ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯುಸಿ: ಅಮೈನ್‌ಗಳ ತಯಾರಿಕೆ ಹೇಗೆ?

Last Updated 25 ಜನವರಿ 2021, 19:31 IST
ಅಕ್ಷರ ಗಾತ್ರ

ರಸಾಯನಶಾಸ್ತ್ರ

ಅಮೈನ್‌ಗಳನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ಈಗ ನೋಡೋಣ.

ನೈಟ್ರೋ ಸಂಯುಕ್ತಗಳ ಅಪಕರ್ಷಣೆ (ರಿಡಕ್ಷನ್‌ ಆಫ್‌ ನೈಟ್ರೊ ಕಂಪೌಂಡ್ಸ್‌)

ಆಲ್ಕೈಲ್ ಹ್ಯಾಲೈಡ್‌ಗಳ ಅಮೋನೀಯ ವಿಭಜನೆ (ಅಮೋನೋಲಿಸಿಸ್‌ ಆಫ್‌ ಆಲ್ಕೈಲ್‌ ಹ್ಯಾಲೈಡ್ಸ್‌)

ನೈಟ್ರೈಲ್‌ಗಳ ಅಪಕರ್ಷಣೆ (ರಿಡಕ್ಷನ್‌ ಆಫ್‌ ನೈಟ್ರೈಲ್ಸ್‌)

ಅಮೈಡ್‌ಗಳ ಅಪಕರ್ಷಣೆ (ರಿಡಕ್ಷನ್‌ ಆಫ್‌ ಅಮೈಡ್ಸ್‌)

ಗೇಬ್ರಿಯಲ್ ಥ್ಯಾಲಿಮೈಡ್ ಸಂಶ್ಲೇಷಣೆ (ಗೇಬ್ರಿಯಲ್ ಥ್ಯಾಲಿಮೈಡ್ ಸಿಂಥೆಸಿಸ್‌)

ಹಾಫ್‌ಮನ್ ಬ್ರೋಮಮೈಡ್ ನಿಮ್ನೀಕರಣ ಕ್ರಿಯೆ (ಹಾಫ್‌ಮನ್ ಬ್ರೋಮಮೈಡ್ ಡಿಗ್ರೇಡೇಶನ್‌ ರಿಯಾಕ್ಷನ್‌)

ನೈಟ್ರೋ ಸಂಯುಕ್ತಗಳ ಅಪಕರ್ಷಣೆ: ನೈಟ್ರೋ ಹೈಡ್ರೊ ಕಾರ್ಬನ್‌ಗಳು ಟಿನ್‌ ಹಾಗೂ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಆಕರ್ಷಣೆಗೆ ಒಳಗಾದಾಗ ಪ್ರಾಥಮಿಕ ಅಮೈನ್‌ಗಳು ದೊರೆಯುತ್ತವೆ.
ಉದಾ:


ಈ ಕ್ರಿಯೆಯಲ್ಲಿ ಟಿನ್‌ ಹಾಗೂ ಆಮ್ಲೀಯ ಮಾಧ್ಯಮದ ಬದಲಿಗೆ ಸೂಕ್ಷ್ಮ ವಿಭಜಿತ ನಿಕ್ಕೆಲ್ ಪಲೇಡಿಯಂ (ಎಥೆನಾಲ್ C2 H2 OH) ಉಪಸ್ಥಿತಿಯಲ್ಲಿ ಅಥವಾ ರದ್ದಿ ಕಬ್ಬಿಣ (ಹೈಡ್ರೋಕ್ಲೋರಿಕ್ ಆಮ್ಲದ ಉಪಸ್ಥಿತಿಯಲ್ಲಿ) ವನ್ನು ಬಳಸಬಹುದಾಗಿದೆ.

(ಪ್ರಾಥಮಿಕ ಅಮೈನ್)
(ಪ್ರಾಥಮಿಕ ಅಮೈನ್)


ಆಲ್ಕೈಲ್ ಹ್ಯಾಲೈಡ್‌ಗಳ ಅಮೋನೀಯ ವಿಭಜನೆ: ಆಲ್ಕೈಲ್ ಅಥವಾ ಬೆಂಜೈಲ್ ಹ್ಯಾಲೈಡ್‌ಗಳಲ್ಲಿ, ಇಂಗಾಲ - ಹ್ಯಾಲೋಜನ್ ಬಂಧವನ್ನು ನ್ಯೂಕ್ಲಿಯಾಕಾಂಕ್ಷಿಗಳಿಂದ ಸುಲಭವಾಗಿ ಬಿಡಿಸಬಹುದು. ಹೀಗಾಗಿ ಆಲ್ಕೈಲ್ ಅಥವಾ ಬೆಂಜೈಲ್ ಹ್ಯಾಲೈಡ್‌ಗಳು ಅಮೋನಿಯಾದ ಎಥೆನಾಲ್ ದ್ರಾವಣದಲ್ಲಿ ನ್ಯೂಕ್ಲಿಯಾಕಾಂಕ್ಷಿ ಆದೇಶಿತ ಕ್ರಿಯೆ ಹೊಂದಿ ಅವುಗಳ ಹ್ಯಾಲೋಜನ್‌ಗಳು ಅಮೈನೋ ಗುಂಪಿನಿಂದ ಪ್ರತಿಸ್ಥಾಪಿಸಲ್ಪಡುತ್ತವೆ.

ಅಮೋನಿಯಾ ಅಣುವಿನ ಇಂಗಾಲ - ಹ್ಯಾಲೋಜನ್ ಬಂಧದ ಈ ವಿಭಜನೆ ಕ್ರಿಯೆಯನ್ನು ಅಮೋನೀಯ ವಿಭಜನೆ ಎನ್ನುವರು. ಈ ಕ್ರಿಯೆಯನ್ನು ಮುಚ್ಚಿದ ಪ್ರನಾಳದಲ್ಲಿ 373 ಡಿಗ್ರಿ ಉಷ್ಣತೆಯಲ್ಲಿ ನಡೆಸುವರು. ಈ ರೀತಿ ತಯಾರಾದ ಪ್ರಾಥಮಿಕ ಅಮೈನ್, ನ್ಯೂಕ್ಲಿಯಾಕಾಂಕ್ಷಿಯತೆಯಿಂದ ವರ್ತಿಸುತ್ತದೆ ಮತ್ತು ಪುನಃ ಆಲ್ಕೈಲ್ ಹ್ಯಾಲೈಡ್‌ಗಳೊಂದಿಗೆ ವರ್ತಿಸಿ ದ್ವಿತೀಯಕ ಮತ್ತು ತೃತೀಯಕ ಅಮೈನ್‌ಗಳು ಉಂಟಾಗುತ್ತವೆ. ಕೊನೆಯಲ್ಲಿ ಚತುರ್ಥಕ ಅಮೋನಿಯಂ ಲವಣ ಉತ್ಪತ್ತಿಯಾಗುತ್ತದೆ.
ಹ್ಯಾಲೈಡ್‌ಗಳ ಕ್ರಿಯಾಶೀಲತೆಯು ಕೆಳಗಿನ ಅನುಕ್ರಮ: RI-RBr-Rcl

ನೈಟ್ರೈಲ್‌ಗಳ ಅಪಕರ್ಷಣೆ– ಮೆಂಡಿಯಸ್ ಕ್ರಿಯೆ: 130 ATM ಮತ್ತು 413 K ಯಲ್ಲಿ ನಿಕಲ್ ಕ್ರಿಯಾವರ್ಧಕದ ಉಪಸ್ಥಿತಿಯಲ್ಲಿ ಹೈಡ್ರೋಜನ್‌ನೊಂದಿಗೆ ಆಕರ್ಷಣೆಗೆ ಒಳಗಾಗುವ ಸೈನೋ ಹೈಡ್ರೋ ಕಾರ್ಬನ್‌ಗಳು ಪ್ರಾಥಮಿಕ ಅಮೈನ್‌ಗಳನ್ನು ನೀಡುತ್ತವೆ. ಈ ಕ್ರಿಯೆಯನ್ನು ಆರಂಭದ ಅಮೈನ್‌ನಿಂದ ಒಂದು ಇಂಗಾಲದ ಪರಮಾಣು ಹೆಚ್ಚು ಇರುವ ಅಮೈನ್ ಉತ್ಪತ್ತಿಗೆ ಬಳಸುವರು. ಈ ಕ್ರಿಯೆಯಲ್ಲಿ ಲೀಥಿಯಂ ಅಲ್ಯುಮಿನಿಯಂ ಹೈಡ್ರೈಡ್ (LiAlH4) ಹಾಗೂ ಸೋಡಿಯಂ (ಎಥೆನಾಲ್ ಉಪಸ್ಥಿತಿಯಲ್ಲಿ ) (Na/C2H5OH) ಇವುಗಳನ್ನು ಸಹ ಆಕರ್ಷಣೀಯ ಏಜೆಂಟ್‌ಗಳಾಗಿ ಬಳಸಬಹುದು.

ಅಮೈಡ್‌ಗಳ ಅಪಕರ್ಷಣೆ: ಅಮೈಡ್‌ಗಳು ಲೀಥಿಯಂ ಅಲ್ಯುಮಿನಿಯಂ ಹೈಡ್ರೈಡ್‌ನೊಂದಿಗೆ ಅಪಕರ್ಷಣೆ ಹೊಂದಿ ಅಮೈನ್‌ಗಳು ಕೂಡುತ್ತವೆ.


ಗೇಬ್ರಿಯಲ್ ಥ್ಯಾಲಿಮೈಡ್ ಸಂಶ್ಲೇಷಣೆ: ಥ್ಯಾಲಿಮೈಡ್, ಎಥೆನಾಲಿಕ್ ಪೊಟ್ಯಾಷಿಯಂ ಹೈಡ್ರಾಕ್ಸೈಡ್‌ನೊಂದಿಗೆ ವರ್ತಿಸಿ, ಪೊಟ್ಯಾಷಿಯಂ ಥ್ಯಾಲಿಮೈಡ್ ಲವಣ ಉಂಟು ಮಾಡುತ್ತದೆ. ಇದನ್ನು ಆಲ್ಕೈಲ್ ಹ್ಯಾಲೈಡ್‌ನೊಂದಿಗೆ ಕಾಯಿಸಿದಾಗ, ಕ್ಷಾರೀಯ ಜಲೀಯ ವಿಭಜನೆ ಹೊಂದಿ ಸಂಬಂಧಿಸಿದ ಪ್ರಾಥಮಿಕ ಅಮೈನ್‌ ಅನ್ನು ಉಂಟು ಮಾಡುತ್ತದೆ. ಈ ವಿಧಾನದಿಂದ ಆರೋಮ್ಯಾಟಿಕ್ ಪ್ರಾಥಮಿಕ ಅಮೈನ್‌ಗಳನ್ನು ತಯಾರಿಸಲು ಸಾಧ್ಯವಿಲ್ಲ.

ಹಾಫ್‌ಮನ್ ಬ್ರೋಮಮೈಡ್ ನಿಮ್ನೀಕರಣ ಕ್ರಿಯೆ: ಅಮೈಡ್‌ಗಳು ಮತ್ತು ಜಲೀಯ ಅಥವಾ ಎಥೆನಾಲಿಕ್ ದ್ರಾವಣದಲ್ಲಿನ NaOH, ಬ್ರೋಮಿನ್‌ನೊಂದಿಗೆ ವರ್ತಿಸಿ ಪ್ರಾಥಮಿಕ ಅಮೈನ್‌ಗಳನ್ನು ತಯಾರಿಸುವ ವಿಧಾನವನ್ನು ಅಭಿವೃದ್ಧಿಗೊಳಿಸಿದ್ದು ಹಾಫ್‌ಮನ್‌. ಈ ನಿಮ್ನಿಕರಣ ಕ್ರಿಯೆಯಲ್ಲಿ ಅಮೈಡ್‌ನ ಕಾರ್ಬೋನಿಲ್ ಕಾರ್ಬನ್‌ನ ಆಲ್ಕೈಲ್ ಅಥವಾ ಅರೈಲ್ ಸಮೂಹವು ಅದರ ನೈಟ್ರೋಜನ್ ಪರಮಾಣುವಿನ ಕಡೆಗೆ ವರ್ಗಾವಣೆ ಹೊಂದುತ್ತದೆ. ಈ ರೀತಿ ಉತ್ಪತ್ತಿಯಾದ ಅಮೈನ್‌ನಲ್ಲಿ ಅಮೈಡ್‌ಗಿಂತ ಒಂದು ಕಾರ್ಬನ್ ಕಡಿಮೆ ಇರುತ್ತದೆ.

(ಪಾಠ ಸಂಯೋಜನೆ: ರಸಾಯನಶಾಸ್ತ್ರ ವಿಭಾಗ, ಆಕಾಶ್‌ ಇನ್‌ಸ್ಟಿಟ್ಯೂಟ್‌, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT