ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ: ಬಹು ಆಯ್ಕೆ ಮಾದರಿ ಪ್ರಶ್ನೋತ್ತರಗಳು

Published 22 ಜೂನ್ 2023, 0:27 IST
Last Updated 22 ಜೂನ್ 2023, 0:27 IST
ಅಕ್ಷರ ಗಾತ್ರ


1. ಭಾರತದ ಕೆಳಗಿನ ಯಾವ ರಾಜ್ಯದಲ್ಲಿ ಕೋಲ್ಮಿಂಚಿನ ಘಟನೆಗಳು ಹೆಚ್ಚಾಗಿ ಕಂಡುಬರುತ್ತವೆ?

ಎ. ಒಡಿಶಾ ಬಿ. ನಾಗಾಲ್ಯಾಂಡ್

ಸಿ. ಉತ್ತರ ಪ್ರದೇಶ ಡಿ. ಮಧ್ಯಪ್ರದೇಶ

⇒ಉತ್ತರ : ಎ

2. ಇತ್ತೀಚಿಗೆ ಕೆನಡಾದ ಯಾವ ಪ್ರದೇಶಗಳಲ್ಲಿ ಕಾಡ್ಗಿಚ್ಚುಗಳ ಘಟನೆಗಳು ಹೆಚ್ಚಾಗಿ ಕಂಡುಬಂದಿವೆ?

1. ಬ್ರಿಟಿಷ್ ಕೊಲಂಬಿಯಾ 2. ಆಲ್ಬರ್ಟಾ

3. ಒಂಟಾರಿಯೋ 4. ನೋವಾ ಸ್ಕಾಟಿಯಾ

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1 ಮಾತ್ರ                  ಬಿ. 1, 2, 3 ಮತ್ತು 4

ಸಿ. 2 ಮತ್ತು 3               ಡಿ. 3 ಮತ್ತು 4.

⇒ಉತ್ತರ: ಬಿ

3. ಕೆಳಗಿನ ಯಾವ ರಾಷ್ಟ್ರಗಳು ಯುನೆಸ್ಕೊ ಸಂಸ್ಥೆಯ ಸದಸ್ಯತ್ವವನ್ನು ಹೊಂದಿದ್ದು ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿರುವುದಿಲ್ಲ?

1. ಪ್ಯಾಲೆಸ್ತೀನ್ 2. ಕುಕ್ಕು ದ್ವೀಪಗಳು

3. ನ್ಯೂ (Niue) 4. ಇಸ್ರೇಲ್

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1, 2 ಮತ್ತು 3                       ಬಿ. 1 ಮತ್ತು 2

ಸಿ. 1 ಮತ್ತು 4                            ಡಿ. 3 ಮತ್ತು 4.

⇒ಉತ್ತರ : ಎ

4. ಜಾಗತಿಕ ಮಟ್ಟದಲ್ಲಿ ಅಣುಬಾಂಬ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಅಣು ಬಾಂಬ್‌ಗಳ ದಾಸ್ತಾನು ರಷ್ಯಾದಲ್ಲಿದೆ.

2. ಪ್ರಸ್ತುತ ಸಂದರ್ಭದಲ್ಲಿ ನಾಲ್ಕು ರಾಷ್ಟ್ರಗಳು ತಮ್ಮ ರಕ್ಷಣಾ ಪಡೆಗಳಲ್ಲಿ ಅಣುಬಾಂಬ್‌ಗಳನ್ನು ನಿಯೋಜಿಸಿದೆ.

3. ರಕ್ಷಣಾ ಪಡೆಗಳಲ್ಲಿ ಅಣು ಬಾಂಬ್‌ಗಳನ್ನು ನಿಯೋಜಿಸಿರುವ ರಾಷ್ಟ್ರಗಳಲ್ಲಿ ಚೀನಾ ಕೂಡ ಒಂದಾಗಿದೆ.

ಕೋಡ್‌ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1 ಮಾತ್ರ                  ಬಿ. 1 ಮತ್ತು 2

ಸಿ. 2 ಮತ್ತು 3               ಡಿ. 3 ಮಾತ್ರ.

⇒ಉತ್ತರ : ಬಿ

5. ಗಣಿಗಾರಿಕೆಗೆ ಸಂಬಂಧಿಸಿದಂತೆ ಇತ್ತೀಚಿಗೆ ಯಾವ ನದಿ ಪಾತ್ರ ವ್ಯವಸ್ಥೆ ಸುದ್ದಿಗೆ ಕಾರಣವಾಗಿತ್ತು?

ಎ. ಗೌಲ  ಬಿ. ಗಂಗಾ 

ಸಿ. ಯಮುನಾ ಡಿ. ಗೋದಾವರಿ 

⇒ಉತ್ತರ : ಎ

6. ಇತ್ತೀಚಿಗೆ ಕೆಳಗಿನ ಯಾವ ದ್ವೀಪದ ಹೆಸರನ್ನು ಕೆ'ಗರಿ ಎಂದು ನಾಮಕರಣ ಮಾಡಲಾಗಿದೆ?

ಎ. ಪ್ರಗತಿ ದ್ವೀಪ. ಬಿ. ಉನ್ನತಿ ದ್ವೀಪ.

ಸಿ. ಫ್ರೇಜರ್ ದ್ವೀಪಗಳು. ಡಿ. ಸಭಾಂಗ್ ದ್ವೀಪಗಳು.

⇒ಉತ್ತರ : ಸಿ

7. ಭಾರತಕ್ಕೆ ಸ್ವದೇಶಿ ದಿಕ್ಸೂಚಿ ಏಕೆ ಅವಶ್ಯಕವಾಗಿದೆ?

ಎ. ಭಾರತದ ಸುತ್ತಲಿನ 1500 ಕಿಲೋಮೀಟರ್ ವರೆಗಿನ ಸ್ಥಳಗಳ ಮಾಹಿತಿ ಪಡೆಯಲು ಸಹಾಯಕವಾಗಲಿದೆ.

ಬಿ. ಅಮೆರಿಕಾದ ಜಿಪಿಎಸ್ ಮೇಲಿನ ಅವಲಂಬನೆ ಕಡಿಮೆಗೊಳಿಸಲು ಸಹಾಯಕವಾಗಲಿದೆ.

ಕೋಡ್‌ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

⇒ಉತ್ತರ: ಸಿ.

8. ಐರೋಪ್ಯ ಒಕ್ಕೂಟದ ದಿಕ್ಸೂಚಿ ವ್ಯವಸ್ಥೆಯ ಹೆಸರೇನು?

ಎ. ಜಿಪಿಎಸ್. ಬಿ. ಗ್ಲೋನಾಸ್

ಸಿ. ಗೆಲಿಲಿಯೊ ಡಿ. ಬೇಡೌ

⇒ಉತ್ತರ: ಸಿ.

9. ಸಿಂಧೂ ನಾಗರಿಕತೆಯ ಅವನತಿಯ ಕುರಿತು ಐಐಟಿ ಖರಗ್ ಪುರ ಸಂಶೋಧನಾ ತಂಡ ನೀಡಿದ ವರದಿ ಪ್ರಮುಖವಾದ ಅಂಶಗಳು ಯಾವುವು

ಎ. ಸಿಂಧೂ ನಾಗರಿಕತೆಯ ಅವನತಿಗೆ ಹವಾಮಾನ ವೈಪರೀತ್ಯ ಕಾರಣವಾಗಿದೆ.

ಬಿ. ತೀವ್ರವಾದ ಮುಂಗಾರು ಮಳೆಯ ಪರಿಣಾಮದಿಂದ ನದಿಯಲ್ಲಿ ನೀರು ಉಕ್ಕಿ ಹರಿದದು.

ಕೋಡ್‌ ಬಳಸಿ ಸರಿಯಾದ ಉತ್ತರ ಗುರುತಿಸಿ

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

⇒ಉತ್ತರ:ಸಿ.

10. ಹರಪ್ಪ ನಾಗರಿಕತೆಯ ಜನ ಯಾವ ರೀತಿ ವ್ಯವಸಾಯ ಮಾಡುತ್ತಿದ್ದರು?

ಎ. ಗೋಧಿ, ಬಾರ್ಲಿ ಮತ್ತು ಭತ್ತ ಬೆಳೆಯುತ್ತಿದ್ದರು.

ಬಿ. ಮನೆಗಳಲ್ಲಿ ಆಹಾರ ಧಾನ್ಯಗಳ ಸಂಸ್ಕರಣೆ ಪದ್ದತಿ ಇತ್ತು.

ಕೋಡ್‌ ಬಳಸಿ ಸರಿಯಾದ ಉತ್ತರ  ಗುರುತಿಸಿ

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.
⇒ಉತ್ತರ-ಸಿ.

11. ನ್ಯಾವಿಗೇಶನ್ ಉಪಗ್ರಹಗಳು ಯಾವ ಕಾರ್ಯಗಳಿಗೆ ಉಪಯುಕ್ತವಾಗಲಿವೆ?

ಎ. ಬಳಕೆದಾರರಿಗೆ ತಾವಿರುವ ನಿಖರ ಸ್ಥಳದ ಮಾಹಿತಿ ಅರಿಯಲು ಸಹಾಯಕವಾಗಲಿದೆ.

ಬಿ. ಭೂಪಟಗಳ ಸೇವೆ ಮತ್ತು ಕ್ಷಿಪಣಿಗಳ ಡೇಟಾ ತಿಳಿಯಲು ಸಹಾಯಕವಾಗಲಿದೆ.

ಕೋಡ್‌ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

⇒ಉತ್ತರ:ಸಿ.

12. ಮೊಹೆಂಜೊದಾರೊ ಎಂಬ ನಗರವನ್ನು ಶೋಧಿಸಿದವರಾರು?

ಎ. ಆರ್ ಡಿ ಬ್ಯಾನರ್ಜಿ  ಬಿ. ದಯಾರಾಮ್ ಸಹಾನಿ 

ಸಿ. ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್  ಡಿ. ಸರ್ ಜಾನ್ ಮಾರ್ಷಲ್ 

⇒ಉತ್ತರ: ಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT