‘ಇಂದಿನ ಪರಿಸ್ಥಿತಿಯಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಹಾಗೂ ಆಕರ್ಷಕ ಉದ್ಯೋಗಾವಕಾಶಗಳಿರುವ ಕ್ಷೇತ್ರ ಯಾವುದು?’– ಇದು, ಇತ್ತೀಚೆಗೆ ನಡೆದ ಸಂವಾದವೊಂದರಲ್ಲಿ ಪಿಯುಸಿ ವಿದ್ಯಾರ್ಥಿಗಳು ಕೇಳಿದ ಮಹತ್ವದ ಪ್ರಶ್ನೆ.

ಈ ಕಾಲಘಟ್ಟದಲ್ಲಿ ಯುದ್ಧಗಳು, ಆರ್ಥಿಕ ಸಂಘರ್ಷ, ಕೃತಕ ಬುದ್ಧಿಮತ್ತೆಯ ವ್ಯಾಪಕ ಬಳಕೆಯಿಂದ ಆಗುತ್ತಿರುವ ಉದ್ಯೋಗ ಕಡಿತದಂತಹ ಬೆಳವಣಿಗೆಗಳು ವಿದ್ಯಾರ್ಥಿಗಳಲ್ಲಿ ಆತಂಕ, ಗೊಂದಲವನ್ನು ಉಂಟುಮಾಡುವುದು ಸಹಜ. ಹಾಗಾಗಿ, ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುತ್ತಿರುವ ಯುವ ಮನಸ್ಸುಗಳಿಗೆ ಮಾರ್ಗದರ್ಶನದ ಅಗತ್ಯ ಹೆಚ್ಚಾಗಿದೆ.

ಈ ಸವಾಲುಗಳ ನಡುವೆಯೂ ವೇಗವಾಗಿ ಬೆಳೆಯುತ್ತಿರುವ ಮತ್ತು ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವ ಕ್ಷೇತ್ರವೆಂದರೆ ‘ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣೆ’. ವರ್ಲ್ಡ್ ಟ್ರಾವೆಲ್ ಆ್ಯಂಡ್ ಟೂರಿಸಂ ಕೌನ್ಸಿಲ್ ವರದಿಗಳ ಪ್ರಕಾರ, ಅಭಿವೃದ್ಧಿಯ ಪಥದಲ್ಲಿರುವ ಈ ಕ್ಷೇತ್ರವು ಮಾನವ ಸಂಪನ್ಮೂಲದ ದೊಡ್ಡ ಕೊರತೆಯನ್ನು ಎದುರಿಸುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ, ಜಾಗತಿಕ ಮಟ್ಟದಲ್ಲಿ ಸುಮಾರು 9.1 ಕೋಟಿಯಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಆದರೆ, ಲಭ್ಯವಿರುವ ಮಾನವ ಸಂಪನ್ಮೂಲ 4.8 ಕೋಟಿ ಮಾತ್ರ ಎನ್ನಲಾಗುತ್ತಿದೆ. ಅಂದರೆ, ಸುಮಾರು 4.3 ಕೋಟಿಯಷ್ಟು ಕೊರತೆ ಎದುರಾಗಬಹುದು.

ಭಾರತವೂ ವಿಶ್ವದ ಪ್ರಮುಖ ಪ್ರವಾಸಿ ದೇಶಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಮುಂದಿನ ದಶಕದಲ್ಲಿ, ಭಾರತದಲ್ಲೇ ಸುಮಾರು 1.1 ಕೋಟಿಯಷ್ಟು ಮಾನವ ಸಂಪನ್ಮೂಲದ ಅಗತ್ಯವಿದೆ ಎಂದು ಇದೇ ವರದಿಗಳು ಸೂಚಿಸುತ್ತವೆ. ವಿಶೇಷವಾಗಿ, ವೈವಿಧ್ಯಮಯ ಪ್ರವಾಸಿ ತಾಣಗಳಿರುವ ಕರ್ನಾಟಕ ರಾಜ್ಯವೂ ಈ ಕ್ಷೇತ್ರದ ಮುಂಚೂಣಿಯಲ್ಲಿದೆ. ಒಟ್ಟಾರೆ, ಪ್ರವಾಸೋದ್ಯಮ ಕ್ಷೇತ್ರವು ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡುವುದರ ಜೊತೆಗೆ ನೇರ ಹಾಗೂ ಪರೋಕ್ಷವಾಗಿ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವುದರಿಂದ, ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭರವಸೆಯನ್ನು ನೀಡುವ ಕ್ಷೇತ್ರವಾಗಿದೆ.

ಕೋರ್ಸ್, ವಿಷಯ, ಕಾಲೇಜು
ಪಿಯುಸಿ ನಂತರ ಆಯ್ಕೆ ಮಾಡಿಕೊಳ್ಳಬಹುದಾದ ಪ್ರಮುಖ ಕೋರ್ಸ್ಗಳಲ್ಲಿ ಬಿ.ಬಿ.ಎ (ಟ್ರಾವೆಲ್ ಆ್ಯಂಡ್ ಟೂರಿಸಂ) ಪ್ರಮುಖವಾಗಿದೆ. ಇದಲ್ಲದೆ, ಕೆಲವು ಕಾಲೇಜುಗಳು/ವಿಶ್ವವಿದ್ಯಾಲಯಗಳು ಬಿ.ಬಿ.ಎ (ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜ್ಮೆಂಟ್), ಬಿ.ಕಾಂ (ಟೂರಿಸಂ), ಬಿ.ಎ (ಟೂರಿಸಂ) ಮುಂತಾದ ಕೋರ್ಸ್ಗಳನ್ನು ನೀಡುತ್ತವೆ.

ಸರ್ಕಾರಿ ವಿಶ್ವವಿದ್ಯಾಲಯಗಳು ಹಾಗೂ ಖಾಸಗಿ ಕ್ಷೇತ್ರದ ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರಮುಖ ಕಾಲೇಜುಗಳು ಪ್ರವಾಸೋದ್ಯಮ ಸಂಬಂಧಿತ ಕೋರ್ಸ್ಗಳನ್ನು ನೀಡುತ್ತಿವೆ. ಹೆಚ್ಚಿನ ಕಾಲೇಜುಗಳಲ್ಲಿ ಪಿಯುಸಿ ಅಂಕಗಳ ಆಧಾರದ ಮೇಲೆ ಪ್ರವೇಶ ದೊರೆಯುತ್ತದೆ. ಕೆಲವು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಆನ್ಲೈನ್ ಅರ್ಜಿ ಮತ್ತು ಸಂದರ್ಶನ ಪ್ರಕ್ರಿಯೆ ಇರುತ್ತದೆ.

ಈ ಕ್ಷೇತ್ರದಲ್ಲಿನ ಯಶಸ್ಸಿಗೆ ಪದವಿಯ ಜೊತೆಗೆ ಸೂಕ್ತ ಆಸಕ್ತಿ ಮತ್ತು ಕೌಶಲಗಳು ಅಗತ್ಯ. ಉತ್ತಮ ಸಂವಹನ ಹಾಗೂ ಪ್ರಸ್ತುತೀಕರಣ ಕೌಶಲ, ತಾರ್ಕಿಕ ಹಾಗೂ ವಿಮರ್ಶಾತ್ಮಕ ಚಿಂತನೆ, ಸಂಖ್ಯಾ ಜ್ಞಾನ, ನೆಟ್ವರ್ಕಿಂಗ್ ಮತ್ತು ಮಾನವ ಸಂಬಂಧ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಪ್ರಾಥಮಿಕ ಕೌಶಲಗಳಾದ ಸ್ವಯಂಪ್ರೇರಣೆ, ಸಮಯದ ನಿರ್ವಹಣೆ, ಸಕಾರಾತ್ಮಕ ಮನೋಭಾವ, ಬದ್ಧತೆ, ಆತ್ಮವಿಶ್ವಾಸ, ಉತ್ಸಾಹ, ಪ್ರಾಮಾಣಿಕತೆ ಇರಬೇಕು.

ಕೋವಿಡ್- 19ರ ಸಮಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ತಾತ್ಕಾಲಿಕ ಕುಸಿತ ಕಂಡಿದ್ದರೂ, ಈಗ ಪುನರುಜ್ಜೀವನಗೊಂಡು ಅಭಿವೃದ್ಧಿಯ ಪಥದಲ್ಲಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸ ಹೆಚ್ಚುತ್ತಿರುವ ಕಾರಣದಿಂದ, ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣೆಯಲ್ಲಿ ಪದವಿ ಪಡೆದವರಿಗೆ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.