ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖಾಮುಖಿ: ಸಿಕಂದರಾಬಾದ್ (ತೆಲಂಗಾಣ)

Published 26 ಮಾರ್ಚ್ 2024, 19:31 IST
Last Updated 26 ಮಾರ್ಚ್ 2024, 19:31 IST
ಅಕ್ಷರ ಗಾತ್ರ

ಜಿ.ಕಿಶನ್‌ ರೆಡ್ಡಿ(ಬಿಜೆಪಿ)

ಕೇಂದ್ರ ಸಚಿವ ಗಂಗಾಪುರಂ ಕಿಶನ್‌ ರೆಡ್ಡಿ ಅವರು ಸಿಕಂದರಾಬಾದ್‌ ಲೋಕಸಭಾ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. 2019ರ ಚುನಾವಣೆಯಲ್ಲಿ ಅವರು 62,144 ಮತಗಳ ಅಂತರದ ಗೆಲುವಿನೊಂದಿಗೆ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಹಿಂದೆ ಮೂರು ಬಾರಿ ಶಾಸಕರಾಗಿದ್ದ ಅವರು ತೆಲಂಗಾಣ ಮತ್ತು ಆಂಧ್ರ ಪ್ರದೇಶ ವಿಧಾನಸಭೆಗಳಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ರಂಗಾರೆಡ್ಡಿ ಜಿಲ್ಲೆಯ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದ ಅವರು, ಜನತಾ ಪಾರ್ಟಿಯಿಂದ ರಾಜಕೀಯ ಜೀವನ ಆರಂಭಿಸಿದ್ದರು. 1980 ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದ ಕಿಶನ್, ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿ ಕೇಂದ್ರ ಸಚಿವರೂ ಆದರು. ಪ್ರಧಾನಿ ಮೋದಿ ಅವರ ಅಲೆಯಲ್ಲಿ ಗೆಲುವಿನ ದಡ ಸೇರುವ ವಿಶ್ವಾಸವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕಿಶನ್‌ ಹೊಂದಿದ್ದಾರೆ. 

ಪದ್ಮರಾವ್ ಗೌಡ್(ಬಿಆರ್‌ಎಸ್‌ )

ಬಿಆರ್‌ಎಸ್‌ ಪಕ್ಷವು ಸಿಕಂದರಾಬಾದ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮಾಜಿ ಸಚಿವ ಪದ್ಮರಾವ್‌ ಗೌಡ್ ಅವರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧೆಗಿಳಿಸಿದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಏಳು ಸ್ಥಾನಗಳಲ್ಲಿ ಆರರಲ್ಲೂ ಬಿಆರ್‌ಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಳ್ಳುವ ಉದ್ದೇಶದಿಂದ ಬಿಆರ್‌ಎಸ್‌ ವರಿಷ್ಠ ಕೆ.ಚಂದ್ರಶೇಖರ ರಾವ್ ಅವರು, ಪದ್ಮರಾವ್‌ ಅವರನ್ನು ಕಣಕ್ಕಿಳಿಸಿದ್ದಾರೆ. ಆದರೆ ಈ ಕ್ಷೇತ್ರವನ್ನು ಬಿಆರ್‌ಎಸ್‌ ಒಮ್ಮೆಯೂ ಗೆದ್ದಿಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಸಿಕಂದರಾಬಾದ್‌ ಕ್ಷೇತ್ರದಲ್ಲಿ ಆ ಬಳಿಕ ಬಿಜೆಪಿ ತನ್ನ ಬಲ ವೃದ್ಧಿಸಿಕೊಂಡಿದೆ. ಕಾರ್ಪೊರೇಟರ್‌ ಆಗಿ ರಾಜಕೀಯ ಜೀವನ ಆರಂಭಿಸಿದ್ದ ಪದ್ಮರಾವ್‌ ಅವರು 2004 ರಲ್ಲಿ ಸಿಕಂದರಾಬಾದ್‌ ಶಾಸಕರಾಗಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 

ಪದ್ಮರಾವ್ ಗೌಡ್
ಪದ್ಮರಾವ್ ಗೌಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT