ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಪರಿಚಯ: ದಕ್ಷಿಣ ಗೋವಾ

Published 27 ಏಪ್ರಿಲ್ 2024, 23:16 IST
Last Updated 27 ಏಪ್ರಿಲ್ 2024, 23:16 IST
ಅಕ್ಷರ ಗಾತ್ರ

ಮನಸೆಳೆಯುವ ಸಮುದ್ರ ದಂಡೆ, ಪುರಾತನ ಚರ್ಚ್‌ ಮತ್ತು ದೇಗುಲಗಳ ನೆಲೆವೀಡಾಗಿರುವ ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ. ಕಾಂಗ್ರೆಸ್‌ ಪಕ್ಷವು ವಿರಿಯಾಟೊ ಫರ್ನಾಂಡಿಸ್‌ ಅವರನ್ನು ಅಖಾಡಕ್ಕಿಳಿಸಿದರೆ, ಬಿಜೆಪಿಯು ಪಲ್ಲವಿ ಡೆಂಪೋ ಅವರನ್ನು ಕಣಕ್ಕಿಳಿಸಿದೆ.

ಇವರಿಬ್ಬರಿಗೆ ಪೈಪೋಟಿ ನೀಡಲು ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಶ್ವೇತಾ ಗಾಂವ್ಕರ್‌ ಅವರನ್ನು ಹಾಗೂ ರೆವಲ್ಯುಷನರಿ ಗೋವನ್ಸ್ ಪಕ್ಷವು (ಆರ್‌ಜಿಪಿ) ರಾಬರ್ಟ್ ಪೆರೇರಾ ಅವರನ್ನು ಅಭ್ಯರ್ಥಿಯಾಗಿಸಿವೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಫ್ರಾನ್ಸಿಸ್ಕೊ ಸಾರ್ಡಿನ್ಹಾ ಅವರು 9,755 ಮತಗಳ ಅಂತರದಿಂದ ಬಿಜೆಪಿಯ ನರೇಂದ್ರ ಕೇಶವ ಸವೈಕರ್‌ ಅವರನ್ನು ಪರಾಭವಗೊಳಿಸಿದ್ದರು. ಪಲ್ಲವಿ ಡೆಂಪೋ ಅವರ ಪತಿ ಶ್ರೀನಿವಾಸ ಡೆಂಪೋ ಅವರು ಗೋವಾದ ಪ್ರಸಿದ್ಧ ಉದ್ಯಮಿಯಾಗಿದ್ದಾರೆ.

ಪಲ್ಲವಿ ಅವರ ಕುಟುಂಬವು ಸರ್ಕಾರಿ ಪ್ರೌಢಶಾಲೆಗಳನ್ನು ದತ್ತು ಪಡೆದು ಅಲ್ಲಿನ ವಿದ್ಯಾರ್ಥಿನಿಯರಿಗೆ ವೃತ್ತಿಪರ ತರಬೇತಿ ನೀಡುತ್ತಿದೆ. ಪಲ್ಲವಿ ಅವರು ಇಂಡೊ–ಜರ್ಮನ್‌ ಎಜುಕೇಶನಲ್‌ ಆ್ಯಂಡ್‌ ಕಲ್ಚರಲ್‌ ಸೊಸೈಟಿಯ ಅಧ್ಯಕ್ಷೆಯೂ ಹೌದು. ವಿರಿಯಾಟೊ ಅವರು ಈಚೆಗೆ ಸಂವಿಧಾನದ ಕುರಿತು ನೀಡಿದ್ದ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಅವರನ್ನು ಟೀಕಿಸಿದ್ದರು. ನೌಕಾಪಡೆಯ ಮಾಜಿ ಅಧಿಕಾರಿಯಾಗಿರುವ ಇವರು 2022ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT