ಶನಿವಾರ, ಸೆಪ್ಟೆಂಬರ್ 19, 2020
27 °C

ಪ್ರಜಾವಾಣಿ ಕ್ವಿಜ್

ಎಸ್‌.ಎಲ್‌. ಶ್ರೀನಿವಾಸ ಮೂರ್ತಿ Updated:

ಅಕ್ಷರ ಗಾತ್ರ : | |

1. ಭಾರತೀಯ ಜೀವ ವಿಮಾ ನಿಗಮದ ಕೇಂದ್ರ ಕಚೇರಿ ಎಲ್ಲಿದೆ?
ಅ) ದೆಹಲಿ ಆ) ಬೆಂಗಳೂರು
ಇ) ಮುಂಬೈ ಈ) ಕೊಲ್ಕತ್ತಾ

2. ಟೈಟಾನಿಕ್ ಹಡಗು ಮುಳುಗಿದ್ದು ಯಾವ ವರ್ಷ?
ಅ) 1912 ಆ) 1921
ಇ) 1922 ಈ) 1924

3. ‘ಮಲಯಜ’ ಎಂಬ ಹೆಸರು ಯಾವ ಸುಗಂಧದ್ರವ್ಯಕ್ಕಿದೆ?
ಅ) ಅರಿಸಿನ ಆ) ಕರ್ಪೂರ
ಇ) ಲೋಬಾನ ಈ) ಶ್ರೀಗಂಧ

4. ಸುಭಾಷ್‌ಚಂದ್ರ ಬೋಸರ ಸೇನೆಯಲ್ಲಿ ಸೇವೆ ಸಲ್ಲಿಸಿದ ವೀರ ಮಹಿಳೆ ಯಾರು?
ಅ) ವಿಜಯಲಕ್ಷ್ಮಿ ಪಂಡಿತ್
ಆ) ಲಕ್ಷ್ಮೀ ಸೆಹೆಗಲ್
ಇ) ತೋರುದತ್
ಈ) ವಿಜಯಲಕ್ಷ್ಮಿ ಸಿಂಗ್

5. ‘ರೈತನ ಮಿತ್ರ’ ಎಂದು ಹೆಸರಾದ ಪ್ರಾಣಿ ಯಾವುದು?
ಅ) ಇಲಿ ಆ) ಹೆಗ್ಗಣ
ಇ) ಹಾವು ಈ) ಹಂದಿ

6. ವಿಶ್ವದಲ್ಲಿ ಅತಿ ಹೆಚ್ಚು ನೈಸರ್ಗಿಕ ಸರೋವರಗಳು ಯಾವ ದೇಶದಲ್ಲಿವೆ?
ಅ) ಕೆನಡಾ ಆ) ಜಪಾನ್
ಇ) ಚೀನಾ ಈ) ಟಿಬೆಟ್

7. ‘ಜೆರಾಲಜಿ’ ಯು ಯಾವುದಕ್ಕೆ ಸಂಬಂಧಿಸಿದ ವೈದ್ಯಶಾಸ್ತ್ರವಾಗಿದೆ?
ಅ) ಜಠರ ಆ) ನಿದ್ರೆ
ಇ) ಮುಪ್ಪು ಈ) ಪಿತ್ತಜನಕಾಂಗ

8. ಪ್ರಪಂಚದ ಅತಿದೊಡ್ಡ ಕ್ರಿಕೆಟ್ ಮೈದಾನ ಎಲ್ಲಿದೆ?
ಅ) ದೆಹಲಿ ಆ) ಬೆಂಗಳೂರು
ಇ) ಅಹಮದಾಬಾದ್ ಈ) ಚೆನ್ನೈ

9.  ಗಾದೆಯನ್ನು ಪೂರ್ಣಗೊಳಿಸಿ: ಮಳೆ ನಿಂತ ಮೇಲೆ.........
ಅ) ತಲೆ ಭಾರ ಆ) ಕೊಡೆ ಭಾರ
ಇ) ಕೊಡ ಭಾರ ಈ) ಹೊಟ್ಟೆ ಭಾರ

10. ಭಾರತ ಸರ್ಕಾರ ಮಹಿಳೆಯರನ್ನು ಸಶಸ್ತ್ರ ಸೇನಾಪಡೆಗೆ ಸೇರಿಸಿಕೊಳ್ಳಲು ಆರಂಭಿಸಿದ್ದು ಯಾವ ವರ್ಷದಿಂದ?
ಅ) 1992 ಆ) 1994
ಇ) 1996 ಈ)1998

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ವೂಹಾನ್ 2. ಭವ 3. ಗಂಡಕಿ 4. ಕಪಿಲ್ ದೇವ್ 5. ಲೀಥಿಯಂ 6. ಪಟ್ಟು ಬಿಡದೆ ಕಾರ್ಯಸಾಧಿಸು 7. ಬಾಂಗ್ಲಾದೇಶ 8. ಬಿಎಸ್4 9. ಮೆಣಸಿನಕಾಯಿ 10. ಧಾರವಾಡ

 

ಎಸ್‌. ಎಲ್‌. ಶ್ರೀನಿವಾಸ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು