ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆಗೆ ಕ್ಷಣಗಣನೆ

Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ನಮ್ಮಲ್ಲಿ ಕಲಿಯುವ ಹಂಬಲವನ್ನು ಹುಟ್ಟು ಹಾಕಿ, ಕಲಿಕಾಮಟ್ಟವನ್ನು ಹೆಚ್ಚಿಸುವುದೇ ರಸಪ್ರಶ್ನೆ. ಸಾಮಾನ್ಯಜ್ಞಾನವನ್ನು  ಹೆಚ್ಚಿಸಿಕೊಳ್ಳಲೂ ಇದು ಸಹಕಾರಿ.
 
ಮಕ್ಕಳ ಕಲಿಕಾ ಸಾಮರ್ಥ್ಯ ಹಾಗೂ ಬುದ್ಧಿಶಕ್ತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಜಾವಾಣಿ ಪ್ರತಿ ವರ್ಷ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಷ್‌’ ಆಯೋಜಿಸುತ್ತದೆ. ಈ ಬಾರಿಯ ರಸಪ್ರಶ್ನೆ ಸ್ಪರ್ಧೆಗೆ ಕ್ಷಣಗಣನೆ ಆರಂಭವಾಗಿದೆ. ಜನವರಿ 4ರಿಂದ ಜನವರಿ 21ರವರೆಗೆ ಈ ಸ್ಪರ್ಧೆ ರಾಜ್ಯದ ನಾನಾ ಭಾಗಗಳಲ್ಲಿ ನಡೆಯಲಿದೆ. ಮೈಸೂರು, ಹಾಸನ, ಮಂಗಳೂರು, ಕಲಬುರ್ಗಿ, ರಾಯಚೂರು, ಧಾರವಾಡ, ದಾವಣಗೆರೆ, ಶಿವಮೊಗ್ಗ, ತುಮಕೂರು, ಬೆಂಗಳೂರಿನಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಮೊದಲು ಶಾಲಾ ಮಟ್ಟದಲ್ಲಿ, ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ, ಸ್ಪರ್ಧೆ ನಡೆಯುತ್ತದೆ. ಕಾರ್ಯಕ್ರಮದ ಆಯೋಜಕರು ಪ್ರತಿ ಶಾಲೆಗೂ ರಸಪ್ರಶ್ನೆಗಳನ್ನು ಕಳುಹಿಸಿರುತ್ತಾರೆ. ಶಾಲಾ ಸುತ್ತಿನಲ್ಲಿ ಮೂರು ವಿಜೇತ ತಂಡಗಳನ್ನು ಆಯ್ದು ಅದನ್ನು ಮೊದಲ ಹಂತದ ಸ್ಪರ್ಧೆಗೆ ಆಹ್ವಾನಿಸಲಾಗುತ್ತದೆ.
 
ಹತ್ತು ಜಿಲ್ಲೆಯಿಂದ ಒಂದೊಂದು ತಂಡವನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಆ ತಂಡಗಳಲ್ಲಿ ಆಯ್ಡ ಐದು ತಂಡಗಳಿಗೆ ಬಹುಮಾನ ನೀಡಲಾಗುವುದು.   ಪ್ರವೇಶ ಉಚಿತ. 
 
‘ಪ್ರಜಾವಾಣಿ ಕ್ವಿಜ್ ಚಾಂಪಿಯನ್ ಶಿಪ್‌’ ಕಾರ್ಯಕ್ರಮ ನಿರೂಪಕರಾದ ರಾಘವ ಚಕ್ರವರ್ತಿ ಈ ಸ್ಪರ್ಧೆಯ ಬಗ್ಗೆ ಅವರ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
 
* ರಸಪ್ರಶ್ನೆಯನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?
ರಸಪ್ರಶ್ನೆ ಎಂದರೆ ಮಕ್ಕಳ ಸಾಮಾನ್ಯ ಜ್ಞಾನವನ್ನು ಅರಿಯುವುದು, ಸಾಮಾನ್ಯ ಜ್ಞಾನ ಕೇವಲ ಒಂದು ವಿಷಯಕ್ಕೆ ಸಂಬಂಧಿಸಿದ್ದಲ್ಲ ಬದಲಾಗಿ ಇದು ಪ್ರಪಂಚದ ಸುತ್ತಮುತ್ತಲಿನ ಆಗು ಹೋಗುಗಳನ್ನು ಒಳಗೊಂಡಿದೆ. ಇದು ಮಕ್ಕಳಲ್ಲಿ ಸಾಮಾಜಿಕ ಅರಿವು ಮೂಡಿಸುವಲ್ಲಿಯೂ ಸಹಕಾರಿಯಾಗಿದೆ. 
 
* ರಸಪ್ರಶ್ನೆಯಿಂದ ಮಕ್ಕಳ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವೇ?
ರಸಪ್ರಶ್ನೆಯಿಂದ ಮಕ್ಕಳಲ್ಲಿ ಜ್ಞಾನ ಹೆಚ್ಚುತ್ತದೆ. ಅವರಲ್ಲಿ ತಿಳಿವಳಿಕೆಯ ಮಟ್ಟವೂ ಏರಿಕೆಯಾಗುತ್ತದೆ. ಒಂದೇ ವಿಷಯವನ್ನು ಹಲವು ದೃಷ್ಟಿಕೋನಗಳಲ್ಲಿ ಹೇಗೆ ಗಮನಿಸಬಹುದು ಎಂಬುದನ್ನು  ರಸಪ್ರಶ್ನೆ ಕಲಿಸುತ್ತದೆ. ವಿಜ್ಞಾನ, ಸಾಹಿತ್ಯ, ಇತಿಹಾಸ, ಕ್ರೀಡೆ, ಕಲೆ – ಹೀಗೆ ಹಲವು ವಿಷಯಗಳನ್ನು ಕುರಿತು ರಸಪ್ರಶ್ನೆ ಆಸಕ್ತಿ ಹುಟ್ಟಿಸುತ್ತದೆ. ಇದು ಮಾನಸಿಕ ಸಾಮರ್ಥ್ಯದ ಜೊತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.
 
* ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸಲು  ರಸಪ್ರಶ್ನೆ ಹೇಗೆ ಉಪಕಾರಿ?
ರಸಪ್ರಶ್ನೆಗಳು ಪಠ್ಯದ ವಿಷಯವನ್ನೂ ಒಳಗೊಂಡಿರುತ್ತವೆ. ಪಾಠದಲ್ಲಿರುವ ವಿಷಯದ ಬಗ್ಗೆ ಆಮೂಲಾಗ್ರವಾಗಿ ತಿಳಿದುಕೊಳ್ಳಲು ರಸಪ್ರಶ್ನೆ ಸಹಕಾರಿ. ರಸಪ್ರಶ್ನೆಯು ಮಕ್ಕಳಲ್ಲಿ ಕೂತೂಹಲ ಹೆಚ್ಚುಸುವಂತೆ ಮಾಡುತ್ತದೆ. ಕಲಿಕೆಯ ಜೊತೆಗೆ ಸಾಮಾನ್ಯಜ್ಞಾನವನ್ನು ಹೆಚ್ಚಿಸುತ್ತದೆ.  ಪಾಠ, ಓದಿನ ಜೊತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಕಲಿಸಲು ರಸಪ್ರಶ್ನೆಯಿಂದ ಸಾಧ್ಯ. 
 
* ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನ ಹೇಗೆ ತಯಾರಿ ನಡೆಸಬೇಕು?
ಈ ಬಾರಿ ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮಕ್ಕಳು ಪ್ರಜಾವಾಣಿ ಪತ್ರಿಕೆ ಹಾಗೂ ಸಹಪಾಠಿ ಪುರವಣಿಯನ್ನು ಓದಿಕೊಂಡಿರಬೇಕು. ಈ ಸ್ಪರ್ಧೆಯಲ್ಲಿ 5ರಿಂದ 10ನೇ ತರಗತಿ ಮಕ್ಕಳಿಗೆ ಭಾಗವಹಿಸಲು ಅವಕಾಶವಿದ್ದು ಪಠ್ಯಕ್ಕೆ ಪೂರಕವಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಲ್ಲದೇ ಈ ಬಾರಿ ವಿಶೇಷವಾಗಿ ಆಯಾಯಾ ಜಿಲ್ಲೆಗೆ ಸಂಬಂಧಿಸಿದ ವಿಶೇಷತೆಗಳನ್ನು ಕುರಿತ ಪ್ರಶ್ನೆಗಳು ಸ್ಪರ್ಧೆಯ ಭಾಗವಾಗಿರುತ್ತವೆ. ಆದಕಾರಣ ಮಕ್ಕಳು ಹೆಚ್ಚು ಹೆಚ್ಚು ದಿನಪತ್ರಿಕೆ, ಮಾಸಪತ್ರಿಕೆ ಮತ್ತು ಪುಸ್ತಕಗಳನ್ನು ಓದಿಕೊಂಡಿರಬೇಕು. ಅಲ್ಲದೇ ಗೂಗಲ್‌ನಲ್ಲಿ ಹುಡುಕುವ ಮೂಲಕವೂ ಸ್ಪರ್ಧೆಗೆ ತಯಾರಿ ನಡೆಸಬಹುದು.
 
* ತಂತ್ರಜ್ಞಾನದ ಬೆಳವಣಿಕಗೆಗೆ ರಸಪ್ರಶ್ನೆ ಹೇಗೆ ಸಹಕಾರಿ?
ಈ ಮೊದಲು ರಸಪ್ರಶಯ್ನೆ ಸ್ಪರ್ಧೆ ಎಂದಾಗ ಹಳೆಯ ದಿನಪ್ರತಿಕೆಗಳನ್ನು ಹುಡುಕಿ, ಅವುಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಸ್ಪರ್ಧೆಗೆ ತಯಾರಿ ನಡೆಸಬೇಕಾಗಿತ್ತು, ಆದರೆ ಇಂದು ತಂತ್ರಜ್ಞಾನ ನಮ್ಮ ಕೈಯಲ್ಲೇ ಪ್ರಪಂಚವನ್ನು ಇಟ್ಟಿದೆ. ಆದರೆ ಗೂಗಲ್‌ನಲ್ಲಿ ಸಿಗುವ ಪ್ರತಿ ಅಂಶವು ಸತ್ಯವಲ್ಲ, ಆದುದರಿಂದ ಕೂಲಂಕಷವಾಗಿ ಪರಿಶೀಲಿಸಿ, ಮಾಹಿತಿಯ ನಿಖರತೆಯನ್ನು ಸ್ಪಷ್ಟಪಡಿಸಿಕೊಂಡು ಆ ಬಳಿಕವಷ್ಟೆ ಅದನ್ನು ಸ್ವೀಕರಿಸಬೇಕಾಗುತ್ತದೆ. 
 
ರಸಪ್ರಶ್ನೆಗೆ ತಯಾರಿಗೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ: http://www.prajavani.net/news/quiz.php

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT