ವಿದ್ಯಾರ್ಥಿ ವೇತನ ಕೈಪಿಡಿ

ಮಂಗಳವಾರ, ಏಪ್ರಿಲ್ 23, 2019
27 °C

ವಿದ್ಯಾರ್ಥಿ ವೇತನ ಕೈಪಿಡಿ

Published:
Updated:
Prajavani

ವರ್ಗ: ಸಂಶೋಧನಾ ಆಧಾರಿತ

ವಿದ್ಯಾರ್ಥಿ ವೇತನ: ಸುಬಿರ್‌ ಚೌಧುರಿ ಪೋಸ್ಟ್‌ ಡಾಕ್ಟರಲ್‌ ಫೆಲೋಶಿಪ್‌ ಆನ್‌ ಕ್ವಾಲಿಟಿ ಅಂಡ್‌ ಎಕನಾಮಿಕ್ಸ್‌ 2019
ವಿವರ: ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಅಂಡ್‌ ಪೊಲಿಟಿಕಲ್‌ ಸೈನ್ಸ್‌ ಈ ಫೆಲೋಶಿಪ್‌ ನೀಡುತ್ತದೆ. ಪಿಎಚ್‌.ಡಿ ಪದವೀಧರರಿಗೆ ಮೂರು ತಿಂಗಳವರೆಗೆ ಸಂಶೋಧನಾ ಚಟುವಟಿಕೆಗೆ ಈ ಫೆಲೋಶಿಪ್‌ ದೊರೆಯಲಿದೆ. ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಇರುವವರು ಫಿಲೋಶಿಪ್‌ಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆ: ಪಿಎಚ್‌.ಡಿ ಪದವೀಧರರಾಗಿರಬೇಕು. ಜತೆಗೆ ಏಷ್ಯಾದ ದೇಶಗಳ ಅರ್ಥಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನಾ ಅನುಭವ ಹೊಂದಿರಬೇಕು.
ಸೌಲಭ್ಯ ಮತ್ತು ಆರ್ಥಿಕ ನೆರವು: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 1,750 ಗ್ರೇಟ್‌ ಬ್ರಿಟನ್‌ ಪೌಂಡ್‌, ಸಾರಿಗೆ ಮತ್ತು ವಸತಿ ವೆಚ್ಚ ಫೆಲೋಶಿಪ್‌ ಮೂಲಕ ದೊರೆಯುತ್ತದೆ. ಅದರ ಜತೆಗೆ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ದೊರೆಯುತ್ತದೆ.
ಕೊನೆಯ ದಿನ: 2019ರ ಏಪ್ರಿಲ್‌ 29
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು
ಮಾಹಿತಿಗೆ: http://www.b4s.in/praja/SCP2

***

ವರ್ಗ: ಸಂಶೋಧನಾ ಹಂತ
ವಿದ್ಯಾರ್ಥಿ ವೇತನ: ಸರ್‌ ರತನ್‌ ಟಾಟಾ ಪೋಸ್ ಡಾಕ್ಟರಲ್‌ ಫೆಲೋಶಿಪ್‌ 2019
ವಿವರ: ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಅಂಡ್‌ ಪೊಲಿಟಿಕಲ್‌ ಸೈನ್ಸ್‌, ಪಿಎಚ್‌.ಡಿ ಪದವೀಧರರಿಗೆ ಆರು ತಿಂಗಳ ಸಂಶೋಧನಾ ಯೋಜನೆಗೆ ನೆರವು ನೀಡುತ್ತದೆ. ಫೆಲೋಶಿಪ್‌ ಕಾರ್ಯಕ್ರಮವು ಭಾರತ ಮತ್ತು ದಕ್ಷಿಣ ಏಷ್ಯಾದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಕೇಂದ್ರೀಕರಿಸಿಕೊಂಡಿರುತ್ತದೆ.
ಅರ್ಹತೆ: ಭಾರತೀಯ ಅರ್ಜಿದಾರರು ಪಿಎಚ್‌.ಡಿ ಪದವೀಧರರಾಗಿರಬೇಕು. ಭಾರತ ಅಥವಾ ಎಸ್‌ಎಎಆರ್‌ಸಿ (ಸಾರ್ಕ್‌) ದೇಶಗಳ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರಬೇಕು.
ಸೌಲಭ್ಯ ಮತ್ತು ಆರ್ಥಿಕ ನೆರವು: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 1,750 ಗ್ರೇಟ್‌ ಬ್ರಿಟನ್‌ ಪೌಂಡ್‌, ಸಾರಿಗೆ ವೆಚ್ಚ ಫೆಲೋಶಿಪ್‌ ಮೂಲಕ ದೊರೆಯುತ್ತದೆ. ಅದರ ಜತೆಗೆ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ದೊರೆಯುತ್ತದೆ.
ಕೊನೆಯ ದಿನ: 2019ರ ಏಪ್ರಿಲ್‌ 29
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ
ಮಾಹಿತಿಗೆ: http://www.b4s.in/praja/SRT6

***

ವರ್ಗ: ಮೆರಿಟ್‌ ಆಧಾರಿತ
ವಿದ್ಯಾರ್ಥಿ ವೇತನ: ಟೆಲ್‌ ಅವಿವ್‌ ಯುನಿವರ್ಸಿಟಿ ಅಂಡರ್‌ ಗ್ರಾಜುಯೆಟ್‌ ಪ್ರೋಗ್ರಾಮ್‌, ಇಸ್ರೆಲ್‌
ವಿವರ: ಇಸ್ರೆಲ್‌ನ ಟೆಲ್‌ ಅವಿವ್‌ ವಿಶ್ವವಿದ್ಯಾಲಯವು ತನ್ನಲ್ಲಿ ಬಿ.ಎಸ್ಸಿ (ಎಲೆಕ್ಟ್ರಿಕಲ್‌) ಮತ್ತು ಎಂಜಿನಿಯರಿಂಗ್ (ಎಲೆಕ್ಟ್ರಾನಿಕ್ಸ್‌) ಕೋರ್ಸ್‌ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್‌ ನೀಡಲಿದೆ.
ಅರ್ಹತೆ: ಅಭ್ಯರ್ಥಿಗಳು 12ನೇ ತರಗತಿಯನ್ನು ಶೇ 75ಕ್ಕೂ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಜತೆಗೆ ಜೆಇಇ ಮುಖ್ಯ ಪರೀಕ್ಷೆಯಲ್ಲಿ 1ರಿಂದ 40 ಸಾವಿರದೊಳಗಿನ ರ್‍ಯಾಂಕ್‌ ಪಡೆದಿರಬೇಕು. ಎಸ್‌ಎಟಿ/ಎಸಿಟಿಯಲ್ಲಿ ಉತ್ತಮ ಅಂಕಗಳಿಸಿರಬೇಕು.
ಸೌಲಭ್ಯ ಮತ್ತು ಆರ್ಥಿಕ ನೆರವು: ಬೋಧನಾ ಶುಲ್ಕದಲ್ಲಿ 10,000 ಅಮೆರಿಕನ್‌ ಡಾಲರ್‌ನಷ್ಟನ್ನು ರಿಯಾಯಿತಿ ಸಿಗುತ್ತದೆ.
ಕೊನೆಯ ದಿನ: 2019ರ ಮೇ 1
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ
ಮಾಹಿತಿಗೆ: http//:www.b4s.in/praja/TAUS

***

ಕೃಪೆ: wwww.buddy4study.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !