ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿಯ ಚುನಾವಣೆಯು ಸಂವಿಧಾನವನ್ನು ರಕ್ಷಿಸುವ ಹೋರಾಟ: ರಾಹುಲ್‌ ಗಾಂಧಿ

Published 23 ಮೇ 2024, 10:47 IST
Last Updated 23 ಮೇ 2024, 10:47 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಯಾವಾಗಲೂ ಸಂವಿಧಾನವನ್ನು ಕಿತ್ತೊಗೆಯಲು ಬಯಸುತ್ತದೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯು ಅದನ್ನು ರಕ್ಷಿಸುವ ಹೋರಾಟವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರತಿಪಾದಿಸಿದರು.

ಈಶಾನ್ಯ ದೆಹಲಿಯ ದಿಲ್‌ಶದ್‌ ಗಾರ್ಡ್‌ನಲ್ಲಿ ಪಕ್ಷದ ಅಭ್ಯರ್ಥಿ ಕನ್ಹಯ್ಯ ಕುಮಾರ್ ಪರ ಪ್ರಚಾರ ನಡೆಸಿ ರಾಹುಲ್‌ ಗಾಂಧಿ ಗುರುವಾರ ಮಾತನಾಡಿದರು.

‘ಬಿಜೆಪಿಯವರು ಭಾರತದ ಸಂವಿಧಾನವನ್ನಾಗಲೀ ಅಥವಾ ಭಾರತದ ಧ್ವಜವನ್ನಾಗಲೀ ಎಂದಿಗೂ ಸ್ವೀಕರಿಸಲಿಲ್ಲ. ಭಾರತದ ಸಂವಿಧಾನವನ್ನು ರಕ್ಷಣೆ ಮಾಡುವುದು ಈ ಚುನಾವಣೆಯ ಹೋರಾಟ. ಸಂವಿಧಾನ ಎನ್ನುವುದು ಕೇವಲ ಒಂದು ಪುಸ್ತಕವಲ್ಲ. ಗಾಂಧಿ, ಅಂಬೇಡ್ಕರ್ ಮತ್ತು ನೆಹರೂಜಿಯವರ ಸಾವಿರಾರು ವರ್ಷಗಳ ಸೈದ್ಧಾಂತಿಕ ಪರಂಪರೆಯನ್ನು ಹೊಂದಿದೆ. ಆದರೆ ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಾರೆ ಎಂಬುದನ್ನು ಈ ಚುನಾವಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಸಂವಿಧಾನವನ್ನು ಬದಲಾಯಿಸಲು ನಿಮಗೆ ಧೈರ್ಯವಿಲ್ಲ ಎಂದು ನಾನು ಬಿಜೆಪಿಗೆ ಹೇಳಲು ಬಯಸುತ್ತೇನೆ ಒಂದು ವೇಳೆ ಸಂವಿಧಾನ ಬದಲಾಯಿಸುವ ಧೈರ್ಯ ಮಾಡಿದರೆ ನಮ್ಮನ್ನು ಮತ್ತು ದೇಶದ ಕೋಟ್ಯಂತರ ಜನರನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT