ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಮಹಾತ್ಮೆ: ಪುದುಚೇರಿ (ಕೇಂದ್ರಾಡಳಿತ ಪ್ರದೇಶ)

Published 1 ಏಪ್ರಿಲ್ 2024, 23:56 IST
Last Updated 1 ಏಪ್ರಿಲ್ 2024, 23:56 IST
ಅಕ್ಷರ ಗಾತ್ರ

ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಏಕೈಕ ಲೋಕಸಭಾ ಸ್ಥಾನಕ್ಕೆ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಸಂಸದ ಕಾಂಗ್ರೆಸ್‌ನ ವಿ.ವೈತಿಲಿಂಗಂ ಅವರು ಮರು ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಬಿಜೆಪಿಯು ಪುದುಚೇರಿ ಗೃಹ ಸಚಿವ ಎ.ನಮಶಿವಾಯಂ ಅವರನ್ನು ಅಖಾಡಕ್ಕಿಳಿಸಿದೆ. ಎಐಎಡಿಎಂಕೆಯು ಜಿ.ತಮಿಳ್‌ವೆಂದನ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. 2019ರ ಚುನಾವಣೆಯಲ್ಲಿ ವೈತಿಲಿಂಗಂ 4,44,981 ಮತಗಳನ್ನು ಪಡೆದು ಗೆದ್ದಿದ್ದರು. ಅವರು ಸಮೀಪದ ಪ್ರತಿಸ್ಪರ್ಧಿಗಿಂತ ಎರಡು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಈ ಬಾರಿ ಕಾಂಗ್ರೆಸ್– ಡಿಎಂಕೆ ಮೈತ್ರಿ ಅಭ್ಯರ್ಥಿಯಾಗಿರುವ ಅವರು ಗೆಲುವಿನ ಅಂತರವನ್ನು ಹೆಚ್ಚಿಸುವ ವಿಶ್ವಾಸ ಹೊಂದಿದ್ದಾರೆ. ಆದರೆ ಬಿಜೆಪಿ ಮತ್ತು ಎಐಎಡಿಎಂಕೆಯಿಂದ ಅವರಿಗೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. ಕಾಂಗ್ರೆಸ್‌ನ ಎಂ.ಒ.ಎಚ್‌.ಫಾರೂಕ್‌ ಅವರು 1991 ಮತ್ತು 1996 ರಲ್ಲಿ ಸತತವಾಗಿ ಗೆದ್ದ ಬಳಿಕ ಈ ಕ್ಷೇತ್ರದಲ್ಲಿ ಯಾರೂ ಸತತ ಗೆಲುವು ಸಾಧಿಸಿಲ್ಲ. 2009ರಲ್ಲಿ ಕಾಂಗ್ರೆಸ್‌ನ ವಿ.ನಾರಾಯಣಸ್ವಾಮಿ ಮತ್ತು 2014 ರಲ್ಲಿ ಎಐಎನ್‌ಆರ್‌ಸಿಯ ಆರ್‌.ರಾಧಾಕೃಷ್ಣನ್‌ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಅಭ್ಯರ್ಥಿ ನಮಶಿವಾಯಂ ಅವರು ವಿಧಾನಸಭಾ ಚುನಾವಣೆಯಲ್ಲಿ ಮನ್ನಡಿಪೇಟ್ ಕ್ಷೇತ್ರದಿಂದ ಗೆದ್ದಿದ್ದರು. ಪುದುಚೇರಿಯಲ್ಲಿ ಏಪ್ರಿಲ್‌ 19 ರಂದು ಮತದಾನ ನಡೆಯಲಿದ್ದು, ಪಕ್ಷೇತರರು ಸೇರಿದಂತೆ ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಮೂವರು ಮಹಿಳಾ ಅಭ್ಯರ್ಥಿಗಳು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT