ಪ್ರಜಾವಾಣಿ ಕ್ವಿಜ್ 71

ಭಾನುವಾರ, ಮೇ 26, 2019
33 °C

ಪ್ರಜಾವಾಣಿ ಕ್ವಿಜ್ 71

Published:
Updated:

1. ಶಿಮ್ಲಾದಲ್ಲಿರುವ ‘ರಿಟ್ರೀಟ್ ಬಿಲ್ಡಿಂಗ್’ ಯಾರ ವಿಶ್ರಾಂತಿ ನಿವಾಸ?

ಅ)ಪ್ರಧಾನ ಮಂತ್ರಿ ಆ) ರಾಷ್ಟ್ರಪತಿ ಇ)ರಾಜ್ಯಪಾಲರು ಈ)ಮುಖ್ಯ ಕಾರ್ಯದರ್ಶಿ

2. ದಿನ ಬಳಕೆಯ ರವೆಯನ್ನು ಸಾಧಾರಣವಾಗಿ ಯಾವ ಧಾನ್ಯದಿಂದ ತಯಾರಿಸಲಾಗುತ್ತದೆ?

ಅ)ಅಕ್ಕಿ ಆ)ಜೋಳ ಇ)ಗೋಧಿ ಈ)ಬಾಜ್ರಾ

3. ‘ಅಣುಗ’ ಎಂಬ ಶಬ್ದದ ಅರ್ಥವೇನು?‌

ಅ)ನಾಯಿ ಆ)ಧೂಳಿನ ಕಣ ಇ)ಚಿಕ್ಕದಾಗು ಈ)ಮಗ

4. ಪ್ರಾಚೀನ ಪಾಶ್ಚಾತ್ಯ ತತ್ವಶಾಸ್ತ್ರಜ್ಞರು ಇಡಿಯ ವಿಶ್ವವು ಯಾವುದರಿಂದ ತುಂಬಿದೆ ಎಂದು ಊಹಿಸಿದ್ದರು?

ಅ)ಈಥರ್ ಆ)ನೀರು ಇ)ಗಂಧ ಈ) ಬೆಳಕು

5. ಷೇರು ಮಾರುಕಟ್ಟೆಯಲ್ಲಿ ಯಾವ ಎರಡು ಪ್ರಾಣಿಗಳ ಹೆಸರುಗಳನ್ನು ಬಳಸಲಾಗುತ್ತದೆ?

ಅ)ಕರಡಿ-ಕುರಿ ಆ)ಗೂಳಿ-ನರಿ ಇ)ಕರಡಿ-ಗೂಳಿ ಈ)ಕುರಿ-ನರಿ

6. 2005ರ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ಯ ಹೆಸರಿಗೆ ನಂತರ ಯಾವ ರಾಷ್ಟ್ರನಾಯಕರ ಹೆಸರನ್ನು ಸೇರಿಸಲಾಯಿತು?

ಅ)ಮಹಾತ್ಮ ಗಾಂಧಿ ಆ)ನೆಹರು ಇ)ಇಂದಿರಾಗಾಂಧಿ ಈ)ರಾಜೀವ್ ಗಾಂಧಿ

7. ಅನುವಂಶೀಯತೆಯ ಬಗ್ಗೆ ಪ್ರಯೋಗ ನಡೆಸಲು ಮೆಂಡಲ್ ಯಾವ ಕಾಳಿನ ಗಿಡಗಳನ್ನು ಬಳಸಿದನು?

ಅ)ತೊಗರಿ ಆ)ಬಟಾಣಿ ಇ)ಕಡಲೆ ಈ)ಹೆಸರು

8. ಯಾವ ಚಲನಚಿತ್ರದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಟರಾಗಿ ಕಾಣಿಸಿಕೊಂಡಿಲ್ಲ?

ಅ)ನಕ್ಕರೆ ಅದೇ ಸ್ವರ್ಗ ಆ)ಮುದ್ದಿನ ಮಾವ ಇ)ಬಾಳೊಂದು ಚದುರಂಗ ಈ)ತಿರುಗು ಬಾಣ

9. ಯು.ಆರ್. ಅನಂತಮೂರ್ತಿಯವರು ಸಂಪಾದಿಸುತ್ತಿದ್ದ ಸಾಹಿತ್ಯಕ ಪತ್ರಿಕೆ ಯಾವುದು?

ಅ)ಋಜುವಾತು ಆ)ದೇಶಕಾಲ ಇ)ಸಂಕ್ರಮಣ ಈ)ಸಾಕ್ಷಿ

10. ಸಾಂಪ್ರದಾಯಿಕ ಟೆಸ್ಟ್ ಪಂದ್ಯಗಳಲ್ಲಿ ಎಷ್ಟು ‘ಇನ್ನಿಂಗ್ಸ್’ ಗಳು ಇರುತ್ತವೆ?

ಅ)ಆರು ಆ)ನಾಲ್ಕು ಇ)ಅನಿರ್ದಿಷ್ಟ ಈ)ಐದು

ಕಳೆದ ಸಂಚಿಕೆಯ ಸರಿ ಉತ್ತರಗಳು

1.ಜಿನೀವಾ 2.ಕೆ.ಹಿರಣ್ಣಯ್ಯ 3.ಚರ್ಚಿಲ್ 4.ಶ್ರೀಹರ್ಷ 5.ಅರ್ಜೆಂಟೈನಾ 6.ಬೆಂಗಳೂರು ಕ್ವೀನ್ 7. ಪ್ರಯೋಗಾಲಯದ ಉಪಕರಣಗಳು 8.ಶಿವ 9.ರಂಗಭೂಮಿ 10.ನಾಡೆಲ್ಲ ಒಳ್ಳೆಯದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !