ವಿದ್ಯಾರ್ಥಿವೇತನ: ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಪ್ರೋತ್ಸಾಹನ್ ವಿದ್ಯಾರ್ಥಿವೇತನ 2019–20

ವಿವರ: ಎಂಬಿಎ, ಬಿಎ– ಎಲ್‌ಎಲ್‌ಬಿ ಮತ್ತು ಸಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಈ ವಿದ್ಯಾರ್ಥಿವೇತನ ನೀಡಲಿದೆ. ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಯಶಸ್ವಿಯಾಗಿ ವೃತ್ತಿಪರ ಕೋರ್ಸ್‌ಗಳನ್ನು ಪೂರೈಸುವುದಕ್ಕೆ ನೆರವಾಗುವ ಉದ್ದೇಶವನ್ನು ಈ ವಿದ್ಯಾರ್ಥಿವೇತನ ಹೊಂದಿದೆ.

ಅರ್ಹತೆ: ಎಂಬಿಎ, ಸಿಎ ಮತ್ತು ಬಿಎ–ಎಲ್‌ಎಲ್‌ಬಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 12ನೇ ತರಗತಿ ಮತ್ತು ಪದವಿಯಲ್ಲಿ ಶೇ 65ಕ್ಕೂ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹ 8 ಲಕ್ಷ ಮೀರಿರಬಾರದು.

ಆರ್ಥಿಕ ನೆರವು: ಎಂಬಿಎ ವಿದ್ಯಾರ್ಥಿಗಳಿಗೆ ₹ 2 ಲಕ್ಷ, ಸಿಎ ವಿದ್ಯಾರ್ಥಿಗಳಿಗೆ ₹30,000 ದಿಂದ ₹50,000, ಎಲ್‌ಎಲ್‌ಬಿ ವಿದ್ಯಾರ್ಥಿಗಳಿಗೆ ₹75,000 ಆರ್ಥಿಕ ನೆರವು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2020ರ ಜನವರಿ 30

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಮಾಹಿತಿಗೆ: http://www.b4s.in/praja/PHF5

ವಿದ್ಯಾರ್ಥಿ ವೇತನ: ಜೆ.ಎನ್.ಟಾಟಾ ದತ್ತಿ ಲೋನ್ ವಿದ್ಯಾರ್ಥಿವೇತನ

ವಿವರ: ವಿದೇಶದಲ್ಲಿ ಉನ್ನತ ಶಿಕ್ಷಣ ಮಾಡಬಯಸುವ ವಿದ್ಯಾರ್ಥಿಗಳಿಗೆ ಜೆ.ಎನ್. ಟಾಟಾ ದತ್ತಿ ಸಾಲರೂಪದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿವೇತನವನ್ನು ಈಗಾಗಲೇ ಒಮ್ಮೆ ಪಡೆದಿರುವ ಅಭ್ಯರ್ಥಿಗಳು ಅದೇ ಕೋರ್ಸ್ ಅಧ್ಯಯನಕ್ಕೆ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತಿಲ್ಲ.

ಅರ್ಹತೆ: ಭಾರತದಲ್ಲಿ ನೊಂದಾಯಿತ ವಿಶ್ವವಿದ್ಯಾಲಯ/ ಕಾಲೇಜು/ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಅಥವಾ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ₹ 1 ಲಕ್ಷದಿಂದ 10 ಲಕ್ಷದವರೆಗೆ ಒಮ್ಮೆ ಮಾತ್ರ ಸಾಲ ರೂಪದ ವಿದ್ಯಾರ್ಥಿವೇತನ ನೀಡಲಾಗುತ್ತದೆ.ಆಯ್ಕೆಯಾಗುವ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅನುಗುಣವಾಗಿ ಸಾರಿಗೆ ಭತ್ಯೆ ಮತ್ತು ಬಹುಮಾನ ದೊರೆಯುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2020ರ ಮಾರ್ಚ್ 9

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಮಾಹಿತಿಗೆ: http://www.b4s.in/praja/JNT3

ವಿದ್ಯಾರ್ಥಿವೇತನ: ಪ್ರತಿಭಾವಂತ ವಿದ್ಯಾರ್ಥಿಗಳಿಗೆಎಸ್‌ಟಿಎಫ್‌ಸಿವಿದ್ಯಾರ್ಥಿವೇತನ

ವಿವರ: ಸರಕು ಸಾಗಣೆ ವಾಹನಗಳ ಚಾಲಕರ ಕುಟುಂಬಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಅಧ್ಯಯನಕ್ಕೆ ಹಣಕಾಸಿನ ನೆರವು ನೀಡಲು ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿ ಈ ವಿದ್ಯಾರ್ಥಿವೇತನ ನೀಡಲಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಅಧ್ಯಯನಕ್ಕೆ ವಿದ್ಯಾರ್ಥಿವೇತನ ದೊರೆಯಲಿದೆ.

ಅರ್ಹತೆ: ವಿದ್ಯಾರ್ಥಿಗಳು ಡಿಪ್ಲೊಮಾ /ಐಟಿಐ/ ಪಾಲಿಟೆಕ್ನಿಕ್ ಅಥವಾ ಪದವಿ/ ಎಂಜಿನಿಯರಿಂಗ್ (3-4 ವರ್ಷ) ಕೋರ್ಸ್‌ಗಳಿಗೆ ದಾಖಲಾಗಿರಬೇಕು. ಅವರು 10 ಮತ್ತು 12ನೇ ತರಗತಿಯಲ್ಲಿ ಶೇ 60ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅರ್ಜಿದಾರರು ಕಡ್ಡಾಯವಾಗಿ ಸರಕು ಸಾಗಣೆ ವಾಹನ ಚಾಲಕರ ಕುಟುಂಬದವರಾಗಿರಬೇಕು. ಅವರ ಕುಟುಂಬದ ವಾರ್ಷಿಕ ಆದಾಯ₹ 4 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ಐಟಿಐ/ ಪಾಲಿಟೆಕ್ನಿಕ್/ ಡಿಪ್ಲೊಮಾ ವಿದ್ಯಾರ್ಥಿಗಳಿಗೆ (ಗರಿಷ್ಠ 3 ವರ್ಷ) ವಾರ್ಷಿಕ ₹15 ಸಾವಿರ ಹಾಗೂ ಪದವಿ/ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ (ಗರಿಷ್ಠ 4 ವರ್ಷ) ವಾರ್ಷಿಕ ₹ 35 ಸಾವಿರ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಕೆ ಕೊನೆಯ ದಿನ: 2020ರ ಜನವರಿ 31

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಮಾಹಿತಿಗೆ: http://www.b4s.in/praja/STFC1

ಕೃಪೆ: buddy4study.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.