ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ:ದಾಖಲೆಯ ಶೇ.76.53 ಮತದಾನ

ಶಿರಸಿಯಲ್ಲಿ ಗರಿಷ್ಠ, ಕಾರವಾರದಲ್ಲಿ ಕಡಿಮೆ ಮತದಾನ
Published 8 ಮೇ 2024, 4:12 IST
Last Updated 8 ಮೇ 2024, 4:12 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 12.56 ಲಕ್ಷ ಮತದಾರರು ಮತ ಚಲಾಯಿಸುವುದರೊಂದಿಗೆ ದಾಖಲೆಯ ಶೇ.76.53 ರಷ್ಟು ಮತದಾನವಾಗಿದೆ.

ಕ್ಷೇತ್ರಕ್ಕೆ ಈವರೆಗೆ ಒಟ್ಟು 18 ಬಾರಿ ಲೋಕಸಭೆ ಚುನಾವಣೆ ನಡೆದಿದ್ದು ಈ ಬಾರಿಯ ಮತದಾನ ಪ್ರಮಾಣ ಸಾರ್ವಕಾಲಿಕ ದಾಖಲೆಯಾಗಿದೆ. 2019ರ ಚುನಾವಣೆಯಲ್ಲಿ 74.16 ರಷ್ಟು ಮತದಾನವಾಗಿದ್ದು ಈ ಹಿಂದಿನ ಅತಿ ಗರಿಷ್ಠ ಮತದಾನ ಪ್ರಮಾಣ ಎನಿಸಿತ್ತು.

ಉತ್ತರ ಕನ್ನಡ ಜಿಲ್ಲೆಯ ಆರು ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 8,23,604 ಪುರುಷರು, 8,17,536 ಮಹಿಳೆಯರು, 16 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 16,41,156 ಮತದಾರರಿದ್ದರು. ಈ ಪೈಕಿ 6,33,630 ಪುರುಷರು, 6,22,392 ಮಹಿಳೆಯರು, ಐದು ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಸೇರಿ 12,56,027 ಮತದಾರರು ಮತದಾನದ ಹಕ್ಕು ಚಲಾಯಿಸಿದ್ದಾರೆ.

ಚುನಾವಣಾ ಆಯೋಗವು ಮಂಗಳವಾರ ರಾತ್ರಿ ಪ್ರಕಟಿಸಿದ್ದ ಮಾಹಿತಿಯಲ್ಲಿ ಶೆ.73.52 ರಷ್ಟು ಮತದಾನವಾಗಿದ್ದಾಗಿ ಘೋಷಿಸಿತ್ತು. ಆದರೆ, ಇದು ಪ್ರಾಥಮಿಕ ಮಾಹಿತಿ ಆಗಿದೆಯೇ ಹೊರತು ನಿಖರ ಮಾಹಿತಿ ಆಗಿರಲಿಲ್ಲ ಎಂದು ತಿಳಿಸಲಾಗಿತ್ತು. ತಡರಾತ್ರಿವರೆಗೂ ಡಿಮಸ್ಟರಿಂಗ್ ಕಾರ್ಯಗಳು ನಡೆದವು. ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಿಂದ ವಿದ್ಯುನ್ಮಾನ ಮತಯಂತ್ರಗಳು, ವಿವಿಪ್ಯಾಟ್, ಬ್ಯಾಲೆಟ್ ಯುನಿಟ್‍ಗಳು ಬುಧವಾರ ಬೆಳಿಗ್ಗೆ ಕುಮಟಾದ ಡಾ.ಎ.ವಿ.ಬಾಳಿಗಾ ಕಾಲೇಜಿನ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿ ತಲುಪಿದವು.

‘ಎಂಟೂ ಕ್ಷೇತ್ರಗಳ ವ್ಯಾಪ್ತಿಯ ಎಲ್ಲ ಮತಗಟ್ಟೆ ಅಧಿಕಾರಿಗಳಿಂದ ಖಚಿತ ಮಾಹಿತಿ ಪಡೆದ ಬಳಿಕ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತದಾನದ ಪ್ರಮಾಣ ಎಷ್ಟು ಎಂಬುದು ಬುಧವಾರ ಬೆಳಗಿನ ಜಾವ ಅಂತಿಮವಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

–––––––––––

ಅಂಕಿ–ಅಂಶ

ವಿಧಾನಸಭಾ ಕ್ಷೇತ್ರ;ಚಲಾವಣೆಯಾದ ಮತ;ಶೇಕಡಾವಾರು ಪ್ರಮಾಣ

ಖಾನಾಪುರ;1,62,065;73.85

ಕಿತ್ತೂರ;1,52,272;76.27

ಹಳಿಯಾಳ;1,40,971;75.91

ಕಾರವಾರ;1,65,599;73.63

ಕುಮಟಾ;1,47,307;76.93

ಭಟ್ಕಳ;1,73,071;76.00

ಶಿರಸಿ;1,64,905;80.48

ಯಲ್ಲಾಪುರ;1,49,337;79.96

ಒಟ್ಟು;12,56,027;76.53

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT