ-ಯೂನಿವರ್ಸಿಟಿ / ಐಎಸ್ಸಿ/ ಸಿಬಿಎಸ್ಇ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ 70ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ರಾಜ್ಯ ಅಥವಾ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆ ಅಥವಾ ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕ ವೃತ್ತಿಪರ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿರಬೇಕು. ಕುಟುಂಬದ ಒಟ್ಟು ಆದಾಯವು ವರ್ಷಕ್ಕೆ ₹ 3 ಲಕ್ಷ ಮೀರಿರಬಾರದು.

ಸಂಪೂರ್ಣ ಕೋರ್ಸ್ ಅವಧಿಗೆ ₹ 50,000 ನೀಡಲಾಗುತ್ತದೆ. ಜೊತೆಗೆ, ಇಂಗ್ಲಿಷ್, ತಂತ್ರಜ್ಞಾನ, ನಾಯಕತ್ವ ಮತ್ತು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಅನುವಾಗುವಂತೆ ಕೌಶಲಾಭಿವೃದ್ಧಿ ತರಬೇತಿ ಕೊಟ್ಟು, ಉದ್ಯೋಗಕ್ಕೆ ಸಜ್ಜುಗೊಳಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 31-12-2025

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್. ಮಾಹಿತಿಗೆ: Short Url: www.b4s.in/praja/FFES

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.