ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು: ಹೇಮಮಾಲಿನಿ

Published 27 ಮಾರ್ಚ್ 2024, 20:39 IST
Last Updated 27 ಮಾರ್ಚ್ 2024, 20:39 IST
ಅಕ್ಷರ ಗಾತ್ರ
ನಾನು ಅನುಭವೀ ರಾಜಕಾರಣಿಯಲ್ಲ. ಆದರೆ ಈ ಸ್ಥಾನದಲ್ಲಿರುವುದರಿಂದ ನನಗೆ ಬೇಕಾದ ಕೆಲಸಗಳನ್ನು ಮಾಡಬಲ್ಲೆ. ನಾನು ಕೃಷ್ಣನ ಭಕ್ತೆ. ಮಥುರಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ. ಇಲ್ಲಿ ಸೇವೆ ಮಾಡುವಂತೆ ಕೃಷ್ಣದೇವರು ಬಯಸಿದ್ದಾರೆ. ಆ ಕಾರಣಕ್ಕಾಗಿ ಇಲ್ಲಿದ್ದೇನೆ. ರಾಜಕೀಯಕ್ಕೆ ಧುಮುಕಲು ನನಗೆ ಇಷ್ಟ ಇರಲಿಲ್ಲ. ಅದು ಕೂಡ ದೇವರ ಇಚ್ಛೆ ಎಂದು ನಂಬಿದ್ದೇನೆ. ಮೂರನೇ ಬಾರಿ ಟಿಕೆಟ್‌ ನೀಡಿರುವುದಕ್ಕೆ ಬಿಜೆಪಿಗೆ ಆಭಾರಿಯಾಗಿದ್ದೇನೆ
ಹೇಮಮಾಲಿನಿ, ಸಂಸದೆ, ಬಿಜೆಪಿ ಅಭ್ಯರ್ಥಿ
ಈ ಬಾರಿಯ ಲೋಕಸಭಾ ಚುನಾವಣೆಯು ದೇಶಕ್ಕೆ ದೊಡ್ಡ ಸವಾಲಾಗಿದೆ. ಇದು ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಸಂವಿಧಾನ ಉಳಿಸಲು ಹಾಗೂ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದಲೂ ಈ ಚುನಾವಣೆಯು ಮಹತ್ವದ್ದಾಗಿದೆ. ಶಾಸಕರನ್ನು ಖರೀದಿಸುವ ದರೋಡೆಕೋರರು ದೇಶದೊಳಗೆ ಕುಳಿತಿದ್ದಾರೆ. ಅವರು ದೇಶವನ್ನು ದೋಚುತಿದ್ದಾರೆ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ
--ಅಶೋಕ್‌ ಗೆಹಲೋತ್‌, ಕಾಂಗ್ರೆಸ್‌ ಮುಖಂಡ
ಅಶೋಕ್‌ ಗೆಹಲೋತ್‌
ಅಶೋಕ್‌ ಗೆಹಲೋತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT