ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಮಹಾತ್ಮೆ: ಗಾಜಿಯಾಬಾದ್‌ (ಉತ್ತರಪ್ರದೇಶ)

Published 4 ಏಪ್ರಿಲ್ 2024, 23:37 IST
Last Updated 4 ಏಪ್ರಿಲ್ 2024, 23:37 IST
ಅಕ್ಷರ ಗಾತ್ರ

ಜನರಲ್‌ ವಿ.ಕೆ. ಸಿಂಗ್‌ ಅವರು ಎರಡು ಬಾರಿ ಗೆಲುವಿನ ನಗೆ ಬೀರಿದ್ದ ಉತ್ತರ ಪ್ರದೇಶದ ಗಾಜಿಯಾಬಾದ್‌ ಲೋಕಸಭಾ ಕೇತ್ರದಿಂದ ಬಿಜೆಪಿಯು ಈ ಬಾರಿ ರಾಜ್ಯ ಸಚಿವ ಅತುಲ್‌ ಗರ್ಗ್‌ ಅವರನ್ನು ಸ್ಪರ್ಧೆಗಿಳಿಸಿದೆ. ಗರ್ಗ್‌ ಅವರು ಗಾಜಿಯಾಬಾದ್‌ ವಿಭಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಸ್ಥಳೀಯವಾಗಿಯೂ ಪ್ರಭಾವ ಹೊಂದಿರುವ ಮುಖಂಡರಾಗಿರುವುದರಿಂದ ಗರ್ಗ್ ಅವರ ಗೆಲುವು ನಿಶ್ಚಿತ ಎಂಬ ವಿಶ್ವಾಸದಲ್ಲಿದೆ ಬಿಜೆಪಿ. ಅತುಲ್‌ ಅವರು ಗಾಜಿಯಾಬಾದ್‌ನ ಮೊದಲ ಮೇಯರ್‌ ದಿನೇಶ್‌ಚಂದ್ರ ಗರ್ಗ್‌ ಅವರ ಪುತ್ರ. ಈ ಕ್ಷೇತ್ರದಿಂದ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಡಾಲಿ ಶರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ. ಇವರು ಕೂಡ ಸ್ಥಳೀಯರಾಗಿರುವುದರಿಂದ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಬೆಂಬಲವೂ ಇರುವುದರಿಂದ ಈ ಬಾರಿ ಡಾಲಿ ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಕಾಂಗ್ರೆಸ್‌ನದ್ದು. 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜನರಲ್‌ ವಿ.ಕೆ. ಸಿಂಗ್‌ ಅವರು 5,01,500 ಮತಗಳ ಅಂತರದಿಂದ ಎಸ್‌ಪಿ ಅಭ್ಯರ್ಥಿ ಸುರೇಶ್‌ ಬನ್ಸಾಲ್‌ ಅವರನ್ನು ಸೋಲಿಸಿದ್ದರು. ಡಾಲಿ ಅವರನ್ನು ಕಳೆದ ಚುನಾಣೆಯಲ್ಲೂ ಕಾಂಗ್ರೆಸ್‌ ಕಣಕ್ಕಿಳಿಸಿತ್ತು. ಆದರೆ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಡಾಲಿ ಅವರು ಎಐಸಿಸಿಸಿ ಸದಸ್ಯೆಯೂ ಹೌದು. 2009ರಲ್ಲಿ ಬಿಜೆಪಿ ಮುಖಂಡ ರಾಜನಾಥ ಸಿಂಗ್‌ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಬಳಿಕ ಅವರು ಲಖನೌ ಕ್ಷೇತ್ರಕ್ಕೆ ತಮ್ಮ ಸ್ಪರ್ಧಾ ಕಣವನ್ನು ಬದಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT