ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರಳೆ ಬೇಸಾಯ: ಸುವಾಸಿತ ಉತ್ಪನ್ನಗಳ ಅಭಿಯಾನ

ಗುರುಶಂಕರ್ ಕೆ.ಪಿ
Published 6 ಮಾರ್ಚ್ 2024, 19:30 IST
Last Updated 6 ಮಾರ್ಚ್ 2024, 19:30 IST
ಅಕ್ಷರ ಗಾತ್ರ

* ಜಮ್ಮು-ಕಾಶ್ಮೀರದ 20ಕ್ಕಿಂತ ಹೆಚ್ಚಿನ ಜಿಲ್ಲೆಗಳಲ್ಲಿ ನೇರಳೆ ಬೇಸಾಯವನ್ನು ಮಾಡಲಾಗುತ್ತಿದೆ.

* ಈ ನಿಟ್ಟಿನಲ್ಲಿ ಸುವಾಸಿತ ಉತ್ಪನ್ನಗಳ ಯೋಜನೆಯಡಿಯಲ್ಲಿ ನಸು ಕೆನ್ನೀಲಿ ಬಣ್ಣದ ಗಿಡಗಳ ಸಸಿಗಳನ್ನು ರೈತರಿಗೆ ನೀಡಲಾಗುತ್ತಿದೆ. ಪ್ರತಿ ಸಸಿಗೆ ₹ 5ರಿಂದ ₹ 6ರವರೆಗೆ ನೀಡಲಾಗುತ್ತದೆ.

ವಿಶೇಷ ಸೂಚನೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಒಂದು ಲೀಟರ್ ನಸು ಕೆನ್ನೀಲಿ ಬಣ್ಣದ ತೈಲಕ್ಕೆ ₹10,000 ಬೆಲೆ ಇದೆ.

* ಸುವಾಸಿತ ಉತ್ಪನ್ನಗಳ ಅಭಿಯಾನದಿಂದ 50,000ಕ್ಕಿಂತ ಹೆಚ್ಚಿನ ಯುವಜನರಿಗೆ ಸಹಾಯವಾಗಿದ್ದು, ಸ್ಟಾರ್ಟ್ ಅಪ್ ಅಭಿಯಾನಕ್ಕೆ ಪುಷ್ಟಿ ನೀಡಿದಂತಾಗಿದೆ.

ಏನಿದು ಸುವಾಸಿತ ಉತ್ಪನ್ನಗಳ ಅಭಿಯಾನ?

* 2016ರಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು ಸುವಾಸಿತ ಉತ್ಪನ್ನಗಳ ಅಭಿಯಾನವನ್ನು ಹಮ್ಮಿಕೊಂಡಿತ್ತು. ಸುವಾಸಿತ ಉತ್ಪನ್ನಗಳ ಉದ್ದಿಮೆಯಲ್ಲಿ ಬಳಸುವಂತಹ ಪುಷ್ಪಗಳನ್ನು ಮತ್ತು ಗಿಡಗಳನ್ನು ಬೆಳೆಯಲು ಆಧುನಿಕ ತಂತ್ರಜ್ಞಾನವನ್ನು ಬಳಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು.

ಅಭಿಯಾನದ ಉದ್ದೇಶಗಳು

* ಜಾಗತಿಕ ಮಟ್ಟದಲ್ಲಿ ಸುವಾಸಿತ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಭಾರತದಲ್ಲಿ ಸುವಾಸಿತ ಉತ್ಪನ್ನಗಳಲ್ಲಿ ಬಳಸುವ ಗಿಡಗಳು ಮತ್ತು ಮರಗಳ ಬೇಸಾಯಕ್ಕೆ ಬೇಕಿರುವ ಸೌಲಭ್ಯವನ್ನು ಒದಗಿಸುವ ಕಾರ್ಯವನ್ನು ಈ ಅಭಿಯಾನ ನಿರ್ವಹಿಸುತ್ತದೆ.

* ಭಾರತದ ರೈತರು ಜಾಗತಿಕ ಮಟ್ಟದಲ್ಲಿ ಸುವಾಸಿತ ಉತ್ಪನ್ನಗಳಿಗೆ ಬೇಕಾದ ಫಲ ಪುಷ್ಪಗಳನ್ನು ಪೂರೈಸಿ ಜಾಗತಿಕ ಮನ್ನಣೆ ಸಿಗುತ್ತದೆ. ಇದಕ್ಕೆ ಅಗತ್ಯವಿರುವ ಸಹಕಾರವನ್ನು ಸರ್ಕಾರ ನೀಡುತ್ತದೆ.

* ಸುವಾಸಿತ ಉತ್ಪನ್ನ ಅಭಿಯಾನವನ್ನು ಎರಡು ಹಂತಗಳಲ್ಲಿ ಜಾರಿಗೆ ತರುವ ಉದ್ದೇಶವನ್ನು ಹೊಂದಿದ್ದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು, ಮೊದಲನೇ ಹಂತದಲ್ಲಿ ಭಾರತದ 46 ಜಿಲ್ಲೆಗಳಲ್ಲಿ 6,000 ಹೆಕ್ಟೇರ್‌ನಷ್ಟು ಭೂಪ್ರದೇಶವನ್ನು ಸುವಾಸಿತ ಅಭಿಯಾನದಡಿ ತಂದಿದೆ.

* ಸುವಾಸಿತ ಉತ್ಪನ್ನ ಅಭಿಯಾನದಡಿಯಲ್ಲಿ 44,000 ರೈತರಿಗೆ ತರಬೇತಿಯನ್ನು ನೀಡಲಾಗಿದೆ. ತರಬೇತಿಯನ್ನು ಪಡೆದ ರೈತರು ತಮ್ಮ ಭೂಮಿಯಲ್ಲಿ ಸುವಾಸಿತ ಉದ್ಯಮಕ್ಕೆ ಬೇಕಾದ ಗಿಡಗಳನ್ನು ಬೆಳೆಯಬೇಕು. ಮೊದಲನೇ ಹಂತದ ಯೋಜನಾ ಅವಧಿ – 2016 ರಿಂದ 2021 ರವರೆಗೆ.

* ಫೆಬ್ರುವರಿ 9, 2021 ರಂದು ಎರಡನೇ ಹಂತದ ಯೋಜನೆಯನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಜಾರಿಗೆ ತಂದಿತ್ತು.

* ಎರಡನೇ ಹಂತದಲ್ಲಿ 45,000 ರೈತರಿಗೆ ತರಬೇತಿಯನ್ನು ಕಲ್ಪಿಸಲಾಗಿದೆ. ಇದರಿಂದ ಭಾರತದ 75,000 ರೈತ ಕುಟುಂಬಗಳಿಗೆ ಉಪಯುಕ್ತವಾಗಿದೆ. ಯೋಜನೆಯ ಎರಡನೇ ಹಂತದಲ್ಲಿ 5,500 ಹೆಕ್ಟೇರ್ ಭೂಪ್ರದೇಶವನ್ನು ಸುವಾಸಿತ ಉತ್ಪನ್ನ ಅಭಿಯಾನದಡಿಯಲ್ಲಿ ತರಲಾಗಿದೆ. ಮಳೆ ಆಶ್ರಿತ ಪ್ರದೇಶಗಳಿಗೆ ಮತ್ತು ಮಣ್ಣಿನ ಫಲವತ್ತತೆಯನ್ನು ಕಳೆದುಕೊಂಡಿರುವ ಪ್ರದೇಶಗಳಿಗೆ ಎರಡನೇ ಹಂತದ ಯೋಜನೆಯಲ್ಲಿ ಹೆಚ್ಚು ಆದ್ಯತೆ ನೀಡಲಾಗಿದೆ.

* ಎರಡನೇ ಹಂತದ ಯೋಜನೆಯಡಿಯಲ್ಲಿ ತಾಂತ್ರಿಕ ಮತ್ತು ಮೂಲಸೌಕರ್ಯಗಳನ್ನು ಹೆಚ್ಚಾಗಿ ಕಲ್ಪಿಸುವ ಮೂಲಕ ಸುವಾಸಿತ ಉತ್ಪನ್ನಗಳ ಉದ್ಯಮದಲ್ಲಿ ಬಳಸುವ ಗಿಡಗಳ ಮತ್ತು ಪುಷ್ಪಗಳ ವರ್ಧನೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ.

* ಸುವಾಸಿತ ಉತ್ಪನ್ನ ಅಭಿಯಾನದ ಅಡಿಯಲ್ಲಿ ನೇರಳೆ ಬೇಸಾಯಕ್ಕೆ ಉತ್ತೇಜನ ನೀಡುವುದಲ್ಲದೆ, ಬೇಸಾಯದ ಅಡಿಯಲ್ಲಿ ಬೆಳೆದ ರೈತರ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆಯನ್ನು ನೀಡುವ ಮೂಲಕ ಸರ್ಕಾರವೇ ರೈತರಿಂದ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತದೆ.

ಕಳೆದ ವರ್ಷದ ಬೆಳವಣಿಗೆಗಳು

* ಜಮ್ಮು-ಕಾಶ್ಮೀರದ ರಂಬಣ್ ಜಿಲ್ಲೆಯಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು ಸುವಾಸಿತ ಉತ್ಪನ್ನ ಅಭಿಯಾನ (Aroma Mission)ದ ಅಡಿಯಲ್ಲಿ ನಸು ಕೆನ್ನೀಲಿ ಬಣ್ಣದ ಅಥವಾ ನೇರಳೆ ಬಣ್ಣದ ವ್ಯವಸಾಯವನ್ನು ಪ್ರಾರಂಭಿಸಿದೆ.

* ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ದಡಿಯಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸಂಶೋಧನಾ ಮತ್ತು ಅಭಿವೃದ್ಧಿ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮಂಡಳಿಯು ಸುವಾಸಿತ ಉತ್ಪನ್ನಗಳಿಗೆ ಬಳಸು ವಂತಹ ದಮಾಸ್ಕ ರೋಜಾ ಹೂವು, ನಸು ಕೆನ್ನೀಲಿ ಬಣ್ಣದ ಗಿಡಗಳು, ಮಸ್ಕ್ ಬಾಲದಂತಹ ಗಿಡಗಳ ಬೇಸಾಯಕ್ಕೆ ಮತ್ತು ಅಭಿವೃದ್ಧಿಗೆ ಉತ್ತೇಜನವನ್ನು ನೀಡಲು ಯೋಜನೆಯನ್ನು ಹಮ್ಮಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT