ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ಹೈದರಾಬಾದ್‌

Published 20 ಏಪ್ರಿಲ್ 2024, 21:05 IST
Last Updated 20 ಏಪ್ರಿಲ್ 2024, 21:05 IST
ಅಕ್ಷರ ಗಾತ್ರ

ಅಸಾದುದ್ದೀನ್‌ ಒವೈಸಿ
(ಎಐಎಂಐಎಂ)

ಆಲ್‌ ಇಂಡಿಯಾ ಮಜ್ಲಿಸ್‌ ಎ ಇತ್ತೆಹಾದ್‌ ಉಲ್‌ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ಭದ್ರಕೋಟೆಯಾಗಿರುವ ತೆಲಂಗಾಣದ ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ ಅವರೇ ಕಣಕ್ಕಿಳಿದಿದ್ದಾರೆ. 2019ರ ಚುನಾವಣೆಯಲ್ಲಿ ಒವೈಸಿ ಅವರು 2,82,186 ಮತಗಳ ಅಂತರದಿಂದ ಬಿಜೆಪಿಯ ಭಗವಂತ ರಾವ್‌ ಅವರನ್ನು ಪರಾಭವಗೊಳಿಸಿದ್ದರು. 1994ರಲ್ಲಿ ಆಂಧ್ರಪ್ರದೇಶದ ಮೀನಾರ್‌ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುವ ಮೂಲಕ ರಾಜಕೀಯ ಪ್ರವೇಶಿಸಿದ್ದ ಒವೈಸಿ ಅವರು, 2004ರಿಂದಲೂ ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಅದಕ್ಕೂ ಮೊದಲು ಇವರ ತಂದೆ ಸುಲ್ತಾನ್‌ ಸಲಾಹುದ್ದೀನ್ ಒವೈಸಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಭಾರತ ರಾಷ್ಟ್ರ ಸಮಿತಿಯು (ಬಿಆರ್‌ಎಸ್‌) ಗದ್ದಂ ಶ್ರೀನಿವಾಸ್‌ ಯಾದವ್‌ ಅವರನ್ನು ಇಲ್ಲಿಂದ ಕಣಕ್ಕಿಳಿಸಿದೆ.

..............................

ಮಾಧವಿ ಲತಾ
(ಬಿಜೆಪಿ)

ಅಸಾದುದ್ದೀನ್‌ ಒವೈಸಿ ಅವರನ್ನು ಮಣಿಸಲು ಬಿಜೆಪಿಯು ಹಿಂದುತ್ವದ ಪ್ರಬಲ ಪ್ರತಿಪಾದಕಿ ಮಾಧವಿ ಲತಾ ಅವರನ್ನು ಅಖಾಡಕ್ಕಿಳಿಸಿದೆ. ರಾಜಕೀಯದಲ್ಲಿ ಅನನುಭವಿಯಾದರೂ ಧಾರ್ಮಿಕ ಭಾಷಣಗಳ ಮೂಲಕ ಇವರು ರಾಜ್ಯ ಮಟ್ಟದಲ್ಲಿ ಗಮನ ಸೆಳೆದವರು. ತ್ರಿವಳಿ ತಲಾಖ್‌ ವಿರುದ್ಧ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಹೈದರಾಬಾದ್‌ನ ವಿರಿಂಚಿ ಆಸ್ಪತ್ರೆಯ ಅಧ್ಯಕ್ಷೆಯಾಗಿರುವ ಇವರು ಭರತನಾಟ್ಯ ಕಲಾವಿದೆಯೂ ಹೌದು. ಮಾಧವಿ ಅವರನ್ನು ಬಿಜೆಪಿಯು ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಅವರಿಗೆ ಕೇಂದ್ರ ಸರ್ಕಾರವು ವೈ–ಪ್ಲಸ್‌ ಭದ್ರತೆ ನೀಡಿತ್ತು. ಮಾಧವಿ ಲತಾ ಅವರು ಮಸೀದಿಯತ್ತ ಬಾಣ ಬಿಡುತ್ತಿರುವಂತೆ ಸನ್ನೆ ಮಾಡಿದ ವಿಡಿಯೊ ಈಚೆಗೆ ಬಹಿರಂಗವಾಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಕ್ಷೇತ್ರದಲ್ಲಿ ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯು ಎರಡನೇ ಸ್ಥಾನದಲ್ಲಿತ್ತು.

ಮಾಧವಿ ಲತಾ
ಮಾಧವಿ ಲತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT