ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ಗುನಾ (ಮಧ್ಯಪ್ರದೇಶ)

Published 29 ಮಾರ್ಚ್ 2024, 20:02 IST
Last Updated 29 ಮಾರ್ಚ್ 2024, 20:02 IST
ಅಕ್ಷರ ಗಾತ್ರ

ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ತಮಗೆ ನಾಲ್ಕು ಬಾರಿ ಜಯ ತಂದುಕೊಟ್ಟಿರುವ ಗುನಾ ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ತಂದೆ ಮಾಧವ್‌ರಾವ್‌ ಸಿಂಧಿಯಾ ಪ್ರತಿನಿಧಿಸಿದ್ದ ಈ ಕ್ಷೇತ್ರವು ಸುರಕ್ಷಿತ ಎಂದು ಭಾವಿಸಿದ್ದ ಅವರಿಗೆ ಕಳೆದ ಚುನಾವಣೆಯಲ್ಲಿ ಅದೃಷ್ಟ ಕೈಕೊಟ್ಟಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರನ್ನು ಬಿಜೆಪಿಯ ಕೃಷ್ಣಪಾಲ್‌ ಸಿಂಗ್‌ ಯಾದವ್ ಭಾರಿ ಅಂತರದಿಂದ ಸೋಲಿಸಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಜ್ಯೋತಿರಾದಿತ್ಯ ಅವರು ಬಿಜೆಪಿ ಪಾಳೆಯದಲ್ಲಿದ್ದಾರೆ. ಆದ್ದರಿಂದಲೇ ಅವರಲ್ಲಿ ಗೆಲುವಿನ ನಿರೀಕ್ಷೆ ಹೆಚ್ಚಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಈ ಕ್ಷೇತ್ರದ ಮತದಾರರು ಪಕ್ಷಾಂತರ ಮಾಡಿ ಬಿಜೆಪಿಗೆ ಜಿಗಿದಿರುವ ಜ್ಯೋತಿರಾದಿತ್ಯ ಅವರ ಕೈ ಹಿಡಿಯುವರೇ ಎಂದು ಕಾದು ನೋಡಬೇಕಾಗಿದೆ.

...............

ರಾವ್‌ ಯಾದವೇಂದ್ರ ಸಿಂಗ್‌ (ಕಾಂಗ್ರೆಸ್‌)

2023ರ ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ರಾವ್‌ ಯಾದವೇಂದ್ರ ಸಿಂಗ್‌ ಅವರನ್ನು ಕಾಂಗ್ರೆಸ್‌, ಗುನಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕಾಂಗ್ರೆಸ್‌ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವವಿದ್ದರೂ, ಜ್ಯೋತಿರಾದಿತ್ಯ ಅವರಂತಹ ಪ್ರಬಲ ಅಭ್ಯರ್ಥಿಯನ್ನು ಮಣಿಸಲು ಕಮಲ ಪಾಳಯದಿಂದ ಬಂದಿರುವ ಅಭ್ಯರ್ಥಿಯನ್ನೇ ಅಖಾಡಕ್ಕಿಳಿಸುವ ಮೂಲಕ ಕಣವನ್ನು ರಂಗೇರಿಸಿದೆ. ಯಾದವೇಂದ್ರ ಅವರ ತಂದೆ ದೇಶರಾಜ್‌ ಸಿಂಗ್‌ ಯಾದವ್‌ ಅವರು ಬಿಜೆಪಿಯಲ್ಲಿ ಶಾಸಕರಾಗಿದ್ದವರು. ಸದ್ಯ ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಯಾದವೇಂದ್ರ ಅವರನ್ನು ಇಂತಹ ಪ್ರತಿಷ್ಠಿತ ಕ್ಷೇತ್ರದಿಂದ ಕಾಂಗ್ರೆಸ್‌ ಕಣಕ್ಕಿಳಿಸಿರುವುದರ ಹಿಂದಿನ ಲೆಕ್ಕಾಚಾರವೂ ಇದೇ ಆಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಂಗಾವಲಿ ಕ್ಷೇತ್ರದಿಂದ ಸ್ಪರ್ಧಿಸಿ ಇವರು ಸೋತಿದ್ದರು. ಈ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜ್ಯೋತಿರಾದಿತ್ಯ ಅವರ ವಿರುದ್ಧ ದೇಶರಾಜ್‌ ಸಿಂಗ್‌ ಅವರು ಎರಡು ಬಾರಿ ಸೆಣಸಿ ಪರಾಭವಗೊಂಡಿದ್ದರು.

ರಾವ್‌ ಯಾದವೇಂದ್ರ ಸಿಂಗ್‌
ರಾವ್‌ ಯಾದವೇಂದ್ರ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT